ಕ್ರಿಕೆಟ್ಜಾಕಿ ಕ್ರಿಕೆಟ್ ಕ್ಲಬ್(ಜೆ.ಸಿ.ಸಿ) ಮುಡಿಗೆ ಶ್ರೀನಿವಾಸಪುರ ಪ್ರೀಮಿಯರ್ ಲೀಗ್-2020 ಕಿರೀಟ

ಜಾಕಿ ಕ್ರಿಕೆಟ್ ಕ್ಲಬ್(ಜೆ.ಸಿ.ಸಿ) ಮುಡಿಗೆ ಶ್ರೀನಿವಾಸಪುರ ಪ್ರೀಮಿಯರ್ ಲೀಗ್-2020 ಕಿರೀಟ

-

- Advertisment -spot_img

ಮಾವಿನ ಹಣ್ಣಿನ ಬೃಂದಾವನವೆಂದೇ ಖ್ಯಾತಿ ಪಡೆದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಪ್ರಸಿದ್ಧ ಉದ್ಯಮಿ M.K.S ಗ್ರೂಪ್ ನ ಮಾಲೀಕ ನದೀಮ್ ಅಖ್ತರ್ ಹಾಗೂ S.A.S ಗ್ರೂಪ್ ನ ಮಾಲೀಕ ಶಾಮೀರ್ ಎಸ್.ಎ ಸಾರಥ್ಯದಲ್ಲಿ ನಡೆದ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ಸೀಸನ್ 2 ರ ಪ್ರಶಸ್ತಿಯನ್ನು ಕಾರ್ತಿಕ್ ರೆಡ್ಡಿ ಜಾಕಿ ನೇತೃತ್ವದ ಜಾಕಿ ಕ್ರಿಕೆಟ್ ಕ್ಲಬ್ ಜಯಿಸಿದೆ.

ಸತತ ಮೂರು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಸಾಗಿದ ಅತ್ಯಂತ ಅದ್ಧೂರಿಯ ಪಂದ್ಯಾವಳಿಯಲ್ಲಿ
ಬಲಿಷ್ಠ 8 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಸೆಣಸಾಡಿದ್ದು, ಲೀಗ್ ಹಂತದ ಪ್ರಬಲ ಪೈಪೋಟಿಗಳ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ ನದೀಮ್ ಅಖ್ತರ್ ಮಾಲೀಕತ್ವದ ಸೈ ಬಾಯ್ಸ್ ತಂಡ ಫ್ರೆಂಡ್ಸ್ ಕ್ರಿಕೆಟರ್ಸ್ ನ್ನು ಹಾಗೂ ಜೆ.ಸಿ.ಸಿ ತಂಡ ಶಾಮೀರ್ ಮಾಲೀಕತ್ವದ ರೈಸಿಂಗ್ ಸ್ಟಾರ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿತ್ತು.

ಫೈನಲ್ ನಲ್ಲಿ ಜಾಕಿ‌ ಕ್ರಿಕೆಟ್ ಕ್ಲಬ್ ನ‌ ಸಂಘಟಿತ ಹೋರಾಟದ ಫಲವಾಗಿ‌ ಸೈ ಬಾಯ್ಸ್ ತಂಡಕ್ಕೆ ಸೋಲುಣಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಪ್ರಥಮ ಪ್ರಶಸ್ತಿ ರೂಪದಲ್ಲಿ ಜೆ.ಸಿ.ಸಿ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ ಸೈ ಬಾಯ್ಸ್ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರೆ,ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್ ಜಾನ್, ಬೆಸ್ಟ್ ಬೌಲರ್ ಮಾರ್ಕ್ ಮಹೇಶ್, ಫೈನಲ್ ನ ಪಂದ್ಯಶ್ರೇಷ್ಟ ಸ್ವಸ್ತಿಕ್ ಹಾಗೂ ಸರಣಿಯುದ್ದಕ್ಕೂ ಶ್ರೇಷ್ಠ ಸವ್ಯಸಾಚಿ ನಿರ್ವಹಣೆ ತೋರಿದ ಸಾಗರ್ ಭಂಡಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಂದ್ಯಾವಳಿಗೆ ಕರ್ನಾಟಕ ವಿಧಾನ ಸಭಾ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಚಿತ್ರನಟರಾದ ಅಂಜಾನ್,ಡಾಲಿ ಧನಂಜಯ್,ಕೆ.ಜಿ.ಎಫ್ ಖ್ಯಾತಿಯ ಗರುಡಾ ರಾಮ್,ಇಂಡೋರ್ ನ ಖ್ಯಾತ ಉದ್ಯಮಿ ಹ್ಯಾಪಿ,ಶ್ರೀನಿವಾಸಪುರದ ವೃತ್ತ ನಿರೀಕ್ಷಕರು

ರಾಘವೇಂದ್ರ,ರಾಜಕೀಯ ಧುರೀಣರಾದ ಕೆ.ಕೆ.ಮಂಜು, ಪ್ರಸಿದ್ಧ ಡ್ರಮ್ಮರ್ ದೇವಾ ಪಂದ್ಯಾವಳಿಯ ರಂಗನ್ನು ಹೆಚ್ಚಿಸಿದ್ದರು.

