Categories
ಕ್ರಿಕೆಟ್

ಜನಪ್ರಿಯ ದಾವಣಗೆರೆ ತಂಡಕ್ಕೆ ಎಸ್.ಎಸ್ ಕಪ್-2020

ದಾವಣಗೆರೆ  ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ವತಿಯಿಂದ
ಡಾ. ಶಾಮನೂರು ಶಿವಶಂಕರಪ್ಪ ನವರ ಹುಟ್ಟು ಹಬ್ಬದ ಅಂಗವಾಗಿ ನೆಡೆದ  ಎಸ್.ಎಸ್. ಕಪ್ -2020
6 ದಿನಗಳ ಕಾಲ ನಡೆದ  ಲೀಗ್ ಕಮ್ ನಾಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ  ಗೆದ್ದ ಕ್ರೀಡಾ ತಂಡಗಳಿಗೆ  ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಬಹುಮಾನ ವಿತರಣೆ ಮಾಡಿದರು.
ಜನಪ್ರಿಯ ದಾವಣಗೆರೆ ತಂಡ  ಪ್ರಥಮ ಬಹುಮಾನ 33,333 ನಗದು ಮತ್ತು ಟ್ರೋಫಿ ಯನ್ನು  ಸ್ನೇಹ ಜೀವಿ ದಾವಣಗೆರೆ ತಂಡ ದ್ವಿತೀಯ ಬಹುಮಾನ 22,222 ನಗದು ಮತ್ತು  ಟ್ರೋಫಿಯನ್ನು ಆಫಿಷಿಯಲ್ ಕ್ರೀಡಾಕೂಟದಲ್ಲಿ ಮರ್ಚಂಟ್ ಕ್ಲಬ್ ದಾವಣಗೆರೆ ತಂಡ ಪ್ರಥಮ ಮತ್ತು ಜಿಲ್ಲಾ ಪೊಲೀಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದರು ಜಿಲ್ಲಾ ಕ್ರೀಡಾಂಗಣ (ಸ್ಟೇಡಿಯಂ) ನಲ್ಲಿ ನಡೆದ ಪಂದ್ಯಾವಳಿಯಲ್ಲಿ 20 ತಂಡಗಳು ಬಾಗವಹಿಸಿದ್ದವು.
ಬಹುಮಾನ ವಿತರಿಣಾ ಸಂದರ್ಭದಲ್ಲಿ ಶಿವಗಂಗಾ ಗ್ರೂಪ್ ನ ಮಾಲೀಕರು ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಶಿವಗಂಗಾ ಶ್ರೀನಿವಾಸ್,ಎಚ್ ಮಹದೇವ್, ರಾಜು ರೆಡ್ಡಿ, ರಮೇಶ್(ಕ್ಲಾಸಿಕ್ ), ಟ್ರಾಫಿಕ್ ಇನ್ಸ್ಪೆಕ್ಟರ್ ಕಿರಣ್ ,ಸರ್ಕಲ್ ಇನ್ಸ್ಪೆಕ್ಟರ್ ಶಂಕರ್ ,ಡಿಆರ್ ಡಿವೈಎಸ್ಪಿ ಯಾದ ಪ್ರಕಾಶ್ ಪ್ರಸಾದ್ ರೆಡ್ಡಿ, ಸಂಘಟಕರಾದ  ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ ( ಕುಬೇರ)ಇನ್ನು ಮುಂತಾದವರಿದ್ದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

5 + thirteen =