*ಇತಿಹಾಸ ಸೃಷ್ಟಿಸಲು ಸಜ್ಜಾದ ಅವಿಘ್ನ ಸೃಷ್ಟಿ*
ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ, ಅವಿಘ್ನ ಸೃಷ್ಟಿ ತಂಡದ ಉಸ್ತುವಾರಿಯಲ್ಲಿ ನಡೆಯಲಿರುವ ಐತಿಹಾಸಿಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ಉದ್ಘಾಟನೆಗೆ ಇನ್ನು ಕೇವಲ 4 ದಿನಗಳಷ್ಟೇ ಬಾಕಿ ಉಳಿದಿದೆ.
ಈ ನಡುವೆ 12 ಶ್ರೀಮಂತ ಫ್ರಾಂಚೈಸಿಗಳು ಪ್ರತಿಷ್ಠಿತ ಹೋಟೇಲೆಗಳಲ್ಲಿ ಸಭೆ ನಡೆಸಿ,ಪ್ರತ್ಯೇಕ ಮೈದಾನಗಳಲ್ಲಿ ಅಭ್ಯಾಸ ನಡೆಸಿ,ತನ್ನ ತಂಡದ ನಾಯಕನನ್ನು ಆಯ್ಕೆ ಮಾಡಿದ್ದು ಅನುಭವಿ ಆಟಗಾರರಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.
*ರಾಜ್ಯದ 12 ಅನುಭವಿ ಆಟಗಾರರಿಗೆ ನಾಯಕನ ಪಟ್ಟ.*
1)ಗುರು ಪ್ರಸಾದ್ ರವರ ಸಾರಥ್ಯದ ಗುರು ಕ್ರಿಕೆಟರ್ಸ್ ತಂಡಕ್ಕೆ ಅಶೋಕ್ ಪಿಳ್ಳೆಯನ್ನು ನಾಯಕನಾಗಿ ಆಯ್ಕೆ ಮಾಡಿದೆ.ಬರಸಿಡಿಲಿನ ಹೊಡೆತಗಳ ಆಟಗಾರ ಅಶೋಕ್ ಪಿಳ್ಳೆ ,M.B.C.C ತಂಡದ ಆರಂಭಿಕ ಆಟಗಾರನಾಗಿ ಸ್ಪೋಟಕ ಹೊಡೆತಗಳ ಮೂಲಕ ಛಾಪನ್ನು ಮೂಡಿಸಿದ್ದಾರೆ.ಅತಿಥಿ ಆಟಗಾರನಾಗಿ ರಾಜ್ಯದ ಪ್ರತಿಷ್ಠಿತ ತಂಡಗಳನ್ನು ಪ್ರತಿನಿಧಿಸಿದ್ದಾರೆ.
2)ಮಟ್ಕಲ್ ತುಮಕೂರು ತಂಡ ರಾಜಾ ಸಾಲಿಗ್ರಾಮ ಇವರನ್ನು ತಂಡದ ನಾಯಕನಾಗಿ ಆಯ್ಕೆ ಮಾಡಿದೆ.ರಾಜಾ ಸಾಲಿಗ್ರಾಮ ಜಾನ್ಸನ್ ಕುಂದಾಪುರ ತಂಡದ ಪರವಾಗಿ ಹಲವಾರು ರಾಜ್ಯಮಟ್ಟದ ಪಂದ್ಯಾಟಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕ್ರೀಡಾಭಿಮಾನಿಗಳ ಹೃದಯ ಗೆದ್ದ ಆಟಗಾರ.ಕೊಲ್ಲಿ ರಾಷ್ಟಗಳಲ್ಲೂ ಪ್ರತಿಷ್ಠಿತ ತಂಡಗಳನ್ನು ಪ್ರತಿನಿಧಿಸಿ ತನ್ನೂರಿಗೆ ಕೀರ್ತಿಯನ್ನು ತಂದಿದ್ದಾರೆ.ಉಡುಪಿಯ ರಿಯಲ್ ಫೈಟರ್ಸ್ ತಂಡದ ಪರವಾಗಿ ಶ್ರೇಷ್ಠ ಆಟ ಪ್ರದರ್ಶಿಸಿದ್ದಾರೆ.
