ಡೆಡ್ಲಿ ಪ್ಯಾಂಥರ್ಸ್ ರಿಜಿಸ್ಟರ್ಡ್ ಕೊಡಿಯಾಲ್ ನೇತೃತ್ವದಲ್ಲಿ ಜಿ ಎಸ್ ಬಿ ಸಮಾಜ ಬಾಂಧವರಿಗಾಗಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಡಿಸೆಂಬರ್ 22 ಶುಕ್ರವಾರ, 23 ಶನಿವಾರ ಮತ್ತು 24 ಆದಿತ್ಯವಾರದಂದು ಮಂಗಳೂರು ಊರ್ವ ಮೈದಾನದಲ್ಲಿ ನಡೆಯಲಿದೆ.
ಸತತ ಮೂರು ದಿನಗಳ ಕಾಲ ಹಗಲು ರಾತ್ರಿಯಲ್ಲಿ ನಡೆಯುವ 16 ತಂಡಗಳ ನಡುವಿನ ಈ ಪಂದ್ಯಾವಳಿ ಹರಾಜು ಆಧಾರಿತ ಓವರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಆಗಿರುತ್ತದೆ. ಅತ್ಯುತ್ತಮ ಗುಣಮಟ್ಟದಲ್ಲಿ ಆಯೋಜಿಸಲಾಗುವ ಈ ಪಂದ್ಯಾವಳಿ ಸಮಾಜದ ಕ್ರಿಕೆಟ್ ಆಟಗಾರರ ಬಾಂಧವ್ಯ ಹಾಗೂ ಕ್ರೀಡಾ ಸ್ಫೂರ್ತಿಯ ಹಲವಾರು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲಿದೆ.
ಪ್ಯಾಂಥರ್ಸ್ ಸೂಪರ್ ಲೀಗ್ ಸೀಸನ್ 2 ರಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಈ ಕೆಳಗಿನಂತಿವೆ.
1. ವೀರ ವೆಂಕಟೇಶ ವಾರಿಯರ್ಸ್
2. ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್
3. ಸಪ್ತಮಿ ವಾರಿಯರ್ಸ್
4. ಮಲ್ಪೆ ಯುನೈಟೆಡ್
5. ಆರ್ ಕೆ ಸ್ಟ್ರೈಕರ್ಸ್
6. ರೈಸಿಂಗ್ ಸ್ಟಾರ್ಸ್ ಮಂಗಳೂರು
7. ಟೀಮ್ ಮಂಗಳಾಪುರ
8.ಕೊಡಿಯಾಲ್ ಸೂಪರ್ ಕಿಂಗ್ಸ್
9. ಎಂಜಾಯ್ ಟೈಟಾನ್ಸ್
10.ಕಿಂಗ್ಸ್ ಇಲೆವೆನ್ ಉಳ್ಳಾಲ
11. ಟಿ ಸಿ ಸ್ಕಾರ್ಚರ್ಸ್
12.ವೀರಾಂಜನೇಯ ಕ್ರಿಕೆಟರ್ಸ್ ಕಾಪು
13.ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು
14. ಆಶ್ರಯ ಯುನೈಟೆಡ್
15.ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
16. ಗೋಲ್ಡನ್ ಗರುಡಾಸ್ ಗೋಶ್ರೀಪುರಂ
ಆಟಗಾರರ ಆಯ್ಕೆ ಪ್ರಕ್ರಿಯೆ ಬಿಡ್ಡಿಂಗ್ ಮುಖಾಂತರ ಆಯಾ ತಂಡದ ನಾಯಕರು ಹಾಗೂ ಮಾಲಕರ ಸಮ್ಮುಖದಲ್ಲಿ ನಡೆಸಲಾಗುವುದು. ಜಿ ಎಸ್ ಬಿ ಸಮಾಜಕ್ಕೆ ಸೇರಿದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿರುವ ಈ ಪಂದ್ಯಾಕೂಟದಲ್ಲಿ, ಓರ್ವ ಅಟಗಾರನನ್ನು ಐಕಾನ್ ಆಟಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದ 16 ತಂಡಗಳು ಭಾಗವಹಿಸುತ್ತಿದ್ದು, ಪ್ರಥಮ ವಿಜೇತ ತಂಡ ರೂ. 1,00,001ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನಿ ರೂ. 50,001 ನಗದು ಮತ್ತು ಶಾಶ್ವತ ಫಲಕ ಪಡೆಯಲಿದೆ. ತೃತೀಯ ಸ್ಥಾನ ಪಡೆದುಕೊಳ್ಳುವ ತಂಡಕ್ಕೂ ಕೂಡ ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಇವಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ,ಸರಣಿ ಶ್ರೇಷ್ಠ ಪ್ರಶಸ್ತಿ, ಪಂದ್ಯಾಕೂಟದ ಅತ್ಯುತ್ತಮ ದಾಂಡಿಗ ಹಾಗೂ ಅತ್ಯುತ್ತಮ ಎಸೆತಗಾರ ಪುರಸ್ಕತರಿಗೆ ಪ್ರಶಸ್ತಿ ದೊರಕಲಿದೆ.
ನೆಮ್ಮದಿಯ ವಾತಾವರಣ ಹಾಗೂ ಶಾಂತಿ ಸಹಬಾಳ್ವೆಗೆ ಸಮಾಜ ಭಾಂಧವರನ್ನು ಒಗ್ಗೂಡಿಸಲು ಕ್ರಿಕೆಟ್ ಒಂದು ಉತ್ತಮ ಕ್ರೀಡೆ . ಈ ಮೂಲಕ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕೂಡ ಪ್ಯಾಂಥರ್ಸ್ ಸೂಪರ್ ಲೀಗ್ ಕ್ರಿಕೆಟ್ ಸಹಕಾರಿಯಾಗಲಿದೆ.
-ಸುರೇಶ್ ಭಟ್ ಮುಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ
ಮೊ: 98454 83433
( ನೇರ ಪ್ರಸಾರಕ್ಕಾಗಿ ನಮ್ಮ ಸ್ಪೋರ್ಟ್ಸ್ ಕನ್ನಡ ಚಾನಲನ್ನು ಸಂಪರ್ಕಿಸಿ : 6363022576-9632178537 )