ಹಾಸನಾಂಬಾ ತಂಡದ ರಾಕೇಶ್(ರಾಕಿ)ಮತ್ತು ರವಿಕುಮಾರ್.ಹೆಚ್ ಇವರ ಸಾರಥ್ಯದಲ್ಲಿ,ಹಾಸನದ ಸರಕಾರಿ ಸೈನ್ಸ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಹಾಸನ ಪ್ರೀಮಿಯರ್ ಲೀಗ್-2022 ಪ್ರಶಸ್ತಿಯನ್ನು ಮ್ಯಾನ್ ಆಫ್ ದಿ ಸ್ಕಾಲರ್ಸ್ ತಂಡ ಗೆದ್ದುಕೊಂಡಿದೆ.
ಹಾಸನ ಜಿಲ್ಲೆಯ ಯುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಆಯೋಜಿಸಲಾದ ಈ ಪಂದ್ಯಾವಳಿಯಲ್ಲಿ ಒಟ್ಟು 12 ಫ್ರಾಂಚೈಸಿಗಳು ಭಾಗವಹಿಸಿದ್ದು,ಅಂತಿಮವಾಗಿ ಫೈನಲ್ ನಲ್ಲಿ ಹಾಸನದ ಮ್ಯಾನ್ ಆಫ್ ದಿ ಸ್ಕಾಲರ್ಸ್ ತಂಡ ,ಪವರ್ ಯುನೈಟೆಡ್ ಹಾಸನವನ್ನು ಮಣಿಸಿ 50 ಸಾವಿರ ನಗದು,ದ್ವಿತೀಯ ಸ್ಥಾನಿ ಪವರ್ ಯುನೈಟೆಡ್ 25 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ತೃತೀಯ ಸ್ಥಾನಿ ಕನ್ನಡಾಂಬಾ ಬಾಳ್ಳುಪೇಟೆ ಮತ್ತು ಚತುರ್ಥ ಸ್ಥಾನಿ ಈಶಾಲ್ ಹಾಸನ ಚಾಲೆಂಜರ್ಸ್ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಫರಾನ್ ಹಾಸನ,ಬೆಸ್ಟ್ ಬೌಲರ್ ಚರಣ್ ಹಾಸನ,ಬೆಸ್ಟ್ ಕೀಪರ್ ಉಮೇಶ್ ಬಾಳ್ಳುಪೇಟೆ,ಬೆಸ್ಟ್ ಫೀಲ್ಡರ್ ಇರ್ಫಾನ್ ಹಾಸನ ಮತ್ತು ಸರಣಿಶ್ರೇಷ್ಟ ಪ್ರಶಸ್ತಿ ಮೀನಾಕ್ಷ ಅರಸೀಕೆರೆ ಸೈಕಲ್ ಉಡುಗೊರೆ ರೂಪದಲ್ಲಿ ಪಡೆದುಕೊಂಡರು.
S.R.B ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರಗೊಂಡಿತು.