ಮಹಾರಾಷ್ಟ್ರದ ಪುಣೆಯ ಜುನ್ನಾರ್ ನಗರದ ಮೈದಾನದಲ್ಲಿ ನಡೆಯುತ್ತಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ವೇಳೆ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಬ್ಯಾಟ್ಸ್ ಮನ್ ಹೃದಯಾಘಾತದಿಂದ ಸಾವನಪ್ಪಿದ್ದಾರೆ!!!
ಪಂದ್ಯ ನಡೆಯುತ್ತಿದ್ದ ವೇಳೆ ಎಸೆತ ಮುಗಿದ ನಂತರ,ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಅಂಪೈರ್‌ರೊಂದಿಗೆ ಓವರ್‌ನಲ್ಲಿ ಉಳಿದಿರುವ ಎಸೆತಗಳ ಬಗ್ಗೆ ವಿಚಾರಿಸಿದ್ದಾನೆ.ಆ ಕ್ಷಣದಲ್ಲಿಯೇ ದುರದೃಷ್ಟಕರ ಘಟನೆ ನಡೆದಿದೆ.ಕೆಲವೇ ಕ್ಷಣದಲ್ಲಿ ಬ್ಯಾಟ್ಸ್‌ಮನ್ ಪ್ರಜ್ಞೆ ಕಳೆದುಕೊಂಡು ಕ್ರೀಸಿನಲ್ಲೇ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ .ಜುನ್ನಾರ್‌ನ ಕ್ರಿಕೆಟ್ ಮೈದಾನದಲ್ಲಿ ಈ ಘಟನೆ ನಡೆದಿದ್ದು ಹೃದಯಾಘಾತದಿಂದ ಬ್ಯಾಟ್ಸ್‌ಮನ್ ಮೃತಪಟ್ಟಿದ್ದಾರೆಂದು ಎಂದು ವರದಿಯಾಗಿದೆ.