ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕುಂದಾಪುರ ತಾಲೂಕು ಮಟ್ಟದ ಪಂದ್ಯಾಟದಲ್ಲಿ ಚಕ್ರವರ್ತಿ ಕುಂದಾಪುರದ ಶಾಹಿದ್ ಜವಾಬ್ದಾರಿಯುತ ಆಟದ ಫಲವಾಗಿ ಚಕ್ರವರ್ತಿ ಕ್ವಾರ್ಟರ್ ಫೈನಲ್ ತಲುಪಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಚಾಲುಕ್ಯ ಹೆಮ್ಮಾಡಿ ಅನಿಲ್ 32 ರನ್ ಮತ್ತು ರಾಘವೇಂದ್ರ 23 ರನ್ ನೆರವಿನಿಂದ 9.1 ಓವರ್ ಗಳಲ್ಲಿ 73 ರನ್ ಗೆ ಆಲೌಟ್ ಆಗಿತ್ತು.ಸವಾಲಿನ ಗುರಿಯನ್ನು ಬೆನ್ನತ್ತಿದ ಚಕ್ರವರ್ತಿ ಕುಂದಾಪುರ,ಆರಂಭಿಕ ಆಟಗಾರ ಶಾಹಿದ್ 3 ಭರ್ಜರಿ ಸಿಕ್ಸರ್ ಗಳ ಸಹಿತ 26 ಎಸೆತಗಳಲ್ಲಿ 31 ರನ್ ಸಿಡಿಸಿ ಹಾಗೂ 2 ಓವರ್ ಗಳಲ್ಲಿ 11 ರನ್ ನೀಡಿ 2 ವಿಕೆಟ್ ಉರುಳಿಸಿ, ಗೆಲುವಿನ ರೂವಾರಿ ಎನಿಸಿಕೊಂಡರು.
ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಪಾತ್ರರಾದರು.
ರಂಜಿತ್ ಶೆಟ್ಟಿ 15 ರನ್ ಸಿಡಿಸಿ ಶಾಹಿದ್ ಜೊತೆಗೆ ಗೆಲುವಿನ ಇನ್ನಿಂಗ್ಸ್ ಕಟ್ಟಿದರು.
ನಾಳೆ ಬೆಳಿಗ್ಗೆ 8.30 ಗೆ ಸರಿಯಾಗಿ ಕ್ವಾರ್ಟರ್ ಫೈನಲ್ ಹಂತದ ಹೋರಾಟ ಪ್ರಾರಂಭವಾಗಲಿದೆ.
ಮಹಾದೇವಿ ಮಲ್ಯಾಡಿ-ಚಾಲೆಂಜ್ ಕುಂದಾಪುರ ತಂಡವನ್ನು,ಜೆ.ಸಿ.ಸಿ ಜಾಲಾಡಿ ಚಕ್ರವರ್ತಿ ಕುಂದಾಪುರ ತಂಡವನ್ನು,ಜಾನ್ಸನ್ ಕುಂದಾಪುರ ಟೊರ್ಪೆಡೋಸ್ ತಂಡವನ್ನು ಹಾಗೂ ಅಂಶು ಕೋಟೇಶ್ವರ ಮಯೂರ ಕುಂದಾಪುರ ತಂಡವನ್ನು ಎದುರಿಸಲಿದೆ.