ಕೋಟೇಶ್ವರ: ನ್ಯೂ ಫ್ರೆಂಡ್ಸ್ ಕ್ರಿಕೆಟರ್ಸ್ ಕೋಟೇಶ್ವರ ಇವರ ಆಶ್ರಯದಲ್ಲಿ 76 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಲೀಗ್ ಮಾದರಿಯ 60 ಗಜಗಳ ಕೆ.ಪಿ.ಎಲ್ ಸೀಸನ್-11 ಕ್ರಿಕೆಟ್ ಪಂದ್ಯಾಟವನ್ನು ಆಗಸ್ಟ್ 15 ರಂದು ಕೋಟೇಶ್ವರ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.
ನ್ಯೂ ಫ್ರೆಂಡ್ಸ್ ಕ್ರಿಕೆಟರ್ಸ್ ಕೋಟೇಶ್ವರ ಇದರ ಸದಸ್ಯರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪಂದ್ಯಾವಳಿ ಯಶಸ್ವಿಯಾಯಿತು. ಎಲ್ಲಾ ತಂಡಗಳು
ಅತ್ಯಂತ ಉತ್ಸಾಹ ಮತ್ತು ಕ್ರೀಡಾಮನೋಭಾವದಿಂದ ಭಾಗವಹಿಸಿದರು.
ಅಂತಿಮವಾಗಿ ಕೊಂಕಣ್ ಎಕ್ಸ್ ಪ್ರೆಸ್ ಕೋಟೇಶ್ವರ ಮತ್ತು ವಿಜಯ ಕ್ರಿಕೆಟರ್ಸ್ ಕೋಟೇಶ್ವರ ನಡುವೆ ಫೈನಲ್ ಪಂದ್ಯ ನಡೆಯಿತು, ಇದರಲ್ಲಿ ಕೊಂಕಣ್ ಎಕ್ಸ್ ಪ್ರೆಸ್ ಜಯಭೇರಿ ಬಾರಿಸಿ ವಿಜಯಶಾಲಿಯಾಯಿತು.
ಪ್ರಶಸ್ತಿ ವಿಜೇತ ಕೊಂಕಣ ಎಕ್ಸ್ ಪ್ರೆಸ್56789 ರೂ,ರನ್ನರ್ ಅಪ್- ವಿಜಯ್ ಕ್ರಿಕೆಟರ್ಸ್ 43,210 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ಫೈನಲ್ ಪಂದ್ಯ ಶ್ರೇಷ್ಠ ಮತ್ತು ಪಂದ್ಯಾಟದ ಅತ್ಯುತ್ತಮ ಬ್ಯಾಟರ್ ಶರತ್ ಉತ್ತಪ್ಪ,ಅತ್ಯುತ್ತಮ ಬೌಲರ್- ಹರೀಶ್ ಪ್ರಗತಿ,ಅತ್ಯುತ್ತಮ ಫೀಲ್ಡರ್- ಸುಕೇಶ್,ನಯಾಜ್ ಸರಣಿ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.
ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಪ್ರೋತ್ಸಾಹಕರಾದ ಸುಭಾಸ ಶೆಟ್ಟಿ ಕೋಟೇಶ್ವರ, ಇಮ್ರಾನ್ ಕೋಟೇಶ್ವರ, ಶ್ರೀಧರ್ ನಾಯ್ಕ್, ನರೇಶ್ ಭಟ್. ಸರ್ದಾರ್, ರಂಜನ್ ಮಿಥ್ಯಾಂತಾಯ ಮತ್ತು ರಾಜೇಶ್ ಪ್ರಭು ಉಪಸ್ಥಿತರಿದ್ದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಭಾಗವಹಿಸಿದ ಎಲ್ಲಾ ತಂಡಗಳ ಆಟಗಾರರ ಮತ್ತು ಆಯೋಜಕರ ಪ್ರಯತ್ನವನ್ನು ಶ್ಲಾಘಿಸಿದರು.