ಕೋಟ-ಜೈಹಿಂದ್ ಕ್ರಿಕೆಟರ್ಸ್ ಮಣೂರು-ಪಡುಕರೆ ಆಶ್ರಯದಲ್ಲಿ,ಜೈಹಿಂದ್ ಪ್ರೀಮಿಯರ್ ಲೀಗ್-2023 ಕ್ರಿಕೆಟ್ ಪಂದ್ಯಾಟ ಮಣೂರು ಪಡುಕರೆ ಕಾಲೇಜು ಮೈದಾನದಲ್ಲಿ ಜರುಗಿತು.
ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್ ಮಾತನಾಡಿ “ಜೈಹಿಂದ್ ಸಂಸ್ಥೆ ಕ್ರೀಡೆಯ ಜೊತೆಗೆ ಸಮಾಜಸೇವಾ ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿದೆ” ಎಂದರು.
ಈ ಸಂದರ್ಭ 2023 ರ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಜಯರಾಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಗೋವನ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಬಿಜು ನಾಯರ್,ಬೃಹ್ಮಾವರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ,ಕೋಟ ಠಾಣೆಯ ಪೋಲೀಸ್ ಉಪ ನಿರೀಕ್ಷಕ ಶಂಭುಲಿಂಗಯ್ಯ,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮಾಲಕ ಕೋಟ ರಾಮಕೃಷ್ಣ ಆಚಾರ್,ದಿನೇಶ್ ಪಡುಕರೆ ಭಾಗವಹಿಸಿದ್ದರು.
ರಾಜ್ಯದ ಪ್ರಸಿದ್ಧ ವೇಗಿ ಪ್ರಶಾಂತ್ ಪಡುಕರೆ ಸಾರಥ್ಯದಲ್ಲಿ ಜೈಹಿಂದ್ ಪಡುಕರೆ ತಂಡ ಕಾರ್ಯಕ್ರಮ ಸಂಯೋಜಿಸಿದರು.