ಶರತ್ ಶೆಟ್ಟಿಯವರ ಭಾಷಣದ ಬಳಿಕ- ಪಂದ್ಯಗೆದ್ದ ಹಣವನ್ನು ಕ್ಯಾನ್ಸರ್ ಪೀಡಿತರಿಗೆ ನೀಡಿದ ಕಟೀಲ್ ಕಮಾಂಡೋಸ್.
ಪ್ರತಿವರ್ಷದಂತೆ ಈ ಬಾರಿಯೂ ಕೂಡ ಕಿನ್ನಿಗೋಳಿಯಲ್ಲಿ
ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣೆಯ ಸದುದ್ದೇಶದಿಂದ 7 ಪಂಚಾಯತ್ ವ್ಯಾಪ್ತಿಯ 8 ತಂಡಗಳ ನಡುವೆ ಕೆ.ಎಫ್.ಸಿ ಪ್ರೀಮಿಯರ್ ಲೀಗ್ ಆಯೋಜಿಸಲಾಗಿತ್ತು.ಸ್ಥಳೀಯ 8 ಫ್ರಾಂಚೈಸಿಗಳಲ್ಲಿ ಕಟೀಲ್ ಕಮಾಂಡೋಸ್ ತಂಡ ಕಿಂಗ್ಸ್ ಇಲೆವೆನ್ ಕಿನ್ನಿಗೋಳಿ ತಂಡವನ್ನು ಸೋಲಿಸಿ ಅಂತಿಮವಾಗಿ ಗೆಲುವನ್ನು ಸಾಧಿಸಿತ್ತು.
*ಪಡುಬಿದ್ರಿ ಫ್ರೆಂಡ್ಸ್ ನ ಆದರ್ಶವನ್ನು ಪಾಲಿಸಿದ ಕೆ.ಎಫ್.ಸಿ ಥಂಡರ್ಸ್*
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ,ಸನ್ಮಾನ ಸ್ವೀಕರಿಸಿ ಆಟಗಾರರನ್ನುದ್ದೇಶಿಸಿ ಮಾತನಾಡಲು ಮೈಕ್ ಹಿಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಪಡುಬಿದ್ರಿ ಫ್ರೆಂಡ್ಸ್ ನ ಕಪ್ತಾನರಾದ ಶರತ್ ಶೆಟ್ಟಿ ಪಡುಬಿದ್ರಿ 90 ರ ದಶಕದ ದಿನಗಳ ಕ್ರಿಕೆಟ್ ನ್ನು ನೆನಪಿಸಿದರು.ಪಡುಬಿದ್ರಿಯಲ್ಲಿ ಕ್ಯಾನ್ಸರ್ ಪೀಡಿತರ ನೆರವಿಗಾಗಿ ಏರ್ಪಡಿಸಿದ್ದ ಪಂದ್ಯಾವಳಿಯಲ್ಲಿ ಪಡುಬಿದ್ರಿ ಫ್ರೆಂಡ್ಸ್ ಜಯಿಸಿದ 15 ಸಾವಿರ ನಗದು ಅಷ್ಟನ್ನೂ ಕ್ಯಾನ್ಸರ್ ಪೀಡಿತ ದಂಪತಿಗಳಿಗೆ ನೀಡಿದ್ದರು.ಹಾಗೆಯೇ ಇನ್ನೊಂದೆಡೆ ನಡೆದ ಪಂದ್ಯಾವಳಿಯಲ್ಲಿ ಜಯಿಸಿದ 21 ಸಾವಿರ ನಗದನ್ನು ತಲಾ 10,500 ಇಬ್ಬರು ಬಡ ವಿದ್ಯಾರ್ಥಿಗಳಿಗೆ ನೀಡಿದ ಉದಾಹರಣೆಯನ್ನು ವಿವರಿಸಿದ್ದರು. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ಚಾಂಪಿಯನ್ಸ್ ತಂಡ ಕಟೀಲ್ ಕಮಾಂಡೋಸ್ ನ ಮಾಲೀಕ ಅಭಿಲಾಷ್ ಶೆಟ್ಟಿ ಪಂದ್ಯಾವಳಿಯ ನಗದು ಬಹುಮಾನ 50 ಸಾವಿರದಲ್ಲಿ 10,000 ರೂ ನ್ನು ಆಯೋಜಕರ ಬಳಿ ನೀಡಿ ಕಿನ್ನಿಗೋಳಿಯ ಕ್ಯಾನ್ಸರ್ ಪೀಡಿತ ಇಲೆಕ್ಟ್ರಿಶಿಯನ್ ಶೈಲೇಶ್ ಕಾಮತ್ ಇವರಿಗೆ ನೀಡುವಂತೆ ಸೂಚಿಸಿದ್ದರು.
ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ಚಾಂಪಿಯನ್ಸ್ ತಂಡ ಕಟೀಲ್ ಕಮಾಂಡೋಸ್ ನ ಮಾಲೀಕ ಅಭಿಲಾಷ್ ಶೆಟ್ಟಿ ಪಂದ್ಯಾವಳಿಯ ನಗದು ಬಹುಮಾನ 50 ಸಾವಿರದಲ್ಲಿ 10,000 ರೂ ನ್ನು ಆಯೋಜಕರ ಬಳಿ ನೀಡಿ ಕಿನ್ನಿಗೋಳಿಯ ಕ್ಯಾನ್ಸರ್ ಪೀಡಿತ ಇಲೆಕ್ಟ್ರಿಶಿಯನ್ ಶೈಲೇಶ್ ಕಾಮತ್ ಇವರಿಗೆ ನೀಡುವಂತೆ ಸೂಚಿಸಿದ್ದರು.
ಅದರಂತೆಯೇ ಪಂದ್ಯಾಟದ ಆಯೋಜಕ ಸಂಸ್ಥೆ ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ಶೈಲೇಶ್ ಕಾಮತ್ ರಿಗೆ 10000 ನಗದನ್ನು ಸದ್ಯದಲ್ಲಿಯೇ ನೀಡಲಿದ್ದಾರೆ.
ಇಂತಹ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯಗಳು ಎಲ್ಲಾ ಪಂದ್ಯಾವಳಿಗಳಲ್ಲಿ ನಡೆದರೆ ಕ್ರೀಡಾಕೂಟವೂ ಸಾರ್ಥಕ ಅಲ್ಲವೇ?