ಕಾರ್ಕಳ-ಶ್ರೀ ವಿಶ್ವಬ್ರಾಹ್ಮಣ ಯುವ ಸೇವಾ ಬಳಗ ಹಾಗೂ ಮಹಿಳಾ ಬಳಗ ಮುಂಡ್ಕೂರು ಇವರ ಆಶ್ರಯದಲ್ಲಿ,ಜನವರಿ 22 ರಂದು ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಸತತ 5 ನೇ ಬಾರಿಗೆ ವಿಶ್ವಬ್ರಾಹ್ಮಣ ಸಮಾಜ ಬಾಂಧವರಿಗೆ ಸೀಮಿತ ಓವರುಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ಎಸ್.ವಿ.ಎಮ್ ಟ್ರೋಫಿ-2023” ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಕಾರ್ಕಳ ತಾಲೂಕಿನ ಸಚ್ಚರಿಪೇಟೆ,ಸಂಕಲಕರಿಯ,ಇನ್ನಾ,ಮುಂ ಡ್ಕೂರು,ಮುಲ್ಲಡ್ಕ ಪರಿಸರದ ಕಾರ್ಯವ್ಯಾಪ್ತಿಯಲ್ಲಿ ಸಮಾಜ ಬಾಂಧವರ ಸೇವೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಈ ಸಂಸ್ಥೆ ಇದುವರೆಗೂ 38 ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ,ಅಕಾಲಿಕ ಮರಣ ಹೊಂದಿದ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ,ಜೇಸಿಐ ಸಹಭಾಗಿತದಲ್ಲಿ ರಕ್ತದಾನ ಶಿಬಿರ,ಪ್ರತಿ ವರ್ಷ ವಿಶ್ವಕರ್ಮ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ರ‍್ಯಾಂಕ್ ಪಡೆದವರಿಗೆ ವಿದ್ಯಾರ್ಥಿ ವೇತನ,ಕೋವಿಡ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಣೆ,ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ.ಇದೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಡಕುಟುಂಬವೊಂದಕ್ಕೆ ನೆರವಿನಹಸ್ತ ಚಾಚುವ ಸದುದ್ದೇಶದಿಂದ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದಾರೆ.