ಕೆ ಎಲ್ ರಾಹುಲ್ ಅವರು ೧೯೯೨ ಏಪ್ರಿಲ್ ೧೮ ರಂದು ಕೆ ಏನ್ ಲೋಕೇಶ್ ಮತ್ತು ರಾಜೇಶ್ವರಿ ಅವರ ಪುತ್ರನಾಗಿ ಮಂಗಳೂರಿನಲ್ಲಿ ಜನಿಸಿದರು. ತಂದೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಲ್ಲಿ ಪ್ರೊಫೆಸೋರ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದರು. ತಾಯಿ ಕೂಡ ಮಂಗಳೂರು ವಿಶ್ವವಿದ್ಯಾಲಯ ದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.
ರಾಹುಲ್ ಎಂಬ ಹೆಸರಿನ ಹಿಂದಿದೆ ರೋಚಕ ಕಥೆ
ತಂದೆ ಲೋಕೇಶ್ ಅವರು ಸುನಿಲ್ ಗವಾಸ್ಕರ್ ಅವರ ದೊಡ್ಡ ಅಭಿಮಾನಿ ಆಗಿದ್ದರು., ತಮ್ಮಮಗನಿಗೂ ಗವಾಸ್ಕರ್ ಅವರ ಮಗನ ಹೆಸರನ್ನೇ ಇಡಬೇಕೆಂದು ರಾಹುಲ್ಎಂದು ನಾಮಕರಣ ಮಾಡಿದರು ಆದರೆ ಅವರಿಗೆ ಗವಾಸ್ಕರ್ ಆದರೆ ಅವರಿಗೆ ಗವಾಸ್ಕರ್ ಅವರ ಮಗನ ಹೆಸರು ರೋಹನ್ ಎಂದು ತಿಳಿದಿದ್ದೆ ಸುಮಾರು ಸಮಯದ ನಂತರ. ಹಾಗಾಗಿ ರಾಹುಲ್ ಎಂದೇ ಉಳಿದುಕೊಂಡರು.
ಕ್ರಿಕೆಟ್ ಅಭ್ಯಾಸ
ರಾಹುಲ್ ಅವರು ಜೈನ ಕಾಲೇಜಿನಿಂದಲೇ ವೃತ್ತಿ ಪರ ಕ್ರಿಕೆಟ್ ನಟ್ಟ ಮುಖ ಮಾಡಿದರು.ಭಾರತದ ಹೆಸರಾಂತ ಧಂತಕತೆ ರಾಹುಲ್ ದ್ರಾವಿಡ್ ಅವರಿಂದ ಪ್ರಭಾವಿತರಾಗಿ ಅವರ ಬ್ಯಾಟಿಂಗ್ ಕಲೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದರು.
2010 ರ ಕಿರಿಯರ ವಿಶ್ವಕಪ್ ಕ್ರಿಕೆಟ್
ತಮ್ಮ ೧೧ ನೇ ವರ್ಷದಿಂದಲೇ ಕ್ರಿಕೆಟ್ ಕರಗತ ಮಾಡಿಕೊಂಡಿದ್ದ ರಾಹುಲ್ ಅವರು ಉತ್ತಮ ಪ್ರದರ್ಶನ ನೀಡಿ 2010 ರಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನಡೆದ ಕಿರಿಯರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಒಂದು ಪಂದ್ಯದಲ್ಲಿ ೬೨ ರನ್ ಗಳಿಸಿ ಗಮನ ಸೆಳೆದು ತಮ್ಮ ಬ್ಯಾಟಿಂಗ್ ತಂತ್ರಗಾರಿಕೆನ್ನು ರಾಹುಲ್ ದ್ರಾವಿಡ್ ಕೂಡ ಕೊಂಡಾಡುವಂತೆ ಮಾಡಿದರು.
2010 ರಲ್ಲಿ ರಣಜಿ ತಂಡದಲ್ಲಿ ಸ್ಥಾನ:
ತಮ್ಮ ೧೮ ನೇ ವಯಸ್ಸಿನಲ್ಲಿ ರಾಜ್ಯ ರಣಜಿ ತಂಡದಲ್ಲಿ ಸ್ಥಾನ ಪಡೆದ ರಾಹುಲ್ ಅವರು ಪಂಜಾಬ್ ವಿದುದ್ದ ತಮ್ಮ ಮೊದಲ ಪಂದ್ಯ ಆಡಿದ್ದರು. ಆಮೇಲೆ ಕೆಲವು ವೈಫಲ್ಯದ ನಂತರ ೨೦೧೨-೧೩ ರಲ್ಲಿ ವಿಧರ್ಭ ತಂಡದ ವಿರುದ್ಧ ೧೫೭ ರನ್ ಗಳಿಸಿ ಭಾರತ ತಂಡದ ಕದ ತಟ್ಟಿದರು.
