ಕೋಲಾರ : M.K.S ಗ್ರೂಪ್ಸ್ ನ ಪ್ರಾಯೋಜಕತ್ವದಲ್ಲಿ,ಮಾಲೀಕ ದೀಮ್ ಅಖ್ತರ್ ದಕ್ಷ ಸಾರಥ್ಯದಲ್ಲಿ, ಪಂದ್ಯಾಕೂಟದ ಪ್ರಧಾನ ರೂವಾರಿ ಕಾರ್ತಿಕ್ ರೆಡ್ಡಿ ಜಾಕಿ (ರಾಕರ್ಸ್) ಹಾಗೂ ಸ್ನೇಹಿತರ ಸತತ 25 ದಿನಗಳ ಅವಿರತ ಶ್ರಮದಿಂದ 4 ದಿನಗಳ ಕಾಲ ಕೋಲಾರದ ಶ್ರೀನಿವಾಸಪುರದಲ್ಲಿ ನಡೆದ ಶ್ರೀನಿವಾಸಪುರ ಪ್ರಿಮಿಯರ್ ಲೀಗ್ MKS Cup-2019 ಟ್ರೋಫಿಯನ್ನು ನದೀಮ್ ಅಖ್ತರ್ ನೇತೃತ್ವದ ಸೈ ಬಾಯ್ಸ್ ಗೆದ್ದುಕೊಂಡಿತು.
ಶ್ರೀನಿವಾಸಪುರ ಪರಿಸರದ ಯುವ ಪ್ರತಿಭೆಗಳ ಅನ್ವೇಷಣೆ ಹಾಗೂ ಕ್ರೀಡಾ ಬಾಂಧವ್ಯ ವರ್ಧನೆಯ ಉದ್ದೇಶದಿಂದ ಟೂರ್ನಮೆಂಟ್ ಆಯೋಜಿಸಲಾಗಿತ್ತು.ಪ್ರಿಮಿಯರ್ ಲೀಗ್ ಪಂದ್ಯಾಕೂಟದಲ್ಲೇ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದ ಈ ಪಂದ್ಯಾಕೂಟದಲ್ಲಿ, ಈ ಬಾರಿ 10 ಫ್ರಾಂಚೈಸಿಗಳಲ್ಲಿ ರಾಜ್ಯದ 20 ಪ್ರತಿಷ್ಟಿತ ತಂಡದ ಪ್ರಬಲ ಆಲ್ ರೌಂಡರ್ ಗಳಲ್ಲಿ ಇಬ್ಬರು ಆಟಗಾರರು ಒಂದೊಂದು ತಂಡದಲ್ಲಿ ಐಕಾನ್ ಆಟಗಾರರ ರೂಪದಲ್ಲಿ ಪ್ರತಿನಿಧಿಸಿದ್ದರು ಹಾಗೂ ದಾಖಲೆಯ ಪ್ರದರ್ಶನಗೈದರು.
ಒಂದೊಂದು ಫ್ರಾಂಚೈಸಿಗಳು ಲೀಗ್ ಹಂತದಲ್ಲಿ 4 ಬಾರಿ ಮುಖಾಮುಖಿಯಾಗಿದ್ದರು. ರೋಚಕ ರೋಮಾಂಚಕಾರಿ ಅಂತ್ಯ ಕಂಡ ಲೀಗ್ ಹಂತದ ಪಂದ್ಯಾಟಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ರೈಸಿಂಗ್ ಸ್ಟಾರ್ ತಂಡ ಫ್ರೆಂಡ್ಸ್ ಎಟ್ಯಾಕರ್ಸ್ ತಂಡವನ್ನು ಹಾಗೂ ಸೈ ಬಾಯ್ಸ್ ತಂಡ ಚ್ಯಾಲೆಂಜರ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದಿದ್ದರು.
