ಕುಡ್ಲ ಚಾಲೆಂಜರ್ಸ್ ದುಬೈ ಇವರು ಕುಡ್ಲ ಬೇ ರೆಸ್ಟೋರೆಂಟ್ ಇವರ ಸಹಭಾಗಿತ್ವದಲ್ಲಿ ದುಬೈನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಬ್ಲೂ ಫೋರ್ಸ್ ಮಂಗಳೂರು ತಂಡ ದ್ವಿತೀಯ ಪ್ರಶಸ್ತಿ ಜಯಿಸಿದೆ.
ರೈನರ್ ಮಾಲೀಕತ್ವದ,ಕಾಪು ಪರಿಸರದ ಪ್ರಸಿದ್ಧ ಆಟಗಾರರಾದ ಫೈಝಲ್ ಕಾಪು ಇವರ ನಿರ್ದೇಶನದ ಬ್ಲೂ ಫೋರ್ಸ್ ತಂಡ ಲೀಗ್ ಹಂತದ ಹೋರಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.ಫೈನಲ್ ನಲ್ಲಿ ಟೀಮ್ ಎಕ್ಸ್ಪರ್ಟ್ ತಂಡದೆದರು ಸೋಲು ಕಂಡು ದ್ವಿತೀಯ ಪ್ರಶಸ್ತಿ ಪಡೆಯಿತು.