ಬೆಂಗಳೂರು : ಕನ್ನಡ ಭಾಷೆ, ಸಂಸ್ಕೃತಿಯ ರಾಯಭಾರಿ ಸಂಸ್ಥೆ ಜೈ ಭುವನೇಶ್ವರಿ ಯುವಕರ ಸಂಘ ಅಂಚೆಪಾಳ್ಯ ಬೆಂಗಳೂರು ಇವರ ಆಶ್ರಯದಲ್ಲಿ, ಹಿರಿಯ ಶ್ರೀನಿವಾಸ್.ಟಿ ಹಾಗೂ ಚಿಕ್ಕಣ್ಣರವರ ದಕ್ಷ ಸಾರಥ್ಯದಲ್ಲಿ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಪಂದ್ಯಾಕೂಟವನ್ನು ದೊಡ್ಮನೆ ಹುಡುಗ D.H.P.L ಖ್ಯಾತಿಯ ಆಕಾಶ್ ಗೌಡರ ಸಾರಥ್ಯದ ಮೈಸೂರು ಮಹಾರಾಜಾಸ್ ತಂಡ ಗೆದ್ದುಕೊಂಡಿತು.
6 ಫ್ರಾಂಚೈಸಿಗಳು ಸ್ಪರ್ಧಿಸಿದ್ದ ಈ ಪಂದ್ಯಾಟದಲ್ಲಿ ಲೀಗ್ ಹಂತದಲ್ಲಿ ಒಂದೊಂದು ತಂಡಗಳು ಪರಸ್ಪರ 5 ಬಾರಿ ಮುಖಾಮುಖಿ ಹೋರಾಟಕ್ಕಿಳಿದಿದ್ದರು. ಅಂತಿಮವಾಗಿ ಮೈಸೂರು ಮಹಾರಾಜಾಸ್,ಕೃಷ್ಣ ದೇವರಾಯ ತಂಡವನ್ನು ಸೋಲಿಸಿ, ಮಯೂರ ಬಾಯ್ಸ್ ತಂಡ ವಿಷ್ಣುವರ್ಧನ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು. ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಯೂರ ತಂಡ 8 ಓವರ್ ನಲ್ಲಿ ನೀಡಿದ 42 ರನ್ ಗಳ ಗುರಿಯನ್ನು ಮೈಸೂರು ಮಜಾರಾಜಾಸ್ ತಂಡ ಕೇವಲ 5.2 ಓವರ್ ಗಳಲ್ಲಿ ಚೇಸ್ ಮಾಡಿ ಚಾಂಪಿಯನ್ ಪಟ್ಟ ಪಡೆಯಿತು.
ಪಂದ್ಯಾಟದ ಬೆಸ್ಟ್ ಬ್ಯಾಟ್ಸ್‌ಮನ್,ಬೆಸ್ಟ್ ಬೌಲರ್ ಮಯೂರ ಬಾಯ್ಸ್ ನ ವರುಣ್ ಹಾಗೂ ಕಿರಣ್ ಪಾಲಾದರೆ,ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಿರಿಯ ಆಟಗಾರ ಶೇಖರ್.ಟಿ(ಚಮಕ್) ಪಡೆದುಕೊಂಡರು.ಮೈಸೂರು ಮಹಾರಾಜಾಸ್ ನ ಹರೀಶ್ ಬೆಸ್ಟ್ ಕ್ಯಾಪ್ಟನ್ ಹಾಗೂ
14 ವರ್ಷ ಪ್ರಾಯದ ಡೇವಿಡ್ ಪಂದ್ಯಾವಳಿಯುದ್ದಕ್ಕೂ ಗಮನಾರ್ಹ ನಿರ್ವಹಣೆ ನೀಡಿ ಭವಿಷ್ಯದ ಭರವಸೆಯ ಆಟಗಾರನಾಗಿ ಮೂಡಿಬಂದರು.
ಪ್ರಮುಖವಾಗಿ ಹಿರಿಯ ಆಟಗಾರರಿಗೆ ಮೀಸಲಾಗಿದ್ದ ಈ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಮೈಸೂರು ಮಹಾರಾಜಾಸ್ ಪರವಾಗಿ ಆಡಿದ ಸ್ಥೂಲ ಕಾಯದ ಫ್ರೆಂಡ್ಸ್ ಬೆಂಗಳೂರಿನ ಮಾಜಿ ಆಟಗಾರ ಬಿ.ಟಿ.ಶ್ರೀನಿವಾಸ್ ರವರ ಅದ್ಭುತ ಕ್ಯಾಚ್ ಹಾಗೂ ಚಮಕ್ ನ ಮಾಜಿ ಆಲ್ ರೌಂಡರ್ ಶೇಖರ್.ಟಿ ಅತ್ಯುತ್ತಮ ನಿರ್ವಹಣೆ ತೋರಿ ಗತಕಾಲದ ಟೆನ್ನಿಸ್ ಕ್ರಿಕೆಟ್ ವೈಭವನ್ನು ಮತ್ತೆ ನೆನಪಿಸಿದರು.
ಅಂಚೆಪಾಳ್ಯದ ವೃತ್ತ ನಿರೀಕ್ಷಕ ಸತ್ಯನಾರಾಯಣ ರವರು ವಿಷ್ಣುವರ್ಧನ ಇಲೆವೆನ್ಸ್ ತಂಡದ ಪರವಾಗಿ ಆಡಿ ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಿದ್ದರು.
ಅಂಚೆಪಾಳ್ಯ ಪ್ರೀಮಿಯರ್ ಲೀಗ್ ನ ಕಳೆದ ಋತುವಿನ ಆವೃತ್ತಿಯ ಚಾಂಪಿಯನ್ ಒಡೆಯರ್ ತಂಡವನ್ನು ಮುನ್ನಡೆಸಿದ್ದ ಟೆನ್ನಿಸ್ ಕ್ರಿಕೆಟ್ ಇತಿಹಾಸದ ದಾಖಲೆಯ ಪಂದ್ಯಾವಳಿ D.H.P.L ಖ್ಯಾತಿಯ ದೊಡ್ಮನೆ ಹುಡುಗ ಆಕಾಶ್ ಗೌಡ ಈ ಬಾರಿ ಮೈಸೂರು ಮಹಾರಾಜಾಸ್ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿ 2 ನೇ ಬಾರಿ ದೊಡ್ಮನೆಗೆ ಟ್ರೋಫಿ ತಂದಿತ್ತಿದ್ದಾರೆ, ರನ್ನರ್ಸ್ ಮಯೂರ ಬಾಯ್ಸ್ ತಂಡವನ್ನು ಗಿರೀಶ್ ಕುಮಾರ್ ರವರು ಮುನ್ನಡೆಸಿದ್ದರು.
ಆರ್.ಕೆ.ಆಚಾರ್ಯ ಕೋಟ