Categories
ಕ್ರಿಕೆಟ್

ಜೈ ಕರ್ನಾಟಕ ಅರವತ್ತರ ಸಂಭ್ರಮ ಜೆ.ಕೆ.ಪಿ.ಎಲ್-2020″

 

ಅರವತ್ತರ ದಶಕದಲ್ಲಿ ಒಂದಷ್ಟು ಒಳ್ಳೆಯ ಮನಸ್ಸುಗಳು, ಒಳ್ಳೆಯ ಆಲೋಚನೆಗಳು ಒಂದೆಡೆ ಸೇರಿ ಒಂದು ಒಳ್ಳೆಯ ಉದ್ದೇ ಶದೊಂದಿಗೆ ಗ್ರಾಮೀಣ ಪ್ರತಿಭೆಗಳಿಗೆ ಕ್ರಿಕೆಟ್ ಕ್ಷೇತ್ರದಲ್ಲಿ ಅವಕಾಶ ನೀಡಬೇಕು ಅವರಿಗೆ ಒಳ್ಳೆಯ ಅಂಗಣವನ್ನು ಒದಗಿಸಿ ಕೊಡಬೇಕು ಅನ್ನುವ ಬದ್ಧತೆಯನ್ನು ಇರಿಸಿಕೊಂಡು ಆರಂಭಗೊಂಡ ತಂಡ.

ಸಾಧಕರಿಗೆ ಸಾಧನೆ ಮಾಡಲು ಅವಕಾಶದ ಕೊರತೆ ಇದೆ ಆದರೆ ಸಾಧನೆ ಮಾಡಲು ಸಾಧಿಸುವ ಛಲ ಒಂದು ಇದ್ದರೆ ಸಾಕು ಆತ ನಕ್ಷತ್ರವನ್ನು ಕೂಡ ಮುಟ್ಟಲು ಬಹುದು ಅನ್ನುವ ಯೋಚನೆಯಿಂದ ಆರಂಭಗೊಂಡ ಸಮಿತಿ. ಅನೇಕ ಯುವ ಮನಸು ಗಳಿಗೆ ಅಂಗಣವನ್ನು ಸೃಷ್ಟಿ ಮಾಡುವಲ್ಲಿ ಯಶಸ್ಸು ಕಂಡ, ಇದರ ಜೊತೆಗೆ ಜನಸ್ನೇಹಿ ಕಾರ್ಯಕ್ರಮಗಳು, ಹಸಿದ ಶಾಲಾ ಮಕ್ಕಳ ಹೊಟ್ಟೆಗೆ ಅನ್ನ ದಾಸೋಹದ ಮೂಲಕ ಹಸಿವನ್ನು ತಣಿಸುವ ಪ್ರಯತ್ನವನ್ನು ನಿರಂತರ ಮಾಡುತ್ತಾ ಬಂದಿರುವ ಒಂದು ಯಶಸ್ವಿ ತಂಡ ಅದುವೇ “ಜೈ ಕರ್ನಾಟಕ ಕ್ರಿಕೆಟ್ ತಂಡ”ಜೈ ಕರ್ನಾಟಕ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ (ರಿ ) ಬೆಂಗಳೂರು ಇದರ ವತಿಯಿಂದ ಡಾ. ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಜೈ ಕರ್ನಾಟಕ ಪ್ರೀಮಿಯರ್ ಲೀಗ್ 2020, ಅಂತರಾಷ್ಟ್ರೀಯ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನ್ ಮೆಂಟ್ ಏಪ್ರಿಲ್ ತಿಂಗಳ 23 ರಿಂದ ಆರಂಭಗೊಂಡು 26 ರ ವರೆಗೆ ನಿರಂತರವಾಗಿ 4 ದಿನಗಳ ಕಾಲ ಜೆ ಪಿ ಪಾರ್ಕ್ ಕ್ರೀಡಾಂಗಣ ಬೆಂಗಳೂರು ಇಲ್ಲಿ ನಡೆಯಲಿದೆ.

ಅಂತರಂಗದ ಸಾಧನೆಯ ಜೊತೆಗೆ ಉದಾತ್ತ ಮಾನವತೆಯ ಸಾಕಾರ ಮೂರ್ತಿಯಾಗಿ ಮೆರೆದ ಬಾಂಧವ್ಯದ ಬಂಧು ಸತತ ಒಂದೂವರೆ ದಶಕಗಳ ಕಾಲ ಕರ್ನಾಟಕ ರಾಜ್ಯ ಟೆನಿಸ್ ಕ್ರಿಕೆಟ್ ಅಂಗಣದಲ್ಲಿ ಇತಿಹಾಸ ನಿರ್ಮಿಸಿದ ಚಮತ್ಕಾರಿ ಆಟಗಾರ, ಸ್ವರ್ಣ ಇತಿಹಾಸ ಬರೆದ ಜೈ ಕರ್ನಾಟಕ ಕ್ರಿಕೆಟ್ ತಂಡಕ್ಕಾಗಿ ಸರ್ವಸ್ವವನ್ನೆ ಸವೆಸಿದ ಮಾಣಿಕ್ಯ “ಮೆರ್ವಿನ್ ಸ್ಮರಣಾರ್ಥ” ನಡೆಯುವ ಜೈ ಕರ್ನಾಟಕ ಬೆಂಗಳೂರು ಅರ್ಪಿಸುವ “ಜೆ ಕೆ ಪಿ ಎಲ್ – 2020”

