UVA ಮೆರಿಡಿಯನ್ ಕುಂದಾಪುರ ಇವರ ಆಶ್ರಯದಲ್ಲಿ,ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿವಿನೂತನವಾಗಿ ಸಜ್ಜುಗೊಳಿಸಿದ ಒಳಾಂಗಣ ಕ್ರೀಡಾಂಗಣದಲ್ಲಿ ಫೆಬ್ರವರಿ 13 ಶನಿವಾರದಂದು,ಒಂದು ದಿನದ ಹಗಲು ರಾತ್ರಿಯ ಕಾರ್ಪೋರೆಟ್ ಬಾಕ್ಸ್ ಕ್ರಿಕೆಟ್ ಬ್ಯಾಶ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಶನಿವಾರ ಮಧ್ಯಾಹ್ನ 3 ಗಂಟೆಯ ನಂತರ ಪಂದ್ಯಾಟ ಪ್ರಾರಂಭವಾಗಲಿದ್ದು,ಭಾಗವಹಿಸುವ
12 ತಂಡಗಳ ವಿವರ ಈ ಕೆಳಗಿನಂತಿದೆ.

1)ಕೋಸ್ಟಲ್ ವುಡ್ ಹೀರೋಸ್
2)ಎಮ್.ಆರ್.ಪಿ.ಎಲ್ ಸುರತ್ಕಲ್
3)ಉಡುಪಿ ಜಿಲ್ಲಾ ಪೊಲೀಸ್ ತಂಡ
4)ಜಿಲ್ಲಾಧಿಕಾರಿಗಳ ಕಛೇರಿಯ ತಂಡ
5)ಕೆ.ಎಮ್.ಸಿ ಮಣಿಪಾಲ ತಂಡ
6)ವೈದ್ಯರ ತಂಡ ಕುಂದಾಪುರ
7)ವಕೀಲರ ತಂಡ ಕುಂದಾಪುರ
8)ಎ.ಸಿ.ಆಫೀಸ್ ಕುಂದಾಪುರ
9)ಜನತಾ ಫಿಶ್ ಮೀಲ್ ಕೋಟ
10)ಲಯನ್ಸ್ ಕ್ಲಬ್ ಹಂಗಳೂರು
11)ರೋಟರಿ ಕ್ಲಬ್ ಕೋಟೇಶ್ವರ
12)ರೋಟರಿ ಕ್ಲಬ್ ಕುಂದಾಪುರ.
ಈ ಪಂದ್ಯಾಟದ ನೇರ ಪ್ರಸಾರ M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಲಿದೆ.