ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ಇವರ ಆಶ್ರಯದಲ್ಲಿ 4 ನೇ ಬಾರಿಗೆ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್ ಪಂದ್ಯಾಟ “ಫ್ರೆಂಡ್ಸ್ ಟ್ರೋಫಿ-2021” ಆಯೋಜಿಸಲಾಗಿದೆ.
ಏಪ್ರಿಲ್ 3 ಮತ್ತು 4 ರಂದು ಸ.ಹಿ.ಪ್ರಾ.ಶಾಲೆ(ಕರ್ನಾಟಕ ಪಬ್ಲಿಕ್ ಸ್ಕೂಲ್)ಅಂಗಣದಲ್ಲಿ ಜರಗುವ ಈ ಪಂದ್ಯಾಟದಲ್ಲಿ ಆಯಾಯಾ ಏರಿಯಾಕ್ಕೆ ಸಂಬಂಧಿಸಿದ ಆಟಗಾರರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.
ಪ್ರಥಮ ಬಹುಮಾನ ವಿಜೇತ ತಂಡ 30,333 ರೂ,ದ್ವಿತೀಯ ಸ್ಥಾನಿ 20,222 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡುವ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ.
ಮಾರ್ಚ್ 29 ನೋಂದಣಿಗೆ ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ 7676996647,7899157311, 6360175799 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
ಮಲ್ಯಾಡಿ ಲೈವ್ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಗೂ NXT Digital ಟಿ.ವಿ ಚಾನೆಲ್ ಪಂದ್ಯಾಟದ ನೇರಪ್ರಸಾರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.