2023 ನೇ ಸಾಲಿನ ಕರ್ನಾಟಕ ರಾಜ್ಯ ಜೂನಿಯರ್ ಕ್ರೀಡಾಕೂಟವು ಸೆಪ್ಟೆಂಬರ್ 27 ರಿಂದ 30 ರ ವರೆಗೆ ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರಗಲಿರುವುದು. ಈ ಕ್ರೀಡಾ ಕೂಟವು ಅಂತರಾಷ್ಟ್ರೀಯ ಅತ್ಲೆಟಿಕ್ ದಿವಂಗತ ಲೋಕನಾಥ್ ಬೋಳಾರ್ ರವರ ಸ್ಮರಣಾರ್ಥ ವಾಗಿ ಜರಗಲಿರುವುದು,
ಕ್ರೀಡಾಕೂಟವು ಮೊಗವೀರ ವ್ಯವಸ್ಥಾಪಕ ಮಂಡಳಿ, ದ.ಕ ಮತ್ತು ಉಡುಪಿ ಶಾಖೆ, ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಜರಗಲಿದ್ದು ಕರ್ನಾಟಕ ಅತ್ಲೆಟಿಕ್ ಅಸೋಸಿಯೇಷನ್ ನ ಸಹಕಾರ ಹಾಗ ದ.ಕ ಅತ್ಲೆಟಿಕ್ ಅಸೋಸಿಯೇಷನ್ ರವರ ಸಹಭಾಗಿತ್ವ ಇರುತ್ತದೆ.
ಕ್ರೀಡಾಕೂಟದ ಪೂರ್ವಭಾವಿಯಾಗಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಖಾಸಾಗಿ ಹೊಟೇಲಿನಲ್ಲಿ ಜರಗಿತು.
ಪೋಸ್ಟರ್ ಬಿಡುಗಡೆ ಮಾಡಿದ ಜನತಾ ಫಿಶಮೀಲ್ ಸಂಸ್ಥೆಯ ಆಡಳಿತ ನಿರ್ದೇಶಕ ಆನಂದ ಸಿ. ಕುಂದರ್ ಮಾತನ್ನಾಡಿ ಲೋಕನಾಥ್ ಬೋಳಾರ್ ನಮ್ಮ ದೇಶ ಕಂಡ ಈ ಭಾಗದ ಅಪ್ರತಿಮ ಕ್ರೀಡಾಪಟುವಾಗಿ ನಮ್ಮ ದೇಶಕ್ಕೆ ಹೆಸರನ್ನು ತಂದಿದ್ದಾರೆ. ಮಾತ್ರವಲ್ಲದೆ ಮೀನುಗಾರ ಸಮಾಜದ ಕಣ್ಮಣಿಯಾಗಿ ಮೀನುಗಾರಿಕೆಯ ಉತ್ತೇಜನಕ್ಕೆ ಹಲವು ಮಹತ್ತರ ಕೊಡುಗೆಯನ್ನು ನೀಡಿದ್ದಾರೆ, ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ನಾಡಿನ ಕ್ರೀಡಾಪಟುಗಳ ಬೆಳವಣಿಗೆಗೆ ಕ್ರೀಡಾಕೂಟವು ನಮ್ಮ ಜಿಲ್ಲೆಯಲ್ಲಿ ಜರಗುತ್ತಿರುವುದು ಹೆಮ್ಮೆಯಾಗುತ್ತಿದೆ. ಈ ಮೂಲಕ ಲೋಕನಾಥ್ ಬೋಳಾರ್ ರವರಿಗೆ ಗೌರವವನ್ನು ಸಮರ್ಪಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ಮಾತಾಡುತ್ತಾ ಲೋಕನಾಥ್ ಬೋಳಾರ್ ರವರು ಹೆಚ್ಚಾಗಿ ಸೇವೆ ಮಾಡಿದ ಕ್ಷೇತ್ರವೆಂದರೆ ಕ್ರೀಡೆ ಹಾಗೂ ಮೀನುಗಾರಿಕಾ ಕ್ಷೇತ್ರ, ತಮ್ಮ ಜೀವಿತಾವಧಿಯಲ್ಲಿ ಹಲವು ಕ್ರೀಡಾಪಟುಗಳನ್ನು ಬೆಳೆಸಿದ ಕೀರ್ತಿ ಅವರಿಗಿದೆ . ಮೀನುಗಾರಿಕೆಗೆ ಹಲವು ಆಯಾಮಗಳನ್ನು ಪರಿಚಯಿಸುತ್ತಾ ಮೀನುಗಾರರ ಏಳಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ, ಅವರ ಸ್ಮರಣಾರ್ಥ ಜರಗುವ ಈ ಕ್ರೀಡಾಕೂಟದಲ್ಲಿ ಕರ್ಣಾಟಕದಾತ್ಯಂತ 2500 ಕ್ರೀಡಾಳುಗಳು ಭಾಗವಹಿಸಲಿದ್ದಾರೆ, ಕ್ರೀಡಾಕೂಟದ ವಿಜೇತರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿಗಳಾದ ಆನಂದ ಸುವರ್ಣ ಮಲ್ಪೆ, ಟಿ ಹನೀಫ್ ಮಲ್ಪೆ, ಆನಂದ ಮಾಸ್ಟರ್ ಬೋಳೂರು, ಜಗದೀಶ್ ಬೋಳೂರು, ಮೋಹನ್ ಬೆಂಗ್ರೆ, ನಿತಿನ್ ಕುಮಾರ್, ತೇಜೋಮಯ, ಕಾಶಿನಾಥ್ ಕರ್ಕೇರ, ವಾಲ್ಟರ್ ಡಿಸೋಜ, ಫಾದರ್ ಗೋಮ್ಸ್, ಸಿಂಧೂರಾಂ, ಕ್ಯಾಪ್ಟನ್ ಕೃಷ್ಣಪ್ಪ,ವರದ್ ರಾಜ್ ಬಂಗೇರ, ಮನೋಹರ ಬೋಳಾರ ಮೊಹಮ್ಮದ್ ಬಸೀರ್, ಡಾ| ಶಾಂತರಾಂ ಶೆಟ್ಟಿ, ಡಾ|ದೇವಿ ಲೋಕನಾಥ್ ಬೋಳಾರ್, ಶ್ರೀಮತಿ ಪವನ್ ಬೋಳಾರ್, ಕಾವ್ಯ ಪ್ರಜ್ವಲ್ ಬೋಳಾರ್ , ಸುಭಾಷ್ ಚಂದ್ರ ಕಾಂಚನ್ ರವರು ಉಪಸ್ಥಿತರಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಪಧಾಧಿಕಾರಿಗಳಾದ ಮೋಹನ್ ಕೋಡಿಕಲ್, ಭರತ್ ಕುಮಾರ್ ಎರ್ಮಾಳ್, ಯತೀಶ್ ಬೈಕಂಪಾಡಿ, ವಿಜಯ ಸುವರ್ಣ ಬೆಂಗ್ರೆ, ಶೋಭೇಂದ್ರ ಸಸಿಹಿತ್ಲು, ಸಂದೀಪ್ ಪುತ್ರನ್ ಉಳ್ಳಾಲ ಹಾಗೂ ಅತ್ಲೆಟಿಕ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ,ತಾರನಾಥ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ, ಕೃಷ್ಣ ಶೆಣೈ, ಸುಪ್ರೀತ್ ಭಾಗವಹಿಸಿದ್ದರು.