ಅಶ್ವತ್ಥ್ ಕುಮಾರ್ ಅವರ ಮಾರ್ಗದರ್ಶನ ಹಾಗೂ ದೂರ ದೃಷ್ಟಿಯಿಂದ ಆರಂಭಗೊಂಡ ಜೈ ಕರ್ನಾಟಕ ಟಿ 10 ಟೆನಿಸ್ ಬಾಲ್ ಟೂರ್ನ್ ಮೆಂಟ್ ಮತ್ತೊಮ್ಮೆ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರಿಗೆ ಹುರುಪನ್ನು ತುಂಬಿಸುವ ದೃಷ್ಟಿಯಿಂದ ಜೈ ಕರ್ನಾಟಕ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ ) ಆರಂಭಗೊಂಡು ಅನೇಕ ಯಶಸ್ವೀ ಪಂದ್ಯವನ್ನು ನಡೆಸುವುದರ ಜೊತೆಗೆ ಅನೇಕ ಕಿರಿಯ ಕ್ರಿಕೆಟ್ ಪ್ರೇಮಿಗಳಿಗೆ ಅವಕಾಶ ಕಲ್ಪಿಸಿದೆ. ಅಂತರಾಷ್ಟ್ರೀಯ ಆಟಗಾರರಾದ ದೊಡ್ಡ ಗಣೇಶ್, ಡೇವಿಡ್ ಜಾನ್ಸನ್, ಮತ್ತು ಎಸ್‌.ಅರವಿಂದ್
ಇವರುಗಳು ಈ ಪ್ರಸಿದ್ಧ ತಂಡದಲ್ಲಿದ್ದು ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಜೈ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ ಜೊತೆಯಾಗಿ ನಾಗೇಶ್ ಸಿಂಗ್ ಹಾಗೂ ಭಗವಾನ್ ಸಿಂಗ್ ಭಾರತದ ಇಂಡೋರ್ ಮಾಸ್ಟರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಗ್ಗಳಿಕೆ.

ಇದೀಗ ಮತ್ತೊಮ್ಮೆ ಜೈ ಕರ್ನಾಟಕ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯು ಯುವ ಕ್ರಿಕೆಟ್ ಆಟಗಾರರಿಗೆ ಅವಕಾಶ ಕಲ್ಪಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಮತ್ತು ಪಟ್ಟಣ ಪ್ರದೇಶಗಳ ಯುವ ಆಟಗಾರರನ್ನು ಒಂದೇ ಅಂಗಣದಲ್ಲಿ ಒಟ್ಟು ಸೇರಿಸ ಬೇಕು ಅನ್ನುವ ದೃಷ್ಟಿಯಿಂದ ಇದೇ ಬರುವ ಏಪ್ರಿಲ್ ತಿಂಗಳ 23 ರಿಂದ 26 ರ ವರೆಗೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ದಿನಾಂಕ 24-4 – 2020 ರಂದು ಡಾ ರಾಜ್ ಕುಮಾರ್ ಮತ್ತು ಸಚಿನ್ ತೆಂಡೂಲ್ಕರ್ ರವರ ಹುಟ್ಟು ಹಬ್ಬದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ . ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.

ಜೈ ಕರ್ನಾಟಕದ ಟ್ರಂಪ್ ಕಾರ್ಡ್ ಸಚಿನ್ ಮಹಾದೇವ್ ನೇತೃತ್ವದ M.Sports, ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,
ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಲಯನ್ಸ್ ಕ್ಲಬ್ ಬೆಂಗಳೂರು ಭಾಗವಹಿಸುತ್ತಿರುವ
ಈ ಪಂದ್ಯಾವಳಿಯ ವಿಜೇತರಿಗೆ ಪ್ರಥಮ ಬಹುಮಾನ ರೂ 2,22,222 ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ 1,11,111 ಮತ್ತು ಟ್ರೋಫಿ ದೊರೆಯಲಿದೆ.
ಸರಣಿ ಶ್ರೇಷ್ಠ ಪ್ರಶಸ್ತಿ ರೂ. 10,000 ಮತ್ತು ಟ್ರೋಫಿ, ಉತ್ತಮ ಬ್ಯಾಟ್ಸ್ಮನ್ ರೂ. 5,555 ಮತ್ತು ಟ್ರೋಫಿ, ಉತ್ತಮ ಎಸೆತಗಾರ ರೂ. 5,555 ಮತ್ತು ಟ್ರೋಫಿ, ಉತ್ತಮ ವಿಕೆಟ್ ಕೀಪರ್ ರೂ. 2,222 ಮತ್ತು ಟ್ರೋಫಿ. ಪಂದ್ಯ ಶ್ರೇಷ್ಠ ಪ್ರಶಸ್ತಿ ರೂ 1,111 ಮತ್ತು ಟ್ರೋಫಿ ಜೊತೆಗೆ ಪ್ರತಿ ಪಂದ್ಯದಲ್ಲಿ ಆಡುವ ಒಬ್ಬ ಆಟಗಾರನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ ರೂ 500 ನೀಡಲಾಗುವುದು. ಅತ್ಯಂತ ಶಿಸ್ತಿನ ತಂಡಕ್ಕೆ ಟ್ರೋಫಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

seventeen − fourteen =