3)ರಂಗ ಇಲೆವೆನ್ ತಂಡದ ರಾಜ್ಯದ ಪ್ರಸಿದ್ಧ ತಂಡ ನ್ಯಾಶ್ ಬೆಂಗಳೂರಿನ ಆಲ್ರೌಂಡರ್ ಆಟಗಾರ ಅಪೆಕ್ಸ್ ಇವರನ್ನು ನಾಯಕನಾಗಿ ಆಯ್ಕೆ ಮಾಡಿದೆ.ಅಪೆಕ್ಸ್ ನ್ಯಾಶ್ ಬೆಂಗಳೂರು ತಂಡದ ಬ್ರಹ್ಮಾಸ್ತ್ರ.ತನ್ನ ಶ್ರೇಷ್ಠ ಮಟ್ಟದ ಬೌಲಿಂಗ್ ಮತ್ತು ಉಪಯುಕ್ತ ಸಂದರ್ಭದಲ್ಲಿ ಬ್ಯಾಟಿಂಗ್ ನಲ್ಲಿಯೂ ಮಿಂಚುವ ಮೂಲಕ ಮ್ಯಾಚ್ ವಿನ್ನರ್ ಎನಿಸಿಕೊಂಡವರು.ನ್ಯಾಶ್ ತಂಡವನ್ನು ಅಗ್ರಗಣ್ಯ ತಂಡವನ್ನಾಗಿ ರೂಪಿಸುವಲ್ಲಿ ಅಪೆಕ್ಸ್ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
4)ನಾಗಾ ಇಲೆವೆನ್ ಕೆ.ಆರ್.ಪುರಂ ತಂಡ ಜೈ ಕರ್ನಾಟಕ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ಇವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ.ಅರಸೀಕೆರೆ ಮೂಲದ ಡೇವಿಡ್ ಜೈ ಕರ್ನಾಟಕ ತಂಡದ ಪರವಾಗಿ ಉಪಯುಕ್ತ ಸಂದರ್ಭಗಳಲ್ಲಿ ರನ್ನಿನ ಹೊಳೆ ಹರಿಸಿದ ಓರ್ವ ನಂಬಿಕಸ್ಥ ಆಟಗಾರ.ಎದುರಾಳಿ ಎಷ್ಟೇ ಪ್ರಬಲ ಎಸೆತಗಾರನಿದ್ದರೂ ಲೆಕ್ಕಿಸದೇ ಬ್ಯಾಟ್ ಬೀಸುವ ಡೇವಿಡ್ ರನ್ ಗತಿಯನ್ನು ಏರಿಸುವಲ್ಲಿ ನಿಸ್ಸೀಮರು.
5)ಸ್ನೇಹಜೀವಿ ಮೈಸೂರು ತಂಡ ಜೈ ಕರ್ನಾಟಕದ ಅನುಭವಿ ವಿಕೆಟ್ ಕೀಪರ್ ಶಂಕರ್ ಇವರನ್ನು ನಾಯಕನಾಗಿ ಆಯ್ಕೆ ಮಾಡಿದೆ.ಜೈ ಕರ್ನಾಟಕ ತಂಡದ ಹಿರಿಯ ಆಟಗಾರರೊಡನೆ ಪಳಗಿದ ಶಂಕರ್ ತನ್ನ ಅನುಭವದ ಮೂಲಕವೇ ತನ್ನ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದವರು.ಚಮಕ್ ಬೆಂಗಳೂರು,ನ್ಯಾಶ್ ಬೆಂಗಳೂರು ತಂಡದ ಪರವಾಗಿ ಬಹಳಷ್ಟು ವರ್ಷಗಳ ಕಾಲ ಆಡಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ.
