ಟೀಮ್ ಮಂಗಳಾಪುರ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಮಂಗಳೂರಿನಲ್ಲಿ ಮಂಗಳಾಪುರ ಟ್ರೋಫಿ 2023 ಎಂಬ ಜಿ ಎಸ್ ಬಿ ಕ್ರಿಕೆಟ್ ಪಂದ್ಯಾಕೂಟ ಅಕ್ಟೋಬರ್ 28 ಮತ್ತು 29ರಂದು ಮಂಗಳೂರಿನ ಊರ್ವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಇದು ಜಿ ಎಸ್ ಬಿ ಗಳ ಹರಾಜು ಆಧಾರಿತ ಪಂದ್ಯಾಕೂಟವಾಗಿದ್ದು 10 ತಂಡಗಳು ಈ ಪಂದ್ಯಾಕೂಟಕ್ಕೆ ತಮ್ಮ ನೊಂದಣಿಯನ್ನು ಮಾಡಿವೆ.
ಮಂಗಳಾಪುರ ಟ್ರೋಫಿ 2023 ಗಾಗಿ ಭಾಗವಹಿಸುವ ತಂಡಗಳ ಹೆಸರುಗಳು ಈ ರೀತಿ ಇವೆ:
1.ಡೆಡ್ಲಿ ಪ್ಯಾಂಥರ್ಸ್ ®️
2.ಸಪ್ತಮಿ ವಾರಿಯರ್ಸ್
3.ಮಂಜುಳೇಶ ಕ್ರಿಕೆಟರ್ಸ್
4. ರೈಸಿಂಗ್ ಸ್ಟಾರ್ಸ್ ಮಂಗಳೂರು
5. ಜಿಎಸ್‌ಬಿ ಗರುಡಾಸ್
6. ಕಾರ್ತಿಕ್ Xl
7. ಆಶ್ರಯ ಯುನೈಟೆಡ್
8. ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
9. ಆರ್ ಕೆ ಸ್ಟ್ರೈಕರ್ಸ್
10.TC ಸ್ಕಾರ್ಚರ್ಸ್
ಜಿ ಎಸ್ ಬಿ ಸಮುದಾಯಕ್ಕೆ ಸೇರಿದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿರುವ ಈ ಪಂದ್ಯಾಕೂಟದಲ್ಲಿ ಆಟಗಾರರ ನೋಂದಣಿಗಳು ಈಗ ತೆರೆದಿವೆ!
ನಾಲ್ಕನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಕೂಟಕ್ಕೆ ಪೂರ್ವ ಸಿದ್ಧತಾ ಕಾರ್ಯಕ್ರಮ ಆಯೋಜಕರು ನಡೆಸುತ್ತಿದ್ದು ಸಮುದಾಯದ ಯುವ ಸಮೂಹವನ್ನು ಒಂದುಗೂಡಿಸಿ ಸಾಗುತ್ತಿರುವ ಕಾರ್ಯ ಅದ್ಭುತವಾಗಿದೆ. ಟೂರ್ನಿ ಯಶಸ್ವಿಯಾಗಲಿ ಎಂಬ ಹಾರೈಕೆ.
ಸುರೇಶ್ ಭಟ್ ಮೂಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ
( ನೇರ ಪ್ರಸಾರಕ್ಕಾಗಿ ನಮ್ಮ ಸ್ಪೋರ್ಟ್ಸ್ ಕನ್ನಡ ಚಾನಲನ್ನು ಸಂಪರ್ಕಿಸಿ : 6363022576-9632178537 )