ಕ್ರೀಡೆ ಯುವಕರನ್ನು ಮಾದಕ ವಸ್ತುಗಳಿಂದ ದೂರವಿಡುತ್ತದೆ. ಮಾದಕ ವ್ಯಸನದ ವಿರುದ್ಧ ಬಲವಾದ ಸಂದೇಶದೊಂದಿಗೆ ಕ್ರಿಕೆಟ್‌ನ ಉತ್ಸಾಹವನ್ನು ಸಂಯೋಜಿಸುವ ”ಬಜ್ಪೆ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯು ನವೆಂಬರ್ 17, 2023 ರಿಂದ ಪ್ರಾರಂಭವಾಗಲಿದ್ದು, ಬಜ್ಪೆ ಪಟ್ಟಣ ಅಸಾಧಾರಣ ಕಾರ್ಯಕ್ರಮಕ್ಕೆ ಸಜ್ಜಾಗಿದೆ.
ಬಜ್ಪೆ ಲೆಜೆಂಡ್ಸ್ ಆಯೋಜಿಸುವ ಈ ಹಗಲು-ರಾತ್ರಿಯ ಪಂದ್ಯಾವಳಿ ಮೂರು ದಿನಗಳ ಕಾಲ ಬಜ್ಪೆಯಲ್ಲಿ ನಡೆಯಲಿದೆ. ಸಿಂಪೋಲೊ ಸಿಕ್ಸರ್ಸ್, ಆಸ್ಟ್ರಿಚ್ ಬ್ಲಾಸ್ಟರ್ಸ್, ಶಾನ್ ಸ್ಪೋರ್ಟಿಂಗ್, ಟೀಮ್ ಸ್ಕೈಲೈನ್ಸ್, ಎಸ್ಪೀ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬಜ್ಪೆ ( RCB),ಟೀಮ್ ಹಾನ್ದಿ ಫೈಟರ್ಸ್, ಟೀಮ್ ಬ್ರೈಟ್ ಪ್ಲೇಯರ್ಸ್, ಸ್ಕೈ ಲೈನ್ಸ್,ಟೀಮ್ ಗ್ರೂಪ್ ಫೋರ್ ಇನ್ನಿತರ ತಂಡಗಳು ಬಿಪಿಎಲ್ ಟ್ರೋಫಿ ಗಾಗಿ ಬಜ್ಪೆಯ ಗೋಲ್ಡ್ ಫೀಲ್ಡ್ ಮೈದಾನದಲ್ಲಿ ಪರಸ್ಪರ ಸೆಣಸಾಡಲಿವೆ. 40 ವರ್ಷ ಮೇಲ್ಪಟ್ಟವರಿಗೆ ಮತ್ತು 16 ಕ್ಕಿಂತ ಕೆಳಗಿನವರಿಗಾಗಿ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಾವಳಿಯು ನಡೆಯಲಿದೆ. ಟೂರ್ನಿಯ ಉತ್ತಮ ಆಟಗಾರನಿಗೆ ಕಿರಿಯರ ವಿಭಾಗದಲ್ಲಿ ದ್ವಿಚಕ್ರವಾಹನ ಮತ್ತು ಕಿರಿಯರ ವಿಭಾಗದಲ್ಲಿ ಬೈಸಿಕಲ್ ಅನ್ನು ಪ್ರಶಸ್ತಿಯಾಗಿ ನೀಡಲಾಗುವುದು.


ಪಂದ್ಯಾವಳಿಯ ಆರಂಭದ ಮೊದಲು ಶುಕ್ರವಾರ ನವೆಂಬರ್ 17 ರಂದು ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ ಮೆರವಣಿಗೆಯು ನಡೆಯಲಿದ್ದು ಎಲ್ಲಾ ತಂಡದ ಸದಸ್ಯರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ತಮ್ಮ ಪಾತ್ರವನ್ನು ವಹಿಸಲು ಎಲ್ಲಾ ನಾಗರಿಕರು, ಪೋಷಕರು ಮತ್ತು ಇತರ ಜವಾಬ್ದಾರಿಯುತ ಸದಸ್ಯರಿಗೆ ಬಿಪಿಎಲ್ ಪಂದ್ಯಾವಳಿಯ ಸಂಘಟಕರು ಮನವಿ ಮಾಡಿದ್ದಾರೆ.


ದಿನಾಂಕ 17-11-2023 ರ ಸಾಯಂಕಾಲ 6:30 ಗೆ ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಆಗಿರುವಂತ ಶ್ರೀ ಯು ಟಿ ಖಾದರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಅಷ್ಟೇ ಅಲ್ಲದೆ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್,ಶಾಸಕ ಶ್ರೀ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್, ದ.ಕ ಜಿಲ್ಲಾಧಿಕಾರಿ ಶ್ರೀ ಮುಲ್ಲೈ ಮುರುಗನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ರೈ, ರೋಹನ್ ಕಾರ್ಪೊರೇಷನ್ ನ ರೋಹನ್ ಮೊಂತೆರೊ ಇವರುಗಳು ಗೌರವ ಅತಿಥಿಗಳಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.


ಪಂದ್ಯಾವಳಿಯ ಮುಕ್ತಾಯ ಸಮಾರಂಭ ದಿನಾಂಕ 17-11-2023 ರ ಬೆಳಗ್ಗೆ 11 ಗಂಟೆಗೆ ಜರುಗಲಿರುವುದು ಮತ್ತುಗಣ್ಯಾತಿ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿರುವರು.


ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರನ್ನು ಮಾದಕ ವ್ಯಸನದಿಂದ ದೂರವಿರಿಸಲು ಬಜ್ಪೆ ಲೆಜೆಂಡ್ಸ್ ತಂಡವು ಈ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಿದೆ. ಒಂದು ಒಳ್ಳೆಯ ಸದುದ್ದೇಶದಿಂದ ನಡೆಯಲ್ಪಡುವ ಈ ಪಂದ್ಯಾವಳಿ ಯುವಜನರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರನ್ನು ಮಾದಕ ವಸ್ತುಗಳಿಂದ ದೂರವಿಡಬಹುದು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಮಾದಕ ವ್ಯಸನದಂತಹ ವಿವಿಧ ನಕಾರಾತ್ಮಕ ಶಕ್ತಿಗಳಿಂದ ದೂರವಿರಲು ಬಜ್ಪೆ ಲೆಜೆಂಡ್ಸ್ ವೇದಿಕೆಯನ್ನು ಒದಗಿಸುತ್ತಾ ಇದೆ.


ರೋಹನ್ ಕಾರ್ಪೊರೇಷನ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕರು. ಕರ್ನಾಟಕ ರಾಜ್ಯದ ಜನಪ್ರಿಯ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.