ಫೈನಲ್ ನಲ್ಲಿ ಟಾಸ್ ಜಯಿಸಿದ ಸೈ ಬಾಯ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ರೈಸಿಂಗ್ ಸ್ಟಾರ್ ತಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದರು.ಸವಾಲಿನ ಮೊತ್ತವನ್ನು ಅನಾಯಾಸವಾಗಿ ಬೆಂಬತ್ತಿದ ಸೈ ಬಾಯ್ಸ್ ತಂಡ ಸ್ಪೋಟಕ ಆರಂಭಿಕ ಆಟಗಾರ ಸಲೀಂ ದಾಂಡಿನಿಂದ ಸಿಡಿದ 3 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 27 ರನ್ ಸಡಿಸಿ ಕೇವಲ 4 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿ MKS ಟ್ರೋಫಿ ತನ್ನದಾಗಿಸಿಕೊಂಡಿತು.
ವಿಜಯಿ ಸೈ ಬಾಯ್ಸ್ ತಂಡ ಆಕರ್ಷಕ ಟ್ರೋಫಿ ಸಹಿತ 1,55,555 ನಗದು ರನ್ನರ್ ಅಪ್ ತಂಡ ಆಕರ್ಷಕ ಟ್ರೋಫಿ ಸಹಿತ 75,555 ನಗದು ಪಡೆದುಕೊಂಡರು.
ವೈಯಕ್ತಿಕ ಪ್ರಶಸ್ತಿಗಳು ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಫ್ರೆಂಡ್ಸ್ ಎಟ್ಯಾಕರ್ಸ್ ಸಾಗರ್ ಭಂಡಾರಿ, ಸರಣಿಶ್ರೇಷ್ಟ ಪ್ರಶಸ್ತಿ ಸೈ ಬಾಯ್ಸ್ ಸಲೀಂ, ಬೆಸ್ಟ್ ಬೌಲರ್ ಸತೀಶ್ ಸಾ,ಬೆಸ್ಟ್ ಕೀಪರ್ ಮಾರ್ಕ್ ಮಹೇಶ್ ಹಾಗೂ ಅದ್ಭುತ ಕ್ಯಾಚ್ ಪಡೆದ ಸಚಿನ್ ಮಹಾದೇವ್ ಬೆಸ್ಟ್ ಫೀಲ್ಡರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
M.K.S cup ನ ಈ ವ್ಯವಸ್ಥಿತ ಪಂದ್ಯಾಕೂಟದಲ್ಲಿ ಹಲವಾರು ದಾಖಲೆಗಳು ಸೃಷ್ಟಿಯಾದವು.ರನ್ ಚೇಸಿಂಗ್ ವೇಳೆ ಸ್ಟಾರ್ ಓವರ್ಟೆಕ್ಸ್ ನ ಸ್ವಸ್ತಿಕ್ ಸಿಡಿಸಿದ 10 ಸಿಕ್ಸರ್ ಸಹಿತ ಕೇವಲ 27 ಎಸೆತಗಳಲ್ಲಿ ಸಿಡಿಸಿದ 84 ರನ್,ಸಲೀಂ ಸಿಡಿಸಿದ 2 ಅರ್ಧ ಶತಕಗಳು,ವೆಂಕಿ 1,ಸಂದೀಪ್ ಕೀನ್ಯಾ 1 ಅರ್ಧಶತಕ ಹಾಗೂ ಬೌಲಿಂಗ್ ನಲ್ಲಿ ಮೊಹ್ಸಿನ್ ಹಾಗೂ ಸತೀಶ್ ಸಾ ಗಳಿಸಿದ ಹ್ಯಾಟ್ರಿಕ್ ವಿಕೆಟ್ ದಾಖಲೆಯ ಪುಟಗಳನ್ನು ಸೇರಿದವು. ಚರಣ್ ಫ್ಯಾಷನ್ಸ್ ಮಾಲೀಕ ನಾರಾಯಣ್ ಹಾಗೂ ಅ್ಯಾಂಬ್ರೋ ಗ್ರೂಪ್ ನ ಮಾಲೀಕ ಅಂಬರೀಶ್ ಅವರು ಆಟಗಾರರಿಗೆ ಘೋಷಿಸಿದ್ದ ನಗದು ಬಹುಮಾನಗಳನ್ನು ಸಲೀಂ,ಸಾಗರ್ ಭಂಡಾರಿ,ಮಾರ್ಕ್ ಮಹೇಶ್ ಇನ್ನಿತರ ಆಟಗಾರರು ತಕ್ಕುದಾದ ಆಟ ಪ್ರದರ್ಶಿಸಿ ಪಡೆದುಕೊಂಡರು.
