ಬೆಂಗಳೂರು-ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ದಿನವಾದ ಇಂದಿನ ಕೊನೆಯ ಪಂದ್ಯ ರಾತ್ರಿ 8 ಗಂಟೆಗೆ ಸೂಪರ್ ಫ್ಯಾಶನ್ ಶ್ರೀಲಂಕಾ ತಂಡ,ಸತತ ಎರಡು ಪಂದ್ಯವನ್ನು ಗೆದ್ದು ಬೀಗಿದ ಸಂಯೋಜಿತ ತಂಡ ಮೈಸೂರು ಇಲೆವೆನ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.
ಶುಕ್ರವಾರ ರಾತ್ರಿ ಆಯೋಜಕರಾದ ಫ್ರೆಂಡ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪ್ರದರ್ಶನ ಪಂದ್ಯದಲ್ಲಿ ಸೂಪರ್ ಫ್ಯಾಶನ್ ತಂಡ ಒಂದು ರನ್ ಅಂತರದ ಗೆಲುವು ದಾಖಲಿಸಿತ್ತು.
ಮೊನಚಾದ ಬೌಲಿಂಗ್ ಪಡೆಯನ್ನು ಹೊಂದಿರುವ ಸೂಪರ್ ಫ್ಯಾಶನ್ ಶ್ರೀಲಂಕಾ,ಎರಡು ಪಂದ್ಯಗಳಲ್ಲಿ ಸಂಯೋಜಿತ ಹೋರಾಟದ ಮೂಲಕ ಗೆಲುವು ಸಾಧಿಸಿದ ಮೈಸೂರು ಇಲೆವೆನ್ ವಿರುದ್ಧ ಗೆಲುವು ದಾಖಲಿಸೀತೇ ಕಾದು ನೋಡಬೇಕಾಗಿದೆ.