ಸೀಮಿತ 50 ಓವರ್ ಗಳ ಪಂದ್ಯತನ್ಮಯ್ ಮಂಜುನಾಥ್ – 407 ರನ್165 ಎಸೆತ24 – ಸಿಕ್ಸರ್48 – ಬೌಂಡರಿ ಇದು ಕರ್ನಾಟಕದ ಕೆಎಸ್‌ಸಿಎ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ವಲಯಮಟ್ಟದಲ್ಲಿ ಯಾರು ಮಾಡದ ಸರ್ವಕಾಲಿಕ ದಾಖಲೆಯಾಗಿದೆ.
ಕಳೆದ ಶನಿವಾರ ( ದಿ:12 ) ರಂದು ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಪೆಸೀಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಹಚ್ಚ ಹಸುರಿನ ಕ್ರಿಕೆಟ್ ಅಂಕಣ ಅಂದು ಸರ್ವಕಾಲಿಕ ದಾಖಲೆಗಾಗಿ ಕಾದು ಕುಳಿತಿತ್ತು..! ಈ ಅಂಕಣದಲ್ಲಿ ಅಂದು ಸಾಗರದ ಕ್ರಿಕೆಟ್ ಕ್ಲಬ್ ಆಫ್ ಸಾಗರ ಮತ್ತು ಭದ್ರಾವತಿಯ ಎನ್‌ಟಿಸಿಸಿ ತಂಡದ ವಿರುದ್ಧ ಕೆಎಸ್‌ಸಿಎ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಹದಿನಾರು ವರ್ಷ ವಯಸ್ಸಿನ ವಲಯಮಟ್ಟದ ಸೀಮಿತ 50 ಓವರ್ ಕ್ರಿಕೆಟ್ ಪಂದ್ಯದಲ್ಲಿ ಸಾಗರದ ತಂಡ ಟಾಸ್ ಗೆದ್ದು ಮೊದಲ ಸರದಿಯಲ್ಲಿ ಬ್ಯಾಟಿಂಗ್ ಆರಂಭಿಸುವ ಅವಕಾಶವನ್ನು ಪಡೆದು ಕೊಂಡಿತು, ಸಾಗರ ತಂಡದ ಆರಂಭಿಕ ಆಟಗಾರರಾದ ತನ್ಮಯ್ ಮಂಜುನಾಥ್ ಮತ್ತು ಎ ಅಂಶು ಜೋಡಿಯು ಅಂಕಣಕ್ಕೆ ಇಳಿದಿದ್ದರು ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಆಬ್ಬರಿಸಿದ ತನ್ಮಯ್ ತನ್ನ ಮನಮೋಹಕ ಹೊಡೆತಗಳಿಂದ ಎದುರಾಳಿ ತಂಡದ ಬೌಲರ್ ಗಳನ್ನು ಮನಬಂದಂತೆ ಚಚ್ಚಿದರು ಇನ್ನೊಂದು ತುದಿಯಲ್ಲಿ ಆಡುತ್ತಿದ್ದ ಅಂಶು ಕೂಡಾ ಜವಾಬ್ದಾರಿಯುತವಾದ ಆಟವಾಡುತ್ತಿದ್ದರು ಇವರಿಬ್ಬರ ಜೋಡಿ ಮೊದಲ ವಿಕೆಟ್ ಜೋತೆ ಆಟಕ್ಕೆ 350 ರನ್ ಕಲೆಹಾಕುವ ಮುಖಾಂತರ ತಂಡಕ್ಕೆ ಭರ್ಜರಿ ಬುನಾದಿ ಹಾಕಿಕೊಟ್ಟರು ತನ್ಮಯ್ ಮೊದಲ ಶತಕವನ್ನು ಕೇವಲ 60 ಬಾಲ್ ಗಳಲ್ಲಿ ಹೊಡೆದರೆ. ಅಂಶು 90 ಎಸೆತಗಳಲ್ಲಿ 127 ರನ್ ಹೊಡೆದು ಔಟ್ ಅದರು
ಅ ನಂತರದಲ್ಲಿ ಕ್ರಿಸಿನಲ್ಲಿದ್ದ ತನ್ಮಯ್ ಮತ್ತಷ್ಟು ಆಕ್ರಮಣ ಆಟಕ್ಕೆ ಮುಂದಾಗಿ ಭದ್ರಾವತಿಯ ಎನ್‌ಟಿಸಿಸಿ ತಂಡದ ಬೌಲರ್ ಗಳನ್ನು ಮನಬಂದಂತೆ ಚಚ್ಚಿದರು ಯಾರು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ತನ್ಮಯ್ ಮಂಜುನಾಥ್ ಕೇವಲ 165 ಎಸೆತಗಳಲ್ಲಿ 407 ರನ್ ಹೊಡೆದು ಕರ್ನಾಟಕದಲ್ಲಿ ಇದುವರೆಗೂ ಯಾವುದೇ ವಲಯ ಮಟ್ಟದಲ್ಲಿ ನಿಮ್ಮಿಸಲಾಗದಂತ ಸರ್ವಕಾಲಿಕ ದಾಖಲೆಯನ್ನು ಮಾಡಿ ರಾಷ್ಟ್ರಮಟ್ಟದಲ್ಲಿ ಕ್ರಿಕೆಟ್ ಪಂಡಿತರು ಕ್ರಿಕೆಟ್ ಪ್ರೇಮಿಗಳು ತನ್ನತ್ತ ತಿರುಗಿನೊಡುವಂತೆ ಮಾಡಿದ್ದಾರೆ .
