2.4 C
London
Saturday, January 18, 2025
Homeಅಥ್ಲೆಟಿಕ್ಸ್ಟೋಕಿಯೋ ಒಲಿಂಪಿಕ್ಸ್‌; ಚಿನ್ನ ಗೆದ್ದರು ಪ್ರತಿಸ್ಪರ್ಧಿ ಜೊತೆ ಹಂಚಿಕೊಂಡ ಬಾರ್ಶಿಮ್ ನ ಕ್ರೀಡಾ ಮನೋಭಾವಕ್ಕೆ ದೊಡ್ಡದೊಂದು...

ಟೋಕಿಯೋ ಒಲಿಂಪಿಕ್ಸ್‌; ಚಿನ್ನ ಗೆದ್ದರು ಪ್ರತಿಸ್ಪರ್ಧಿ ಜೊತೆ ಹಂಚಿಕೊಂಡ ಬಾರ್ಶಿಮ್ ನ ಕ್ರೀಡಾ ಮನೋಭಾವಕ್ಕೆ ದೊಡ್ಡದೊಂದು ಸಲಾಮ್ …..!!!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ ಇತಿಹಾಸದ ಪುಟ ಸೇರುವಂತಹ ಅಪರೂಪದ ಘಟನೆಯೊಂದು ನೆಡೆದಿದೆ ಇದು ನಿಜವಾದ ಕ್ರೀಡಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಟೋಕಿಯೋ ಕ್ರೀಡಾಕೂಟದ ಹೈ ಜಂಪ್ ನ ಅಂಗಣದಲ್ಲಿ ಚಿನ್ನದ ಪದಕಕ್ಕಾಗಿ ನೆಡೆದ ಅಂತಿಮ ಸುತ್ತಿನಲ್ಲಿ ಈ ಒಂದು ಇತಿಹಾಸ ನಿರ್ಮಾಣವಾಗಿದೆ.
ಒಲಿಂಪಿಕ್ಸ್ ನ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು…ಯಾವ ಪದಕ ಗೆದ್ದರೂ ಸಾಧನೆಯೇ ಹೌದು ಅದು ಸಾಧಿಸಬೇಕೆನ್ನುವ ಛಲ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಯಾ ಕನಸಾಗಿರುತ್ತದೆ. ತನ್ನ ದೇಶಕ್ಕಾಗಿ ಸ್ಫರ್ಧಿಸುವ ಪ್ರತಿಯೊಬ್ಬ ಸ್ಪರ್ಧಿಯು ತನ್ನ ದೇಶಕ್ಕಾಗಿ ಯಾವುದಾದರೂ ಒಂದು ಪದಕವನ್ನು ಗೆಲ್ಲುವುದಕ್ಕಾಗಿ ವರ್ಷಾನುಗಟ್ಟಲೆ ಬೆವರು ಸುರಿಸಿರುತ್ತಾರೆ ಅದು ಅವರ ಕನಸಾಗಿರುತ್ತದೆ.
ಆದರೆ ಕತಾರ್‌ನ ಹೈಜಂಪ್ ಪಟು ತನಗಾಗಿ ತನ್ನ ದೇಶಕ್ಕಾಗಿ ಗೆದ್ದಂತಹ ಚಿನ್ನದ ಪದಕವನ್ನು ಪ್ರತಿಸ್ಪರ್ಧಿ ಜೊತೆ ಹಂಚಿಕೊಳ್ಳಲು ಅವಕಾಶ ಕೇಳಿದ ಘಟನೆ ನಡೆದಿತ್ತು. ಇಷ್ಟೇ ಅಲ್ಲ ಚಿನ್ನದ ಪದಕವನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
ಹೈಜಂಪ್‌ ಫೈನಲ್‌ನಲ್ಲಿ ಖತಾರ್‌ನ ಮುತಾಝ್ ಎಸ್ಸಾ ಬಾರ್ಶಿಮ್ ಹಾಗೂ ಇಟಲಿಯ ಗಿಯಾನಮಾರ್ಕೋ ತಂಬೇರಿ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಅದರಲ್ಲೂ ಬಾರ್ಶಿಮ್ ಕೂದಳೆಲೆ ಅಂತರದಲ್ಲಿ ಒಂದು ಕೈಮೇಲಾಗಿದ್ದರು. ಪದಕ ಸುತ್ತಿನ ಹೋರಾಟದಲ್ಲಿ ಬಾರ್ಶಿಮ್ ಹಾಗೂ ತಂಬೇರಿ 2.37 ಮೀಟರ್ ಜಿಗಿದು ಸಮಬಲ ಸಾಧಿಸಿದರು.
