ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ಜರುಗಿದ್ದ ವೈ.ಎಸ್.ಸಿ ಚಾಂಪಿಯನ್ಸ್ ಲೀಗ್ ಸೀಸನ್ 2ಫೈನಲ್ ನಲ್ಲಿ ಕೋಲಾರ ಅಟ್ಯಾಕರ್ಸ್ ತಂಡ,ಎಸ್.ಕೆ.ಎಸ್ ಕಿಸಾನ್ ಇಲೆವೆನ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿದೆ.
ಕೋಲಾರ ಜಿಲ್ಲೆಯ 12 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಲೀಗ್ ಹಂತದ ರೋಚಕ ಕದನಗಳ ಬಳಿಕ ಅಂತಿಮವಾಗಿ ಬಲಿಷ್ಠ ಕೋಲಾರ ಅಟ್ಯಾಕರ್ಸ್, ಎಮ್.ಎಸ್.ಎ ತಂಡವನ್ನು ಹಾಗೂ ಕಿಸಾನ್ ಇಲೆವೆನ್,ಸೈ ಬಾಯ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿತ್ತು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಟ್ಯಾಕರ್ಸ್ ತಂಡ ಮುರಳಿ,ಕಿರಣ್,ಶಿವು,ಭರತ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತ್ತು.ಕಠಿಣ ಗುರಿಯನ್ನು ಬೆಂಬತ್ತಿದ ಎಸ್.ಕೆ.ಎಸ್ ಕಿಸಾನ್ ಇಲೆವೆನ್ ತಂಡ ಕೊನೆಯ ಹಂತದ
ತೀವ್ರ ಹೋರಾಟದ ಬಳಿಕವೂ 4 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಲಷ್ಟೇ ಶಕ್ತವಾಯಿತು.
ವಿಜಯೀ ಅಟ್ಯಾಕರ್ಸ್ ತಂಡ ಪ್ರಥಮ ಪ್ರಶಸ್ತಿ ರೂಪದಲ್ಲಿ 1.5 ಲಕ್ಷ ನಗದು,ರನ್ನರ್ ಅಪ್ ಕಿಸಾನ್ ಇಲೆವೆನ್ 75 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಕಿರಣ್,ಬೆಸ್ಟ್ ಬೌಲರ್ ಪ್ರಶಸ್ತಿ ಪಿ.ಆರ್.ಡಬ್ಲ್ಯೂ ತಂಡದ ರಾಮ್ ಪಾಲಾದರೆ,ಟೂರ್ನಿಯುದ್ದಕ್ಕೂ ಬ್ಯಾಟಿಂಗ್,ಬೌಲಿಂಗ್ ವಿಭಾಗದಲ್ಲಿ ಮೇಲುಗೈ ಸಾಧಿಸಿ ಪ್ರೇಕ್ಷಕರನ್ನು ರಂಜಿಸಿದ ಮುರಳಿ ಸರಣಿಶ್ರೇಷ್ಟ ಗೌರವಕ್ಕೆ ಪಾತ್ರರಾದರು.
ಸಮಾರೋಪ ಸಮಾರಂಭದಲ್ಲಿ
ತಜ್ಜು ಭಾಯ್,ಮುಜ್ಜು ಭಾಯ್,
ಎಸ್.ಕೆ.ಎಸ್ ನ ಸೈಯ್ಯದ್ವುಲ್ಲಾ ಖಾನ್,ಎಸ್.ಡಿ.ಪಿ.ಐ ಕೋಲಾರ ಜಿಲ್ಲಾಧ್ಯಕ್ಷ ಶಾಮೀರ್ ಪಾಷಾ,ಬ್ರೈಟ್ ಸ್ಟಾರ್ ಇಂಟರ್ನ್ಯಾಷನಲ್ ಸ್ಕೂಲ್ ನ ಸಿ.ಇ.ಒ ಆಸೀಫುದ್ದೀನ್ ಖಾನ್,ಕೆ.ಜಿ.ಎನ್ ಟಿಂಬರ್ಸ್ ನ ಖಾಜಾ ಭಾಯ್,ಸಿ.ಎಮ್.ಸಿ ಸದಸ್ಯ ಸೈಯದ್ ಸಮೀವುಲ್ಲಾ,ಎ.ಎಸ್.ಎಮ್ ವೆಜಿಟೇಬಲ್ಸ್ ನ ಅಸ್ಲಾಮ್,ಟೂರ್ನಮೆಂಟ್ ನ ಆಯೋಜಕರಾದ ನಿಜಾಮ್,ನಿರಂಜನ್ ಹಾಗು ವೈ.ಎಸ್.ಸಿ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.ಅಟ್ಯಾಕರ್ಸ್ ತಂಡದ ನಾಯಕ ಎಲ್.ನಿರಂಜನ್ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಂತಹ ವೈ.ಎಸ್.ಸಿ ತಂಡದ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.
ಪಂದ್ಯಾವಳಿಯ ನೇರ ಪ್ರಸಾರವನ್ನು ಯಾಸೀನ್ ನೇತೃತ್ವದ Y.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸಿತ್ತು…