6)ರಾಕರ್ಸ್ ರಾಗಿಗುಡ್ಡ ತಂಡ ಎ.ಕೆ.ಸ್ಪೋರ್ಟ್ಸ್ ಕ್ಲಬ್ ಉಡುಪಿ ತಂಡದ ಅದೃಷ್ಟದ ನಾಯಕ ಸಂಪತ್ ಬೈಲಾಕೆರೆ ಇವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ಉಡುಪಿಯ ಸಂಪತ್ ಬೈಲಾಕೆರೆ ಎ.ಕೆ.ಉಡುಪಿ ತಂಡದ ಆರಂಭಿಕ ಆಟಗಾರರಾಗಿ ತನ್ನ ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಮೂಲಕ ಕ್ರೀಡಾ ಪ್ರೇಮಿಗಳ ಹೃದಯ ಗೆದ್ದ ಆಟಗಾರ.ತಂಡದ ನಾಯಕನಾಗಿ ಸಾಲು ಸಾಲು ಪ್ರತಿಷ್ಠಿತ ರಾಜ್ಯಮಟ್ಟದ ಪಂದ್ಯಾಟದಲ್ಲಿ ಎ.ಕೆ.ಉಡುಪಿಯನ್ನು ಚಾಂಪಿಯನ್ ತಂಡವನ್ನಾಗಿ ಮೂಡಿಸಿ ಅದೃಷ್ಟದ ನಾಯಕ ಎನಿಸಿಕೊಂಡಿದ್ದಾರೆ.
7)ಎಮ್.ಕೆ.ಎಸ್ ಕೋಲಾರ ತಂಡದ ನಾಯಕನನ್ನಾಗಿ ಫ್ರೆಂಡ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಟ್ರಂಪ್ ಕಾರ್ಡ್ ರಾಕರ್ಸ್ ನವೀನ ಇವರನ್ನು ಆಯ್ಕೆ ಮಾಡಿದೆ.ಪ್ರಾರಂಭದ ದಿನಗಳಲ್ಲಿ ಯಲಹಂಕ ರಾಕರ್ಸ್ ತಂಡದ ನಂಬಿಕಸ್ಥ ಆಟಗಾರನಾಗಿ ಗುರುತಿಸಿಕೊಂಡು ರಾಕರ್ಸ್ ಪಡೆಯನ್ನು ಬಲಿಷ್ಠ ಪಡೆಯನ್ನಾಗಿ ರೂಪಿಸಿದವರು ನವೀನ್.ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ನವೀನ್ ಫ್ರೆಂಡ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರನಾಗಿ ಫ್ರೆಂಡ್ಸ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
8)ಶಿವಗಂಗಾ ದಾವಣಗೆರೆ ತಂಡ ನ್ಯಾಶ್ ಬೆಂಗಳೂರು ತಂಡದ ಪ್ರಸಿದ್ಧ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಚೇತನ್ ಜಾನಿ ಇವರಿಗೆ ನಾಯಕನ ಜವಾಬ್ದಾರಿ ವಹಿಸಿದೆ.ಚೇತನ್ ಜಾನಿ ನ್ಯಾಶ್ ಬೆಂಗಳೂರು ತಂಡದ ಮಧ್ಯಮ ಸರದಿಯ ನಂಬಿಕಸ್ಥ ಆಟಗಾರ.ಅದೆಷ್ಟೋ ಬಾರಿ ಆರಂಭಿಕ ಆರಂಭಿಕ ಕ್ರಮಾಂಕದ ಆಟಗಾರರ ಹಠಾತ್ ವಿಕೆಟ್ ಕುಸಿತ್ ಸಂದರ್ಭದಲ್ಲಿ,ಕ್ರೀಸ್ ನಲ್ಲಿ ಭದ್ರವಾಗಿ ತಳವೂರಿ ಗೆಲುವಿನ ಇನ್ನಿಂಗ್ಸ್ ಕಟ್ಟಿದ್ದಾರೆ.ವಿಕೆಟ್ ಕೀಪಿಂಗ್ ನಲ್ಲೂ ತನ್ನ ತಂಡದ ಪರವಾಗಿ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ.
