6.2 C
London
Friday, December 13, 2024
Homeಕ್ರಿಕೆಟ್ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿ ಬದುಕಿನ ಅಂತಿಮ ಕ್ರಿಕೆಟ್ ಪಂದ್ಯವನ್ನಾಡಲಿದ್ದಾರೆ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ...

ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿ ಬದುಕಿನ ಅಂತಿಮ ಕ್ರಿಕೆಟ್ ಪಂದ್ಯವನ್ನಾಡಲಿದ್ದಾರೆ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೂಲನ್ ಗೋಸ್ವಾಮಿ: ಬಹಿರಂಗ ಪಡಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಭಾರತೀಯ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ್ತಿ *ಜೂಲನ್ ಗೋಸ್ವಾಮಿ*  ಶನಿವಾರ ಇಂಗ್ಲೆಂಡ್ ವಿರುದ್ಧ ನೆಡೆಯಲಿರುವ ಮೂರನೇ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಆಡುವುದರ ಜೋತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿಧಾಯ ಹೇಳಲಿದ್ದಾರೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಭಾರತೀಯ ಮಹಿಳಾ ಕ್ರಿಕೆಟ್ ಕಂಡ ಶ್ರೇಷ್ಠ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಇದು ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ. ಈ ಮಾಹಿತಿಯನ್ನು ಬಿಸಿಸಿಐ ನ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜೂಲನ್ ಗೋಸ್ವಾಮಿಯವರ ಅಂತಿಮ ಪಂದ್ಯದ ವಿಚಾರವಾಗಿ ಸಾಕಷ್ಟು ಚರ್ಚೆಗಳು ಈಗಾಗಲೇ ನಡೆಯುತ್ತಿದೆ. ಆದರೆ ಈವರೆಗೂ ಜೂಲನ್ ಗೋಸ್ವಾಮಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಎಲ್ಲು ಹೇಳಿಕೊಂಡಿಲ್ಲ .
ಆದರೆ ಭಾರತದ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಇದೀಗ ಸೌರವ್ ಗಂಗೂಲಿ ಕೂಡ ಅಧಿಕೃತವಾಗಿ ಮಾಹಿತಿ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಮಾದರಿಯ ವಿಶ್ವಕಪ್‌ನ ನಂತರ ಜೂಲನ್ ಗೋಸ್ವಾಮಿ ಯಾವುದೇ ಸರಣಿಯಲ್ಲು ಭಾಗಿಯಾಗಿರಲಿಲ್ಲ. ಆದರೆ ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸಕ್ಕೆ ಜೂಲನ್ ಅವರನ್ನು ಆಯ್ಕೆ ಮಾಡಿದ ಬಳಿಕ ಜೂಲನ್ ಗೋಸ್ವಾಮಿ ಈ ಸರಣಿಯ ನಂತರ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ
ಕೋಲ್ಕತ್ತಾದಲ್ಲಿ ನಡೆದ  ಕಾರ್ಯಕ್ರಮವೊಂದರಲ್ಲಿ ಬಿಸಿಸಿಐ ನ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡುವಾಗ ಇದೆ ಸಂದರ್ಭದಲ್ಲಿ ಜೂಲನ್ ಗೋಸ್ವಾಮಿ ಅವರ ಆಟದ ಬಗ್ಗೆ ಮಾತನಾಡುತ್ತ ಜೂಲನ್ ಅವರ ದೀರ್ಘ ಕಾಲದ ಶ್ರೇಷ್ಠ  ಪ್ರದರ್ಶನವನ್ನು ಕೊಂಡಾಡಿದ್ದಾರೆ. “ಜೂಲನ್ ಗೋಸ್ವಾಮಿ ಅವರ ಸಾಧನೆಯಿಂದಾಗಿ ನನಗೆ ಸಂತೋಷವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಅವರು   ಪ್ರದರ್ಶನ ನೀಡಿದ್ದು ನನ್ನ ಖುಷಿ ಇನ್ನಷ್ಟು ಹೆಚ್ಚಿದೆ.
ಜೂಲನ್ ಶ್ರೇಷ್ಠ ಕ್ರಿಕೆಟ್ ಆಡಿದ್ದಾರೆ. ನನ್ನ ಮಗಳು ಕ್ರಿಕೆಟ್ ಆಡಿದ್ದರೆ, ನಾನು ಅವಳನ್ನು ಜೂಲನ್ ಗೋಸ್ವಾಮಿಯಂತೆ ಇರುವಂತೆ ಹೇಳುತ್ತಿದ್ದೆ ಆದರೆ ಅದು ಆಗಲಿಲ್ಲ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಮಹಿಳಾ ತಂಡ ನೆಡೆದ ಎರಡು ಪಂದ್ಯದಲ್ಲಿ ಉತ್ತಮವಾಗಿ ಪ್ರದರ್ಶನ ನಿಡಿದ್ದು ಗೆಲುವು ಸಾಧಿಸಿದೆ” ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
“ಜೂಲನ್ ಗೋಸ್ವಾಮಿ ನಿಜಕ್ಕೂ ಓರ್ವ ದಿಗ್ಗಜ ಆಟಗಾರ್ತಿ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅವರು ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಅವರು ಬಂಗಾಳ ಚಕ್ದಾದಿಂದ ಬಂದವರು. ನಾನು ಅವರೊಂದಿಗೆ ತುಂಬಾ ಸೌಹಾರ್ದಯುತವಾದ ಸಂಬಂಧವನ್ನು ಹೊಂದಿದ್ದೇನೆ. ನಾನು ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಸಂಬಂಧಿಸಿದಂತೆ ಜೂಲನ್ ಗೋಸ್ವಾಮಿ ಅವರೊಂದಿಗೆ ಸಾಕಷ್ಟು ಭಾರಿ ಚರ್ಚೆ ನಡೆಸಿದ್ದೇನೆ” ಎಂದಿದ್ದಾರೆ ಸೌರವ್ ಗಂಗೂಲಿ.
“ನನಗೆ ಜೂಲನ್ ಬಗ್ಗೆ ತುಂಬಾ ಸಂತೋಷವಿದೆ. ಈಗ ಅವರು 40ರ ಹರೆಯದ ಸನಿಹದಲ್ಲಿದ್ದಾರೆ. ಅವರ ವೃತ್ತಿ ಜೀವನ ನಿಜಕ್ಕೂ ಅದ್ಭುತವಾಗಿದೆ. ಇದವರ ಆಟದ ವೈಕರಿ ಮುಂದೆ ಬರಲಿರುವ ಯುವ ಮಹಿಳಾ ಕ್ರಿಕೆಟಿಗರಿಗೆ ಪಾಠವಾಗಲಿದೆ. ಪ್ರತಿಯೊಬ್ಬ ಕ್ರೀಡಾಪಟುವಿನ ಕ್ರೀಡಾ ಜೀವನಕ್ಕೂ ಅಂತ್ಯವಿದೆ. ಕ್ರೀಡೆ ಅಂದರೆ ಹಾಗೆಯೇ. ಆದರೆ ಜೂಲನ್ ಗೋಸ್ವಾಮಿ ದೊಡ್ಡ ಪರಂಪರೆಯನ್ನೇ ಬಿಟ್ಟುಹೋಗುತ್ತಿದ್ದಾರೆ. ಆಕೆ ನಿಜಕ್ಕೂ ಎಲ್ಲರಿಗೂ ಮಾದರಿ. ಅವರ ವೃತ್ತಿ ಜೀವನ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಅಂತ್ಯವಾಗುತ್ತಿದೆ. ಲಾರ್ಡ್ಸ್‌ನಲ್ಲಿ ವೃತ್ತಿಜೀವನ ಅಂತ್ಯಗೊಳಿಸುವುದು ದೊಡ್ಡ ಕನಸು” ಎಂದಿದ್ದಾರೆ ಸೌರವ್ ಗಂಗೂಲಿ. ಇಂತಹ ಅವಕಾಶ ಜೂಲನ್ ಗೋಸ್ವಾಮಿ ಅವರಿಗೆ ಸಿಕ್ಕಿದೆ ಇದು ಅವರ ಶ್ರೇಷ್ಠ ಕ್ರಿಕೆಟ್ ಬದುಕಿಗೆ ಸಿಕ್ಕ ಗೌರವವು ಹೌದು…
 ಜೂಲನ್ ಗೋಸ್ವಾಮಿ ಅವರ ಮುಂದಿನ ಜೀವನವೂ ಸುಂದರವಾಗಿರಲಿ ಎಂದು ಕನ್ನಡ ಸ್ಪೋರ್ಟ್ಸ್ ವೆಬ್ ವತಿಯಿಂದ ಶುಭ ಕೊರೋಣ
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

16 + 2 =