ಬೆಂಗಳೂರು-ಸ್ಕಾರ್ಪಿಯನ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ, ಸೋಲದೇವನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ “ಸ್ಕಾರ್ಪಿಯಾನ್ಸ್ ಟ್ರೋಫಿ-2021” ಪ್ರಶಸ್ತಿಯನ್ನು ಡೈನಾಮಿಕ್ ಡ್ಯಾಶರ್ಸ್ ತಂಡ ಜಯಿಸಿದೆ.
ಲೀಕ್ ಕಮ್ ನಾಕೌಟ್ ಮಾದರಿಯಲ್ಲಿ ಹಗಲು ರಾತ್ರಿ ನಡೆದ ಈ ಪಂದ್ಯಾವಳಿಯ ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೈನಾಮಿಕ್ ಡ್ಯಾಶರ್ಸ್ 3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿತ್ತು.ಇದಕ್ಕುತ್ತರವಾಗಿ ತೀವ್ರ ಪ್ರತಿಹೋರಾಟ ನೀಡಿದ ಅವಿಘ್ನ ಸೃಷ್ಟಿ ತಂಡ 3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 18 ರನ್ ಗಳಿಸಲಷ್ಟೇ ಶಕ್ತವಾಯಿತು.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಅವಿಘ್ನ ಸೃಷ್ಟಿ ತಂಡದ ಆದರ್ಶ್,ಬೆಸ್ಟ್ ಬೌಲರ್ ಅದೇ ತಂಡದ ಪುನೀತ್ ಹಾಗೂ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಅರ್ಹವಾಗಿ ಡೈನಾಮಿಕ್ ಡ್ಯಾಶರ್ಸ್ ನ ಕಿಝರ್ ಪಡೆದುಕೊಂಡರು.
ಕ್ರಿಕ್ ಸೇ ಈ ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,ಯುವ ವೀಕ್ಷಕ ವಿವರಣೆಕಾರರಾದ ಭಾನುಪ್ರಕಾಶ್ ಉಡುಪಿ ಹಾಗೂ ಜಲೀಲ್ ಮೂಡಿಗೆರೆ ಸಹಕರಿಸಿದರು…