9)ಕ್ರಿಕೆಟ್ ನಕ್ಷತ್ರ ಮಂಗಳೂರು ತಂಡ ಜೈ ಕರ್ನಾಟಕ ಬೆಂಗಳೂರು ತಂಡದ ಆಲ್ರೌಂಡರ್ ಸಚಿನ್ ಮಹಾದೇವ್ ಇವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.ಅರಸೀಕೆರೆ ಮೂಲದ ಸಚಿನ್ ಮಹಾದೇವ್ ಜೈ ಕರ್ನಾಟಕ ಬೆಂಗಳೂರು ತಂಡದ ಪ್ರಬಲ ಬ್ರಹ್ಮಾಸ್ತ್ರ.ತನ್ನ ಶ್ರೇಷ್ಠ ಮಟ್ಟದ ಬೌಲಿಂಗ್,ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ಶ್ರೇಷ್ಠ ಮಟ್ಟದ ಹಿಡಿತ ಸಾಧಿಸಬಲ್ಲ ಸಚಿನ್ ಮಹಾದೇವ್ ಜೈ ಕರ್ನಾಟಕ ಬೆಂಗಳೂರು ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
10)ಕ್ರಿಶಾ ಇಲೆವೆನ್ ತಂಡದ ನಾಯಕನ ಜವಾಬ್ದಾರಿ ಡೈನಾಮಿಕ್ ಡ್ಯಾಶರ್ಸ್ ಬೆಂಗಳೂರು ತಂಡದ ಡ್ಯಾಶಿಂಗ್ ಓಪನರ್ ಕಿಝರ್ ಇವರಿಗೆ ನೀಡಿದೆ.ಕರ್ನಾಟಕ ಇಂಡೋರ್ ಕ್ರಿಕೆಟ್ ತಂಡದ ನಾಯಕ ಕಿಝರ್ ಡೈನಾಮಿಕ್ ಡ್ಯಾಶರ್ಸ್ ಬೆಂಗಳೂರು ತಂಡದಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಆಟಗಾರ.ಎಮ್.ಬಿ.ಸಿ.ಸಿ ಬೆಂಗಳೂರು ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ರನ್ನಿನ ಹೊಳೆ ಹರಿಸಿದ ಕಿಝರ್ ರಾಜ್ಯದ ಪ್ರತಿಷ್ಠಿತ ತಂಡಗಳ ಪರವಾಗಿ ಅತಿಥಿ ಆಟಗಾರನಾಗಿ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ್ದಾರೆ.
11)ತ್ರಿಶೂಲ್ ಸೇನಾ ಜೈ ಕರ್ನಾಟಕ ಬೆಂಗಳೂರು ತಂಡದ ನಂಬಿಕಸ್ಥ ಆಲ್ರೌಂಡರ್ ಮೊಹ್ಸಿನ್ ಇವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.ಮೊಹ್ಸಿನ್ ತನ್ನ ತಂಡದ ಪರವಾಗಿ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಈ ಮೂರು ವಿಭಾಗದಲ್ಲಿ ಮಿಂಚಿದ ಆಟಗಾರ.ಎಂತಹ ಸಂದರ್ಭದಲ್ಲೂ ಧೃತಿಗೆಡದೆ ಧೈರ್ಯವಾಗಿ ಮುನ್ನುಗ್ಗಬಲ್ಲ ಸಾಮರ್ಥ್ಯದ ಮೊಹ್ಸಿನ್ ಅತ್ಯಂತ ಜೈ ಕರ್ನಾಟಕ ಬೆಂಗಳೂರು ತಂಡದ ಯಶಸ್ಸಿನ ರೂವಾರಿಗಳಲ್ಲೋರ್ವರು.
12)ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ತಂಡ ಜೈ ಕರ್ನಾಟಕ ಬೆಂಗಳೂರು ತಂಡದ ಜನಪ್ರಿಯ ಆಲ್ರೌಂಡರ್ ಆಟಗಾರ ಮಾರ್ಕ್ ಮಹೇಶ್ ಇವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.ಸಣ್ಣ ವಯಸ್ಸಿನಲ್ಲೇ ಹಿರಿಯ ತಂಡದ ಜೈ ಕರ್ನಾಟಕದ ನಾಯಕತ್ವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಮಾರ್ಕ್ ಮೈದಾನದಲ್ಲಿ ಮೂರು ವಿಭಾಗಗಳಲ್ಲೂ ಮೇಲುಗೈ ಸಾಧಿಸಿಬಲ್ಲರು.ಜೈ ಕರ್ನಾಟಕ ಬೆಂಗಳೂರು ತಂಡ ಸಾಲು ಸಾಲು ಯಶಸ್ಸಿನಲ್ಲಿ ಮಾರ್ಕ್ ಮಹೇಶ್ ಅದ್ಭುತ ಪ್ರದರ್ಶನದ ಸಿಂಹ ಪಾಲಿದೆ.