ಪಂದ್ಯಾಕೂಟದ ಅಂತಿಮ ದಿನ ರವಿವಾರ ಸುರಿದ ಧಾರಾಕಾರ ಮಳೆಗೆ ಜಗ್ಗದ ಶ್ರೀನಿವಾಸಪುರದ ತಂಡ ಸೋಮವಾರಕ್ಕೆ ಪಂದ್ಯಾಟ ಮುಂದೂಡಿ ಸುಮಾರು 60,000 ರೂ ಹಣ ವ್ಯಯಿಸಿ ಮತ್ತೆ ಪ್ರಶಸ್ತಿ ನಿರ್ಣಾಯಕ ಪಂದ್ಯಗಳಿಗೆ ಪಿಚ್ ನ್ನು ಅಣಿಗೊಳಿಸಿ M.K.S ಗ್ರೂಪ್ ಕ್ರೀಡಾ ಸ್ಪೂರ್ತಿ ಮೆರೆಯಿತು.ಈ ಪಂದ್ಯಾಕೂಟದ ಭರ್ಜರಿ ಯಶಸ್ಸಿನ ಹಿಂದೆ ಪ್ರಧಾನ ರೂವಾರಿ ಕಾರ್ತಿಕ್ ರೆಡ್ಡಿ ಜಾಕಿ(ರಾಕರ್ಸ್) ಬಹುಮುಖ್ಯ ಪಾತ್ರ ನಿರ್ವಹಿಸಿದರು.ಚಂದು ಮಾಲೂರು,ನೀಲು,ಸಲ್ಮಾನ್ ಜೊತೆಯಾಗಿ ಕ್ರೀಡಾ ಪ್ರೋತ್ಸಾಹಕ,ತಿರುಪತಿ ಪೈ ವೈಸ್ ರಾಯ್ ಹೋಟೆಲ್ ಜನರಲ್ ಮೆನೇಜರ್ ಮದನ್ ಮೋಹನ್ ಕೋಲಾರ ಸಹಕಾರ ನೀಡಿದ್ದರು. ಸಮಾರೋಪ ಸಮಾರಂಭದಲ್ಲಿ M.K.S ಗ್ರೂಪ್ ನದೀಮ್ ಅಖ್ತರ್,ಮುಬಿನ್,ಆಕಿಬ್ ಹಾಗೂ ಕೋಟ ರಾಮಕೃಷ್ಣ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಕ್ರೀಡಾ ಸಾಧನೆಯಲ್ಲಿ ವಿಶೇಷ ಸಾಧನೆಗೈದ “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ಹಾಗೂ ಕ್ರೀಡಾ ಸಾಧಕರನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪಂದ್ಯಾಕೂಟದ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ನೇತೃತ್ವದ M.Sports ಬಿತ್ತರಿಸಿದ್ದು ಸಹಸ್ರಾರು ಕ್ರೀಡಾಭಿಮಾನಿಗಳು ಪಂದ್ಯಾಟ ವೀಕ್ಷಿಸಿದರು.ನಿರ್ಣಾಯಕರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಶ್ರೀನಿವಾಸಪುರದ ಸಹೃದಯಿ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದು,ವೀಕ್ಷಕ ವಿವರಣೆಗಾಗಿ ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲ್ಪಾಡಿ,ರಾಷ್ಟ್ರೀಯ ಭಾಷೆಯಲ್ಲಿ ಮಾಧವ ಶ್ಯಾನುಭೋಗ್ ಹಾಗೂ ಆಟಗಾರರ ಆಕ್ಷನ್ ಪ್ರಕ್ರಿಯೆ ಕೋಟ ಶಿವನಾರಾಯಣ ಐತಾಳ್ ನಿರ್ವಹಿಸಿದ್ದರು. ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸ್ಪೋರ್ಟ್ಸ್ ಕನ್ನಡ ಸಹಕರಿಸಿದರು.
ಆರ್.ಕೆ.ಆಚಾರ್ಯ ಕೋಟ