ಬೆಂಗಳೂರು-ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬ ಫ್ರೆಂಡ್ಸ್ ಬೆಂಗಳೂರು ಕಪ್-2023 ಪಂದ್ಯಾಟದ ಎರಡನೇ ಕ್ವಾರ್ಟರ್ ಫೈನಲ್ ನಲ್ಲಿ ಕಾಮಾಕ್ಷಿ ರಾಹುಲ್ ಇಲೆವೆನ್ ಉತ್ತರಪ್ರದೇಶ- ರಿಯಲ್ ಮಲ್ಪೆ ತಂಡವನ್ನು 48 ರನ್ ಗಳ ಅಂತರದಲ್ಲಿ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಉತ್ತರ ಪ್ರದೇಶದ ಕಾಮಾಕ್ಷಿ ರಾಹುಲ್ ಇಲೆವೆನ್ ಮಕ್ಬೂಲ್ 22,ರಾಹುಲ್ 16 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತ್ತು.
ಸವಾಲಿನ ಗುರಿಯನ್ನು ಬೆಂಬತ್ತುವ ವೇಳೆ ಕಾಮಾಕ್ಷಿ ರಾಹುಲ್ ಇಲೆವೆನ್ ನ ಇರ್ಫಾನ್,ದಿಲೀಪ್,ಸುಶಾಂತ್
ಬಿಗು ಬೌಲಿಂಗ್ ದಾಳಿಗೆ ತತ್ತರಿಸಿದ ರಿಯಲ್ ಫೈಟರ್ಸ್ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 33 ರನ್ ಗಳಷ್ಟೇ ಗಳಿಸಿ 48 ರನ್ ಗಳ ಬೃಹತ್ ಅಂತರದಿಂದ ಸೋಲೊಪ್ಪಿಕೊಂಡಿತು.
ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಕ್ಬೂಲ್ ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಭಾಜನರಾದರು.