ಅಟ್ಯಾಕರ್ಸ್ ಕೋಲಾರ ತಂಡದ ವತಿಯಿಂದ ನಾಯಕ ನಿರಂಜನ್, ಶಿವು ಜಾನ್ ಹಾಗೂ ಅರುಣ್ ಸ್ಟೈಲ್ ಕಿಂಗ್ ಇವರ ಸಾರಥ್ಯದಲ್ಲಿ ಮಾರ್ಚ್ 12 ರಿಂದ 14 ರ ತನಕ ಮೂರು ದಿನಗಳ ಕಾಲ ಹೊನಲು ಬೆಳಕಿನ ಕೋಲಾರ ಪ್ರೀಮಿಯರ್ ಲೀಗ್-2021(K.P.L ಸೀಸನ್-3) ಪಂದ್ಯಾಕೂಟ ಆಯೋಜಿಸಲಾಗಿದೆ.
ಕೋಲಾರದ ಸರ್.ಎಮ್.ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯಾವಳಿ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದೆ.ರಾಜ್ಯದ
ಪ್ರತಿಷ್ಠಿತ ತಂಡಗಳ 3 ಆಟಗಾರರು ಹಾಗೂ ಕೋಲಾರ ಜಿಲ್ಲೆಯ ಸ್ಥಳೀಯ 2 ಆಟಗಾರರು ಒಂದೊಂದು ತಂಡದಲ್ಲಿ ಐಕಾನ್ ರೂಪದಲ್ಲಿ ಭಾಗವಹಿಸಲಿದ್ದಾರೆ.
ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾಕೂಟದ ತೀರ್ಪುಗಾರರಾಗಿ
ಕೆ.ಎಸ್.ಸಿ.ಎ ಮಾನ್ಯತೆ ಪಡೆದ ಅಂಪಾಯರ್ ಗಳು ಭಾಗವಹಿಸಲಿದ್ದು,M.Sports ನೇರ ಪ್ರಸಾರ ಬಿತ್ತರಿಸಲಿದೆ ಹಾಗೂ ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ.