Y.Sports ಯೂ ಟ್ಯೂಬ್ ಚಾನೆಲ್ ನ ರೂವಾರಿ ಯಾಸೀನ್ ಇವರ ಸಾರಥ್ಯದಲ್ಲಿ ಬೆಂಗಳೂರಿನ ಶೋಭಾ ಸಿಟಿ ಬಳಿಯ ಆರ್.ಕೆ.ಹೆಗ್ಡೆನಗರದ ಎಜೆಬಿಜೆ ಮೈದಾನದಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಹೆಗ್ಡೆ ನಗರ ಚಾಂಪಿಯನ್ಸ್ ಲೀಗ್-2020 ಪ್ರಶಸ್ತಿಯನ್ನು ಜಾನ್ಸನ್ ರಿಯಲ್ ಫೈಟರ್ಸ್ ತಂಡ ಜಯಿಸಿದೆ.
ರಾಜ್ಯದ ಪ್ರತಿಷ್ಠಿತ 16 ತಂಡಗಳು
ಭಾಗವಹಿಸಿದ್ದ ಈ ಪಂದ್ಯಾವಳಿಯ ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ
ಬ್ರೈಟ್ ಸ್ಟಾರ್ಸ್ ,ಅವಿಘ್ನ್ಯಾ ಸೃಷ್ಟಿ ತಂಡವನ್ನು ಹಾಗೂ ಜಾನ್ಸನ್ ರಿಯಲ್ ಫೈಟರ್ಸ್ ಎಮ್.ಬಿ.ಸಿ.ಸಿ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಗೆ ತೇರ್ಗಡೆಯಾಗಿತ್ತು.
ಫೈನಲ್ ನಲ್ಲಿ ಜಾನ್ಸನ್ ರಿಯಲ್ ಫೈಟರ್ಸ್ ತಂಡದ ಸಂಘಟಿತ ಹೋರಾಟದ ಫಲವಾಗಿ ಬ್ರೈಟ್ ಸ್ಟಾರ್ಸ್ ತಂಡವನ್ನು ಅನಾಯಾಸವಾಗಿ ಸೋಲಿಸಿ
ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದರು.
ವೀರೋಚಿತ ಹೋರಾಟದ ಬಳಿಕವೂ ಸೆಮಿಫೈನಲ್ ನಲ್ಲಿ ಮುಗ್ಗರಿಸಿದ್ದ ಅವಿಘ್ನ್ಯಾ ಸೃಷ್ಟಿ ತಂಡ ತೃತೀಯ ಸ್ಥಾನಿ ಪ್ರಶಸ್ತಿಗೆ ಪಾತ್ರರಾದರು.
ಪ್ರಥಮ ಪ್ರಶಸ್ತಿ ವಿಜೇತ ಜಾನ್ಸನ್ ರಿಯಲ್ ಫೈಟರ್ಸ್ 1ಲಕ್ಷ ಹಾಗೂ ದ್ವಿತೀಯ ಸ್ಥಾನಿ ಬ್ರೈಟ್ ಸ್ಟಾರ್ಸ್ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು. ಹಾಗೂ ವೈಯಕ್ತಿಕ ಪ್ರಶಸ್ತಿ ಕ್ರಮವಾಗಿ
ಫೈನಲ್ ನ ಪಂದ್ಯಶ್ರೇಷ್ಟ ಜಾನ್ಸನ್ ರಿಯಲ್ ಫೈಟರ್ಸ್ ನ ಸುಜಿತ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಬ್ರೈಟ್ ಸ್ಟಾರ್ಸ್ ನ ನಸ್ರುದ್ದೀನ್ ಪಡೆದುಕೊಂಡರು.
ಪಂದ್ಯಾವಳಿಯ ನೇರ ಪ್ರಸಾರ Y.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸಿತ್ತು…