ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 15 ವರ್ಷಗಳ ಹಿಂದೆ ಇದೇ ದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ಶ್ರೀಲಂಕಾ ವಿರುದ್ಧ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಬ್ಲೂ ಜೆರ್ಸಿ ಧರಿಸಿ ಭಾರತ ಪರ ಏಕದಿನ ಪಂದ್ಯ ಆಡಿದ್ದರು. ಕಳೆದ 15 ದಶಕಗಳಲ್ಲಿ ವಿರಾಟ್ ಕೊಹ್ಲಿ ಭಾರತ ಪರ ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು.
ವಿರಾಟ್ ಕೊಹ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ತಲುಪಿತು. ಇದಾದ ಬಳಿಕ 2019ರ ತಂಡ ಸೆಮಿಫೈನಲ್‌ವರೆಗೆ ಪ್ರಯಾಣಿಸಿತ್ತು. ಇವರ ನಾಯಕತ್ವದಲ್ಲಿ ಭಾರತ ತಂಡ ಸುದೀರ್ಘ ಕಾಲ ತನ್ನ ಪ್ರಾಬಲ್ಯವನ್ನು ಹೊಂದಿದೆ.
2008 ರಲ್ಲಿ ಈ ದಿನದಂದು ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ ಕೊಹ್ಲಿ 2008 ಆಗಸ್ಟ್ 18 ರಿಂದ,ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಇದುವರೆಗೆ ಒಟ್ಟು 501 ಪಂದ್ಯಗಳನ್ನು ಭಾರತಕ್ಕಾಗಿ ಆಡಿ ಅವರ ಬ್ಯಾಟ್‌ನಿಂದ 76 ಶತಕಗಳು ಕೂಡ ಬಂದಿವೆ. ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯಿಂದ ಅವರು ಕೇವಲ 24 ಶತಕಗಳ ದೂರದಲ್ಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಬ್ಯಾಟ್ ಮೌನವಾಗಿದೆ. ಇದೇ ಸೆಪ್ಟೆಂಬರ್‌ನಲ್ಲಿ ನಡೆಯುವ ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿಯವರ ಬ್ಯಾಟ್‌ನಿಂದ ರನ್‌ಗಳ ನಿರೀಕ್ಷೆ ಇದೆ.
ಅಂತರಾಷ್ಟ್ರೀಯ ಕ್ರಿಕೆಟ್ ಯಾನಕ್ಕೆ ಒಂದೂವರೆ ದಶಕ ಅರ್ಥಪೂರ್ಣವಾಗಿ ಪೂರೈಸಿದ ರನ್ ಮಷೀನ್ ವಿರಾಟ್‌ಗೆ ಅಭಿನಂದನೆಗಳು