ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು,ಕೆ.ಪಿ.ಸಿ.ಸಿ ಸದಸ್ಯರು,ಮಾಜಿ ಆಟಗಾರರು ಮತ್ತು ಕ್ರೀಡಾ ಪ್ರೋತ್ಸಾಹಕರಾದ ಶ್ರೀಯುತ ಪಿ.ಎನ್.ಕೃಷ್ಣಮೂರ್ತಿ ಯವರ ಪ್ರಾಯೋಜಕತ್ವದಲ್ಲಿ ಮತ್ತು ಉಪಸ್ಥಿತಿಯಲ್ಲಿ,ರತ್ನಾಕರ್ ಶ್ರೀಯಾನ್ ನಾಯಕತ್ವದ ಸೀ ಹಂಟರ್ಸ್ ಕೋಟ ಇವರ ಆಶ್ರಯದಲ್ಲಿ,ಪಿ.ಎನ್.ಕೃಷ್ಣಮೂರ್ತಿಯವರ ಕರಾವಳಿ ಅಭಿಮಾನಿ ಬಳಗ ಸಹಕಾರದೊಂದಿಗೆ,ಪಿ.ಎನ್. ಟ್ರೋಫಿ-2022 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಏಪ್ರಿಲ್ 22,23 ಮತ್ತು 24 ರಂದು ಕೋಟ-ಪಡುಕರೆ ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ,60 ಗಜಗಳ ಹೊನಲು ಬೆಳಕಿನ ಮಾದರಿಯಲ್ಲಿ ನಡೆಯಲಿದೆ.
ಈ ಪಂದ್ಯಾಟದಲ್ಲಿ 40+ ಲೆಜೆಂಡ್ಸ್ ಮತ್ತು ಪಂಚಾಯತ್ ವ್ಯಾಪ್ತಿಯ ಆಟಗಾರರಿಗೆ ಆಡಲು ಅವಕಾಶ ಕಲ್ಪಿಸಲಾಗಿದೆ.ಪ್ರಥಮ ಬಹುಮಾನ 1 ಲಕ್ಷ ಹಾಗೂ ಟ್ರೋಫಿ,ದ್ವಿತೀಯ ಬಹುಮಾನ 60 ಸಾವಿರ ಹಾಗೂ ಟ್ರೋಫಿಗಳನ್ನು ನೀಡಲಾಗುತ್ತಿದೆ…