ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಟಿ.ಸಿ.ಎ ತಾಲೂಕು ಮಟ್ಟದ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ ಮತ್ತು ಪಾರಂಪಳ್ಳಿ ಕ್ರಿಕೆಟರ್ಸ್ ಫೈನಲ್ ಗೆ ಲಗ್ಗೆ ಇಟ್ಟಿದೆ.
ಬ್ರಹ್ಮಾವರ ತಾಲೂಕಿನ 6 ತಂಡಗಳು ಸ್ಪರ್ಧಿಸಿದ್ದವು.ಉಪಾಂತ್ಯ ಪಂದ್ಯದಲ್ಲಿ ಇಲೆವೆನ್ ಅಪ್ ಕೋಟ ವರ್ಲ್ಡ್ ಇಲೆವೆನ್ ಹಂದಾಡಿ ತಂಡವನ್ನು ಹಾಗೂ ಪಾರಂಪಳ್ಳಿ ಕ್ರಿಕೆಟರ್ಸ್ ಎಮ್.ಸಿ.ಸಿ ಮಣೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದು,3 ರವಿವಾರ ಸಂಜೆ ಫೈನಲ್ ಸಮರ ನಡೆಯಲಿದೆ.
ಗುರುವಾರ ಬೆಳಿಗ್ಗೆ ಬ್ರಹ್ಮಾವರ ತಾಲೂಕು ಮಟ್ಟದ ಪಂದ್ಯಾಟವನ್ನು ಸಹಾಯಕ ಕಮೀಷನರ್ ರಾಜು.ಕೆ.ಎಸ್ ಉದ್ಘಾಟಿಸಿ ಮಾತನಾಡಿ”ಕಳೆದೆರಡು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದು,ಟಿ.ಸಿ.ಎ ಪಂದ್ಯಾಟದ ಮೂಲಕ ಎಲ್ಲರೂ ಒಟ್ಟಾಗುತ್ತಿರುವುದು ಆರೋಗ್ಯ,ಆಟ,ಸಾಮಾಜಿಕ ಹಾಗೂ ಸಾಮರಸ್ಯದ ದೃಷ್ಟಿಯಿಂದ ಶ್ಲಾಘನೀಯ ಎಂದರು.”
ಟಿ.ಸಿ.ಅಧ್ಯಕ್ಷರಾದ ಗೌತಮ್ ಶೆಟ್ಟಿಯರು ಮಾತನಾಡಿ “ತಾಲೂಕು ಮಟ್ಟದ ಪಂದ್ಯಗಳ ನಂತರ ಜಿಲ್ಲಾ ಹಾಗೂ ರಾಜ್ಯಮಟ್ಟದ ಪಂದ್ಯಗಳು ನಡೆಯಲಿದ್ದು,ಪ್ರತಿಭಾನ್ವಿತ ಆಟಗಾರರಿಗೆ ಟಿ.ಸಿ.ಎ ಕೋಚಿಂಗ್ ಇನ್ನಿತರ ಸೌಲಭ್ಯವನ್ನು ಕಲ್ಪಿಸುತ್ತದೆ” ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕುಂದಾಪುರ
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್,ಮಾಜಿ ಜಿಲ್ಲಾ ರೋಟರಿ ಗವರ್ನರ್ ಅಭಿನಂದನ್ ಶೆಟ್ಟಿ,ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ, ಟಿ.ಸಿ.ಎ ನಿರ್ದೇಶಕರಾದ ಸುಧೀರ್ ಶೆಟ್ಟಿ ಮಾರ್ಕೋಡು,ಟಿ.ಸಿ.ಎ ಗೌರವಾಧ್ಯಕ್ಷರಾದ ಗಿರೀಶ್ ಬೈಂದೂರು,ಶ್ರೀಧರ್ ಶೆಟ್ಟಿ ಬನ್ನಂಜೆ,ಟಿ.ಸಿ.ಎ ಕಾರ್ಯದರ್ಶಿ ಡಾ.ವಿನೋದ್ ನಾಯಕ್,ಯಾದವ್ ನಾಯಕ್ ಕೆಮ್ಮಣ್ಣು,
ಟಿ.ಸಿ.ಎ ನಿರ್ದೇಶಕರಾದ ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.ಶಿವನಾರಾಯಣ್ ಐತಾಳ್ ಕೋಟ ಕಾರ್ಯಕ್ರಮ ನಿರೂಪಣೆಗೈದರು.
ಶುಕ್ರವಾರ ಬೆಳಿಗ್ಗೆ ಕುಂದಾಪುರ ತಾಲ್ಲೂಕು ಮಟ್ಟದ ಪಂದ್ಯಾಟ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ
ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್,ಬಿ.ಸಿ.ಸಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ್ ಶೆಟ್ಟಿ,ಯುವಜನ ಕ್ರೀಡಾ ಇಲಾಖೆ ಕುಂದಾಪುರದ ಕುಸುಮಾಕರ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಪೂಜಾರಿ,ಕುಂದಾಪುರ ನಾರಾಯಣಗುರು ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ,ಟಿ.ಸಿ.ಎ ಉಪಾಧ್ಯಕ್ಷರಾದ ನಾರಾಯಣ್ ಶೆಟ್ಟಿ, ಅಮರ್ ನಾಥ್ ಭಟ್,ಟಿ.ಸಿ.ಎ ಕ್ರೀಡಾಸಂಯೋಜಕರಾದ
ರಮೇಶ್ ಕುಂದರ್ ಕೋಟ,ಗಿರೀಶ್ ಬೈಂದೂರು ಮತ್ತು ಮನೋಜ್ ನಾಯರ್ ಭಾಗವಹಿಸಲಿದ್ದಾರೆ.
ಪಂದ್ಯಾಟದ ನೇರ ಪ್ರಸಾರ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳುತ್ತಿದೆ…