ರಾಹುಲ್ ಅವರು ಬ್ಯಾಟಿಂಗ್ ನಲ್ಲಿ ಯಶಸ್ಸು ಗಳಿಸಲು ಜೆ ಅರುಣ್ ಕುಮಾರ್ ಅವರ ಪರಿಶ್ರಮ ಕೂಡ ಅಘಾದವಾಗಿದೆ. ಹರಿಯಾಣ ವಿರುದ್ಧ ಒಂದು ರಣಜಿ ಪಂದ್ಯದಲ್ಲಿ 98 ರನ್ ಗಳಿಸಿ ತಂಡಕ್ಕೆ ಆಸರೆ ಆಗಿದ್ದರು.
ಕರ್ನಾಟಕ 2014 ರಲ್ಲಿ ರಣಜಿ ಫೈನಲ್ ಪ್ರವೇಶಿಸಲು ರಾಹುಲ್ ಅವರ ಕೊಡುಗೆ ಅಪಾರ ವಾಗಿತ್ತು. ಹೈದ್ರಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 131 ರನ್ ಗಳಿಸಿ 15 ವರ್ಷಗಳ ಬಳಿಕ ರಣಜಿ ಟ್ರೋಫಿ ಗೆಲ್ಲಲು ಕಾರಣರಾದರು. ಈಸರಣಿಯಲ್ಲಿ 3 ಶತಕಗಳಿಂದ ಒಟ್ಟು 1034 ರನ್ ಗಳಿಸಿದ್ದರು.
2014 ರಲ್ಲಿ ನಡೆದ ದುಲಿಫ್ ಟ್ರೋಫಿ ಅಲ್ಲಿ ದಕ್ಷಿಣ ವಲಯ ಪರ ಆಡಿ ೨ ಇನ್ನಿಂಗ್ಸ್ ಗಳಲ್ಲಿ 185 ಹಾಗು 130 ರನ್ ಗಳಿಸಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ
26 ಡಿಸೆಂಬರ್ 2014 ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಮುಖಾಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು, ಆದರೆ ಆ ಟೆಸ್ಟ್ ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ಆದರೆ ಮುಂದಿನ ಟೆಸ್ಟ್ ನಲ್ಲಿ 110 ರನ್ ಗಳಿಸಿ ಆಯ್ಕೆ ಯನ್ನು ಸಮರ್ಥಿಸಿಕೊಂಡರು.
. ಏಕದಿನಕ್ಕೆ ಪಾದಾರ್ಪಣೆ
ಜೂನ್ ೧೧ ೨೦೧೪ ರಲ್ಲಿ ಝಿಂಬಾಬ್ವೆ ವಿರುದ್ಧ ಏಕದಿನಕ್ಕೆ ಪಾದಾರ್ಪಣೆ ಮಾಡಿದ ಅವರು ಆ ಸರಣಿ ಯನ್ನು ಆಕರ್ಷತ ಶತಕವನ್ನು ಗಳಿಸಿದ್ದರು.
ಟಿ 20 ಗೆ ಎಂಟ್ರಿ
18 ಜೂನ್ 2016 ರಲ್ಲಿ ವಿರುದ್ಧ ಟಿ 20 ಗೆ ಎಂಟ್ರಿ ಕೊಟ್ಟ ರಾಹುಲ್ 3 ವಿಭಾಗದಲ್ಲೂ ಭಾರತ ತಂಡದಲ್ಲಿ ಶಾಶ್ವತ ಸ್ಥಾನ ಪಡೆದರು.
ಕೆ ಎಲ್ ರಾಹುಲ್ ಅವರ ಅಂಕಿ ಅಂಶಗಳು
ವಿಭಾಗಗಳು | ಪಂದ್ಯ | ಇನ್ನಿಂಗ್ಸ್ | ಅಜೇಯ | ಓಟಗಳು | ಅತ್ಯಧಿಕ | ಸರಾಸರಿ | ಸ್ಟ್ರೈಕ್ರೇಟ್ | 100 | 50 |
ಟೆಸ್ಟ್ 2014– | 34 | 56 | 2 | 1905 | 199 | 35.3 | 58.0 | 5 | 11 |
ಏಕದಿನ 2016– | 23 | 22 | 4 | 704 | 111 | 39.1 | 79.1 | 2 | 4 |
ಟಿ20(I)
2016– |
27 | 24 | 4 | 879 | 110* | 44.0 | 149.2 | 2 | 5 |
ಪ್ರಥಮದರ್ಜೆ 2010– | 75 | 125 | 5 | 5675 | 337 | 47.3 | 56.7 | 14 | 29 |
ಲಿಸ್ಟ್ A
2010– |
64 | 63 | 7 | 2116 | 111 | 37.8 | 74.3 | 5 | 12 |
ಟಿ20
2013– |
108 | 96 | 17 | 3181 | 110* | 40.3 | 138.6 | 3 | 24 |
- ಪ್ರೀತಮ್ ಹೆಬ್ಬಾರ್