ಫ್ರೆಂಡ್ಸ್ ಗ್ರೂಪ್ ಇವರ ಆಶ್ರಯದಲ್ಲಿ ಗಿಳಿಯಾರಿನ ಯುವ ಸಂಘಟಕ ಅಮರ್ ಶೆಟ್ಟಿ ಸಾರಥ್ಯದಲ್ಲಿ,ಸತತ 4 ನೇ ಬಾರಿಗೆ

ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ,ಅತ್ಯಂತ ಕಡಿಮೆ ಪ್ರವೇಶ ದರ ನಿಗದಿ ಪಡಿಸಿ,ಜನವರಿ 9 ಮತ್ತು 10 ರಂದು
ಕೋಟ ಗಿಳಿಯಾರಿನ ಸಣ್ಣಬಸವನಕಲ್ಲು ಹಕ್ಲು ಅಂಗಣದಲ್ಲಿ 40 ಗಜಗಳ ಹಗಲಿನ ಕ್ರಿಕೆಟ್ ಪಂದ್ಯಾವಳಿ “ಫ್ರೆಂಡ್ಸ್ ಟ್ರೋಫಿ-2021” ಆಯೋಜಿಸಲಾಗಿದೆ.
ಜನವರಿ 9 ರಂದು ಮುಕ್ತ ತಂಡಗಳಿಗೆ ಹಾಗೂ 10 ರಂದು ಆಯಾ ಏರಿಯಾಕ್ಕೆ ಸಂಬಂಧಿಸಿದ(ಆಧಾರ್ ಕಾರ್ಡ್ ದಾಖಲೆ ಸಹಿತ) ತಂಡಗಳಿಗೆ ಅವಕಾಶ ನೀಡಲಾಗುತ್ತಿದೆ.

ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 15,000,ದ್ವಿತೀಯ ಸ್ಥಾನಿ 7,500 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ಕ್ರೀಡಾಸ್ಪೂರ್ತಿ ಮೆರೆದ ತಂಡಕ್ಕೆ ಶಿಸ್ತುಬದ್ಧ ತಂಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರತಿ ಪಂದ್ಯಕ್ಕೂ ಪಂದ್ಯಶ್ರೇಷ್ಟ,ಉತ್ತಮ ಎಸೆತಗಾರ,ದಾಂಡಿಗ ಪ್ರಶಸ್ತಿ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆವ ಆಟಗಾರನ ಸ್ಯಾಮ್ಸಂಗ್ M 1 ಮೊಬೈಲ್ ಉಡುಗೊರೆ ಪಡೆಯಲಿದ್ದಾರೆ.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪಡೆದ ಆಟಗಾರನಿಗೆ ಬ್ರಾಂಡೆಡ್ ಶೂ ಹಾಗೂ ಚಾಂಪಿಯನ್ಸ್ ತಂಡದ ಎಲ್ಲಾ ಆಟಗಾರರಿಗೆ ಪದಕವನ್ನು ನೀಡಲಾಗುತ್ತಿದೆ.
ಸಮಾರೋಪ ಸಮಾರಂಭದಲ್ಲಿ ಗಿಳಿಯಾರಿನ ಮೂವರು ಹಿರಿಯ ಆಟಗಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.