  

ಅತ್ಯಂತ ಯಶಸ್ಸು ಕಂಡ ಶ್ರೀನಿವಾಸಪುರದ ಈ ಪಂದ್ಯಾಕೂಟಕ್ಕಾಗಿ ಐ.ಪಿ.ಎಲ್,ಪ್ರೊ ಕಬಡ್ಡಿ ಕಾಮೆಂಟೇಟರ್ ನವೀನ್ ಶೌರಿ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ,ಹಿರಿಯ ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಕೋಟ ಶಿವನಾರಾಯಣ ಐತಾಳ್,ಹಿಂದಿ ಕಾಮೆಂಟೇಟರ್ ಸ್ಟಾರ್ ನವಾಝ್,ಸೈಯದ್ ಗುರುಕಂಬ್ಳ ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ ಭಾಗವಹಿಸಲಿದ್ದರು.

ಸಚಿನ್ ಮಹಾದೇವ್ ಮಾಲೀಕತ್ವದ M.Sports ಯೂ ಟ್ಯೂಬ್ ಚಾನೆಲ್ ನ ಪ್ರಮುಖ ಟೆಕ್ನಿಷಿಯನ್
ಓಂಕಾರ್ ಪಾಟೀಲ್ ಸಾರಥ್ಯದಲ್ಲಿ ನಡೆದ ಪಂದ್ಯಾವಳಿಯ ನೇರ ಪ್ರಸಾರವನ್ನು ಸಹಸ್ರಾರು ಕ್ರೀಡಾಭಿಮಾನಿಗಳು ವೀಕ್ಷಿಸಿದರು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

5 + 8 =

Latest news

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’

ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ : ಚಿತ್ರದುರ್ಗದಲ್ಲಿ ‘ವಿಶ್ವಕರ್ಮ ಪ್ರೀಮಿಯರ್ ಲೀಗ್ 2026’   ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಚಿತ್ರದುರ್ಗ ಇವರ ವತಿಯಿಂದ ಕರ್ನಾಟಕ...

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ ಬೆಂಗಳೂರು ಉತ್ತರದ ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಮೇ 29, 30 ಮತ್ತು 31ರಂದು “ಯಲಹಂಕ...

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ ಉಡುಪಿ ಜಿಲ್ಲೆಯ ಕಡಿಯಾಳಿ ಶಾಲಾ ಮೈದಾನದಲ್ಲಿ ಮೇ 24, 2026ರಂದು “ಸೈಮಂಡ್ಸ್ ಪ್ರೀಮಿಯರ್ ಲೀಗ್...

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್ ಕಟಪಾಡಿ : ಯುವಕ ಸೇವಾದಳ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ,...
- Advertisement -spot_imgspot_img

ಬೈಂದೂರಿನಲ್ಲಿ ಆರಂಭವಾದ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಸಂಭ್ರಮ;  ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು

ಬೈಂದೂರಿನಲ್ಲಿ ಆರಂಭವಾದ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಸಂಭ್ರಮ;  ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಬೈಂದೂರು : ವಿಕ್ರಂ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಾಗೂ ಉಡುಪಿ ಜಿಲ್ಲಾ...

ಮಹಿಳಾ ಅಂಡರ್-15 ಕ್ರಿಕೆಟ್ ತಂಡಕ್ಕೆ ಸಮೃದ್ಧಿ ಆಯ್ಕೆ

ಮಹಿಳಾ ಅಂಡರ್-15 ಕ್ರಿಕೆಟ್ ತಂಡಕ್ಕೆ ಸಮೃದ್ಧಿ ಆಯ್ಕೆ ಉಡುಪಿ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟಿಗೆಯಾದ ಸಮೃದ್ಧಿ ಅವರು ಮಹಿಳಾ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ತಂಡಕ್ಕೆ ಆಲ್‌ರೌಂಡರ್‌...

Must read

- Advertisement -spot_imgspot_img

You might also likeRELATED
Recommended to you