ತನ್ಮಯ್ ಕೇವಲ 165 ಬಾಲ್ ಗಳಲ್ಲಿ ಬಾರಿಸಿದ 407 ರನ್ ಗಳ ಬುತ್ತಿಯಲ್ಲಿ 24 ಸಿಕ್ಸರ್ ಮತ್ತು ಬರೋಬ್ಬರಿ 48 ಬೌಂಡರಿಯನ್ನು ಬಾರಿಸಿ ಎದುರಾಳಿ ತಂಡದ ಬೌಲರ್ ಮತ್ತು ಕ್ಷೇತ್ರ ರಕ್ಷಕರ ಬೆವರಿಳಿಸಿದರು. ತನ್ಮಯ್ ಕ್ರೀಡಾಂಗಣ ಮೂಲೆ ಮೂಲೆಗೂ ಬಾಲನ್ನು ಹೊಡೆಯುವುದರ ಜೋತೆಗೆ ಸರ್ವಕಾಲಿಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
ತನ್ಮಯ್ ಕೊನೆಯ 50 ನೇ ಓವರಿನ ಮೂರನೇ ಎಸೆತದಲ್ಲಿ ಕವರ್ಸ್ ನಲ್ಲಿದ್ದ ಕ್ಷೇತ್ರ ರಕ್ಷಕನಿಗೆ ಕ್ಯಾಚಿತ್ತು ಔಟಾದರು ಸಾಗರ ತಂಡ ತನ್ನ ಬ್ಯಾಟಿಂಗ್ ಸರದಿಯಲ್ಲಿ 4 ವಿಕೆಟ್ ನಷ್ಟಕ್ಕೆ 583 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು .
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭದ್ರಾವತಿಯ ಎನ್‌ಟಿಸಿಸಿ ತಂಡ ಎದುರಾಳಿ ತಂಡದ ಸವಾಲಿನ ಸ್ಕೋರನ್ನು ಬೆನ್ನಟ್ಟಲು ಸಾಧ್ಯವಾಗದೆ ಕೇವಲ 73 ರನ್ ಗಳಿಗೆ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು. ಸಾಗರ ತಂಡದ ಪರವಾಗಿ ಬೌಲಿಂಗ್ ನಲ್ಲು ಮಿಂಚಿದ ಅಂಶು 5 ವಿಕೆಟ್ ಪಡೆದರೆ ಅಜಿತ್ 4 ವಿಕೆಟ್ ಪಡೆದರು ಸಾಗರದ ತಂಡ 510 ರನ್ನುಗಳ ಬಾರಿ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಸರ್ವಕಾಲಿಕ ದಾಖಲೆ ನಿರ್ಮಿಸಿದ ತನ್ಮಯ್ ಮಂಜುನಾಥ್ ದಿನನಿತ್ಯ ಸಾಗರದ ಹೆಸರಂತ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ ನಾಗೇಂದ್ರ ಪಂಡಿತ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು ತರಬೇತುದಾರರ ಮತ್ತು ಹೆತ್ತವರ ಸಂಪೂರ್ಣ ಸಹಕಾರ ನನ್ನ ಕ್ರಿಕೆಟ್ ಕಲಿಕೆಗೆ ಇರುವುದರಿಂದಲೆ ಈ ದಾಖಲೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ ಮುಂದೆ ರಾಜ್ಯ ಮತ್ತು ರಾಷ್ಟ್ರೀಯ ತಂಡದಲ್ಲಿ ಆಡಬೇಕೆನ್ನುವುದು ನನ್ನ ಗುರಿಯಾಗಿದೆ ಅದಕ್ಕಾಗಿ ಹಗಲಿರುಳು ಶ್ರಮಿಸುತ್ತೇನೆ ನನ್ನೂರು ನನ್ನ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರುತ್ತೇನೆಂದು ಮಾಧ್ಯಮ ಮುಂದೆ ತಮ್ಮ ಸಂತೋಷ ಮತ್ತು ಮುಂದಿನ ಗುರಿಯನ್ನು ಹಂಚಿಕೊಂಡಿದ್ದಾರೆ.
ನಾವೆಲ್ಲರೂ ರಾಜ್ಯದ ಇತಿಹಾಸದಲ್ಲೇ ಇದುವರೆಗೂ ಕೆಎಸ್‌ಸಿಎ ಆಶ್ರಯದಲ್ಲಿ ನೆಡೆದ ಯಾವುದೇ ವಲಯಮಟ್ಟದ ಪಂದ್ಯಾವಳಿಯಲ್ಲಿ ಯಾವುದೇ ಆಟಗಾರ ಮಾಡದ ದಾಖಲೆ ಮಾಡಿದ ಹದಿನಾರ ಫೋರ ತನ್ಮಯ್ ಮಂಜುನಾಥ್ ಅವರಿಗೆ ಶುಭ ಹಾರೈಸೋಣ ಮುಂದಿನ ಅವರ ಕ್ರಿಕೆಟ್ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎನ್ನುವುದು ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ…….
ಅಲ್ ದೀ ಬೆಸ್ಟ್ ತನ್ಮಯ್ ಮಂಜುನಾಥ್