ಕೋಲಾರದ ಹಿರಿಯ ಸಂಸ್ಥೆ ಯಂಗ್ ಸ್ಟಾರ್ ಕ್ರಿಕೆಟರ್ಸ್ (Y.S.C) ಯುವ ಕ್ರಿಕೆಟಿಗರ ಪ್ರತಿಭಾನ್ವೇಷಣೆಯ ಸದುದ್ದೇಶದಿಂದ,ಫೆಬ್ರವರಿ 12,13 ಮತ್ತು 14 ರಂದು ಕೋಲಾರದ ಅಲ್-ಅಮೀನ್ ಗ್ರೌಂಡ್ ನಲ್ಲಿ Y.S.C ಜ್ಯೂನಿಯರ್ಸ್ ಲೀಗ್-2021 ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಿದ್ದಾರೆ.
ಟೂರ್ನಮೆಂಟ್ ನ ಪಂದ್ಯಾಟಗಳು 2 ವಿಭಾಗದಲ್ಲಿ ನಡೆಯಲಿದ್ದು.23 ರ ವಯೋಮಿತಿಯ ಪಂದ್ಯಗಳು ಲೀಗ್ ಮಾದರಿಯಲ್ಲಿ ನಡೆಯಲಿದ್ದು,
ಹಾಗೂ 23 ರ ವಯೋಮಿತಿ ನಂತರದ ಪಂದ್ಯಗಳು ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ.
ಪಂದ್ಯಾಕೂಟದ ಅಗ್ರಸ್ಥಾನಿ ತಂಡ 50,000 ನಗದು,ದ್ವಿತೀಯ ಸ್ಥಾನಿ 25,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ಇನ್ನಿತರ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ
ಶಾಹಿದ್-7676261616
ಇಫ್ತೇಕಾರ್-8884590889
ಜೈದ್-9449226038
ಉಸ್ಮಾನ್-8088918797
ಇವರನ್ನು ಸಂಪರ್ಕಿಸಬಹುದು.