ರಾಕ್ ಯೂತ್ ಕ್ಲಬ್(ರಿ)ತುಮಕೂರು ಇವರ ಆಶ್ರಯದಲ್ಲಿ,ರಾಕ್ ರಾಜು,ರಾಕ್ ರವಿ,ರಾಕ್ ಅಝ್ಝು, ಮುಜ್ಜು ,ಯತೀಶ್,ರಾಕ್ ರಘು,ಶಂಕು ಇವರೆಲ್ಲರ ಸಾರಥ್ಯದಲ್ಲಿ ತುಮಕೂರು ಜಿಲ್ಲೆಯ ಆಟಗಾರರಿಗಾಗಿ ತುಮಕೂರಿನ ಸರಕಾರಿ ಹೈಸ್ಕೂಲ್ ಫೀಲ್ಡ್ ಮೈದಾನದಲ್ಲಿ ಆಯೋಜಿಸಿದ್ದ ಮೇಯರ್ಸ್ ಕಪ್ T.C.L-2020 ಪ್ರಶಸ್ತಿಯನ್ನು ರಾಕ್ ರವಿ ಸಾರಥ್ಯದ ಕರ್ನಾಟಕ ರಾಕ್ ತಂಡ ಜಯಿಸಿದೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು,ಅಂತಿಮವಾಗಿ ಫೈನಲ್ ನಲ್ಲಿ ಕರ್ನಾಟಕ ರಾಕ್ ತಂಡದ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಶ್ರೀ ಪ್ರಿನ್ಸ್ ಸಿಟಿ ಕ್ಲಬ್ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತು.
ಪ್ರಥಮ ಪ್ರಶಸ್ತಿ ವಿಜೇತ ತಂಡ ಕರ್ನಾಟಕ ರಾಕ್ ತಂಡ1 ಲಕ್ಷ ಹಾಗೂ ದ್ವಿತೀಯ ಸ್ಥಾನಿ ಶ್ರೀ ಪ್ರಿನ್ಸ್ ಸಿಟಿ ಕ್ಲಬ್ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ವೈಯಕ್ತಿಕ ಪ್ರಶಸ್ತಿ ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಶ್ರೀ ಪ್ರಿನ್ಸ್ ಸಿಟಿಯ ನಿತಿನ್,ಬೆಸ್ಟ್ ಬೌಲರ್ ಆರ್.ಆರ್.ಹೆಗ್ಗೆರೆಯ ರಘುಪತಿ ಹಾಗೂ ಕರ್ನಾಟಕ ರಾಕ್ ತಂಡದ ಶಂಕು ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
ತುಮಕೂರಿನ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪಂದ್ಯಾವಳಿ ಉದ್ಘಾಟಿಸಿ
“ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಸ್ಥೈರ್ಯ,ಸೌಹಾರ್ದ ಮನೋಭಾವದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರಿನ ಮಾನ್ಯ ಮಹಾಪೌರರಾದ ಶ್ರೀಮತಿ ಫರೀದಾ ಬೇಗಂ,ಜೆ.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ,ಗೋವಿಂದರಾಜು,ತುಮಕೂರು ಜೆ.ಡಿ.ಎಸ್ ಯುವ ಮುಖಂಡರು ರುದ್ರೇಶ್,ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರು ತುಮಕೂರಿನ ಎನ್. ನರಸಿಂಹರಾಜು(ರಾಕ್ ರಾಜು),ರಾಕ್ ಮೆನೇಜರ್ ರಾಕ್ ರವಿ,ಮಾಜಿ ಕಪ್ತಾನ ರಾಕ್ ರಘು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ಪಂದ್ಯಾವಳಿಯ ನೇರ ಪ್ರಸಾರ M9 ಸ್ಪೋರ್ಟ್ಸ್ ಬಿತ್ತರಿಸಿದರೆ,ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ,ರಾಜಶೇಖರ್ ಶ್ಯಾಮರಾವ್ ಉಡುಪಿ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದ್ದರು.ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಹಾಗೂ ಫ್ರೆಂಡ್ಸ್ ಬೆಂಗಳೂರು ಸಾಗರ್ ಭಂಡಾರಿ ಮಾಲೀಕತ್ವದ ಎಸ್.ಆರ್.ಬಿ ಸ್ಪೋರ್ಟ್ಸ್ ಪಂದ್ಯಾವಳಿಗೆ ಸಂಪೂರ್ಣ