ಕುಂದಾಪುರ : ಹಲವು ದಶಕಗಳ ಬಳಿಕ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಪಂದ್ಯಾಕೂಟವೊಂದು ದಾಖಲಾಯಿತು. ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಕಾರ್ಯಕ್ರಮದ ಪ್ರಯುಕ್ತ ಟೆನ್ನಿಸ್ ಕ್ರಿಕೆಟನ್ನು ಇನ್ನಿಲ್ಲದಂತೆ ಆಳಿ ಮೆರೆದ ದಂತಕಥೆಗಳ ನಡುವೆ ಹಣಾಹಣಿ ಕ್ರಿಕೆಟ್ ಕಾಶಿ ಕುಂದಾಪುರದ ಗಾಂಧಿಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಬೆಂಗಳೂರಿನ ಹಿರಿಯ ತಂಡಗಳಾದ ಮನೋಹರ್ ನೇತೃತ್ವದ ಜೈ ಕರ್ನಾಟಕ,ರೇಣು ಗೌಡ ನೇತೃತ್ವದ ಫ್ರೆಂಡ್ಸ್ ಬೆಂಗಳೂರು,ಶ್ರೀಪಾದ ಉಪಾಧ್ಯ ಸಾರಥ್ಯದ ಚಕ್ರವರ್ತಿ ಕುಂದಾಪುರ ಹಾಗೂ ಸಫ್ದರ್ ಆಲಿ ನೇತೃತ್ವದ ಉಡುಪಿ ಕ್ರಿಕೆಟರ್ಸ್ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಫ್ರೆಂಡ್ಸ್ ತಂಡ ಚಕ್ರವರ್ತಿ ತಂಡವನ್ನು, ಉಡುಪಿ ಕ್ರಿಕೆಟರ್ಸ್ ಜೈ ಕರ್ನಾಟಕ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯಾಟದಲ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಫ್ರೆಂಡ್ಸ್ ತಂಡ ಎದುರಾಳಿ ಉಡುಪಿ ತಂಡವನ್ನು 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 61 ರನ್ ಗಳಿಗೆ ನಿಯಂತ್ರಿಸಿತು.
ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಫ್ರೆಂಡ್ಸ್ ನ ಆರಂಭಿಕ ಹಿರಿಯ ಆಟಗಾರ ಶ್ರೀಕಾಂತ್ ಅಮೂಲ್ಯ 15 ರನ್ ಹಾಗೂ ಗಂಗಾ, ನಿತಿನ್ ಮೂಲ್ಕಿ ಎಸೆತದಲ್ಲಿ ಸಿಡಿದ ಭರ್ಜರಿ 3 ಸಿಕ್ಸರ್ ಸಹಿತ 7 ಎಸೆತಗಳಲ್ಲಿ 21 ರನ್ ಸಿಡಿಸಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದರು.
“ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ವರ್ಣರಂಜಿತ ಉದ್ಘಾಟನಾ ಸಮಾರಂಭದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಂಗಾ,ಬೆಸ್ಟ್ ಬೌಲರ್ ನಿತಿನ್ ಮೂಲ್ಕಿ,ಬೆಸ್ಟ್ ಕೀಪರ್ ಕೆ.ಪಿ.ಸತೀಶ್ ,ಬೆಸ್ಟ್ ಕ್ಯಾಚ್ ಪ್ರೇಮೇಂದ್ರ ಶೆಟ್ಟಿ ,ಬೆಸ್ಟ್ ಬ್ಯಾಟ್ಸ್‌ಮನ್ ಫ್ರೆಂಡ್ಸ್ ನ ಶ್ರೀಕಾಂತ್ ಪಡೆದುಕೊಂಡರು.ಹಿರಿಯ ಕ್ರಿಕೆಟಿಗರನ್ನು ಹುರಿದುಂಬಿಸಲು ರಾಜ್ಯದ ಯುವ ಕ್ರಿಕೆಟಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.ಹಿರಿಯ ಕ್ರಿಕೆಟಿಗರನ್ನು ಅತಿಥಿಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಬೆಳಗ್ಗಿನ ಪಂದ್ಯಾಕೂಟಕ್ಕಾಗಿ ಕರ್ನಾಟಕ ರಾಜ್ಯದ ಹಿರಿಯ ತಂಡಗಳಾದ ಬೆಂಗಳೂರಿನ ಜೈ ಕರ್ನಾಟಕದ ದಂತಕಥೆಗಳಾದ ಮನೋಹರ್, ಮ್ಯಾಜಿಕಲ್ ಸ್ಪಿನ್ನರ್ ಮೆರ್ವಿನ್,ನಂಬುಗೆಯ ದಾಂಡಿಗ ಕೀಪರ್ ನಾಗಿ,ಬಾಬು,ನಾಗೇಶ್ ಸಿಂಗ್,ಭಗವಾನ್ ಸಿಂಗ್,ಜಾನ್ಸನ್ ಶ್ರೀಧರ್,ಸಾಂಬಾಜಿ ಪ್ರತಿನಿಧಿಸಿದರೆ,
ಫ್ರೆಂಡ್ಸ್ ನ ರೇಣು ಗೌಡ, ಶ್ರೀಕಾಂತ್, ಸುನಿಲ್ ಬಿರಾದರ್,ಚಂದಿ,ಸೀನ,ಗಂಗಾ ಆಡಿದ್ದರೆ, ಉಡುಪಿ ಕ್ರಿಕೆಟರ್ಸ್ ನಿಂದ ನಾಯಕ ಸಪ್ಧರ್ ಆಲಿ,ನಿತಿನ್ ಮೂಲ್ಕಿ,ವಿನ್ಸೆಂಟ್, ಪ್ರವೀಣ್ ಪಿತ್ರೋಡಿ, ವಿಲ್ಫ್ರೆಡ್,ವಿಶ್ವನಾಥ್ ಹಾಗೂ ಚಕ್ರವರ್ತಿ ಕುಂದಾಪುರ ತಂಡ ನಾಯಕ ಶ್ರೀಪಾದ ಉಪಾಧ್ಯಾಯ ರ ಅನುಪಸ್ಥಿತಿಯಲ್ಲಿ ಸತೀಶ್ ಕೋಟ್ಯಾನ್ ರ ನಾಯಕತ್ವದಲ್ಲಿ ಮನೋಜ್ ನಾಯರ್,ಪ್ರದೀಪ್ ವಾಜ್,ಕೆ.ಪಿ.ಸತೀಶ್, ರಂಜಿತ್ ಶೆಟ್ಟಿ, ರಾಜಾ ಇನ್ನಿತರ ಹಿರಿಯ ದಂತಕಥೆಗಳು ದಶಕಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದರು.
ಬೆಳಗ್ಗಿನ ಪಂದ್ಯಾಕೂಟ ಹಾಗೂ ಸಂಜೆಯ ವೆಬ್ಸೈಟ್ ಲೋಕಾರ್ಪಣಾ ಕಾರ್ಯಕ್ರಮದ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ನೇತೃತ್ವದ M.SPORTS ವಿಶ್ವದಾದ್ಯಂತ ಪ್ರಸಾರ ಮಾಡಿದ್ದು,ಸಹಸ್ರಾರು ಮಂದಿ ವೀಕ್ಷಕರು ಅಪರೂಪದ ಸಮ್ಮಿಲನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
– ಆರ್.ಕೆ.ಆಚಾರ್ಯ ಕೋಟ