ಫಲಿತಾಂಶ ನಿರ್ಧರಿಸಲು 2.39 ಮೀಟರ್ ಎತ್ತರ ಹಾರಿಸಲು ರೆಫ್ರಿಗಳು  ನಿರ್ಧರಿಸಿದರು. ಮೂರು ಪ್ರಯತ್ನಗಳಲ್ಲಿ ಇಬ್ಬರೂ ವಿಫಲರಾದರು. ಇಲ್ಲೂ ಕೂಡ ಸಮಬಲ ಸಾಧಿಸಿದರು.
ಹೀಗಾಗಿ ಆಯೋಜಕರು 2.39 ಮೀಟರ್ ಹಾರಿದವರನ್ನು ಜಯಶಾಲಿ ಎಂದು ಘೋಷಿಸುವುದಾಗಿ ಹೇಳಿತು. ಮತ್ತೆ ಪ್ರಯತ್ನ ಮಾಡಿದರೆ ಬಾರ್ಶಿಮ್ ಗೆಲುವು ಬಹುತೇಕ ನಿಶ್ಛಿತವಾಗಿತ್ತು. ಕಾರಣ ತಂಬೇರಿ 2016ರ ರಿಯೋ ಒಲಿಂಪಿಕ್ಸ್‌ಗೂ ಮೊದಲು ಆಗಿದ್ದ ಗಾಯ ಮತ್ತೆ ಉಲ್ಬಣಗೊಂಡಿತ್ತು.
ಬಾರ್ಶಿಮ್ ಹಾಗೂ ತಂಬೇರಿ ನಡುವಿನ ಗೆಲುವು ನಿರ್ಧರಿಸಲು ಆಯೋಜಕರು ಮತ್ತೊಂದು ಪ್ರಯತ್ನಕ್ಕೆ ಮುಂದಾದಾಗ, ಇತ್ತ ಬಾರ್ಶಿಮ್ ಚಿನ್ನದ ಪದಕವನ್ನು ಇಬ್ಬರೂ ಹಂಚಿಕೊಳ್ಳಬಹುದೇ? ಎಂದು ಆಯೋಜಕರನ್ನು ಪ್ರಶ್ನಿಸಿದ್ದರು. ನನ್ನ ಪ್ರತಿಸ್ಪರ್ಧಿ ನನ್ನ ಉತ್ತಮ ಸ್ನೇಹಿತ ನಮ್ಮಿಬ್ಬರ ಗುರಿ ಒಂದೇ ಅಗಿದೆ ನಮ್ಮ ದೇಶಕ್ಕಾಗಿ ಪದಕ ಗೆಲ್ಲುವುದು. ಅತನು ನನ್ನಷ್ಟೆ ಸಮಬಲನು. ನಾವು ಈ ಹಿಂದೆ ಹಲವು ಕ್ರೀಡಾಕೂಟದಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದೇವೆ.
ಈ ಬಾರಿ ನನ್ನ ಪ್ರತಿಸ್ಪರ್ಧಿಗೂ ಚಿನ್ನದ ಪದಕ ಸಿಗಲಿ ಎಂದು ಬಾರ್ಶಿಮ್ ಆಯೋಜಕರನ್ನು ಮನವಿ ಮಾಡಿದ್ದಾರೆ.
ಬಾರ್ಶಿಮ್ ಮನವಿಗೆ ಒಪ್ಪಿದ ಆಯೋಕರು ಹೈಜಂಪ ಗೋಲ್ಡ್ ಹಂಚಿಕೆ ಮಾಡಿದ್ದಾರೆ. ಇಬ್ಬರನ್ನು ಜಯಶಾಲಿಗಳೆಂದು ಘೋಷಿಸಿದ್ದಾರೆ.  ಲಂಡನ್ ಒಲಿಂಪಿಕ್ಸ್ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಬಾರ್ಶಿಮ್‌ಗೆ ಟೋಕಿಯೋದಲ್ಲಿ ಚಿನ್ನದ ಪದಕ ಒಲಿದಿದೆ. ಇತ್ತ ಇಟಲಿಯ ತಂಬೇರಿ ಟೋಕಿಯೋ ಒಲಿಂಪಿಕ್ಸ್‌ಗೂ ಮೊದಲು ಕಾಲಿನ ಗಾಯದಿಂದ ಕ್ರೀಡಾಕೂಟದಿಂದ ಹೊರಗುಳಿದಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಗಾಯದಿಂದ ಚೇತರಿಸಿಕೊಂಡ ತಂಬೇರಿ ಇದೀಗ ಚಿನ್ನದ ಪದಕದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.
ಇಲ್ಲಿ ಪ್ರತಿಯೊಬ್ಬರು ಅರಿಯಬೇಕಿದೆ ನಾನು ನನ್ನದು ಎನ್ನುವುದರಲ್ಲಿ ಅರ್ಥವಿಲ್ಲ.ನಾನು ನಮ್ಮವರು ಎಂದು ಬದುಕಿದಾಗಲೆ ಜೀವನಕ್ಕೆ ಅರ್ಥ ಸಿಗುತ್ತದೆ……..
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

7 − 6 =