ಸವ್ಯಸಾಚಿ ಕ್ರಿಕೆಟರ್ಸ್ ಹುರುಳಿಚಿಕ್ಕನಹಳ್ಳಿ ಇವರ ಆಶ್ರಯದಲ್ಲಿ ಮಾರ್ಚ್ 14 ಮತ್ತು 15 ರಂದು ಸೋಲದೇವನಹಳ್ಳಿಯ ಎಸ್.ಆರ್.ಕ್ರಿಕೆಟ್ ಅರೇನಾದಲ್ಲಿ ನಡೆದ ರಾಜ್ಯ ಮಟ್ಟದ ಹಗಲಿನ ಪಂದ್ಯಾವಳಿ “ಸವ್ಯಸಾಚಿ ಕಪ್ ಸೀಸನ್ 3” ಪ್ರಶಸ್ತಿಯನ್ನು ಜೈ ಕರ್ನಾಟಕ ಬೆಂಗಳೂರು ತಂಡ ಜಯಿಸಿದೆ.
ರೋಚಕವಾಗಿ ಸಾಗಿದ ಉಪಾಂತ್ಯ ಪಂದ್ಯಗಳಲ್ಲಿ ಸಿಂಪಲ್ ಸ್ಟ್ರೈಕರ್ಸ್,ಪುಲಕೇಶಿ ಹೆಸರಘಟ್ಟ ತಂಡವನ್ನು ಹಾಗೂ ಜೈ ಕರ್ನಾಟಕ
ಬಲಿಷ್ಠ ನ್ಯಾಶ್ ತಂಡವನ್ನು ಸೋಲಿಸಿತ್ತು.
ಅಂತಿಮವಾಗಿ ಫೈನಲ್ ನಲ್ಲಿ ಜೈ ಕರ್ನಾಟಕದ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಸಿಂಪಲ್ ಸ್ಟ್ರೈಕರ್ಸ್ ನ್ನು ಮಣಿಸಿ ಆಕರ್ಷಕ ಟ್ರೋಫಿ ಸಹಿತ 1.5 ಲಕ್ಷ ನಗದು, ರನ್ನರ್ಸ್ ತಂಡ 75 ಸಾವಿರ ಸಹಿತ ಆಕರ್ಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು.
ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಸಿಂಪಲ್ ಸ್ಟ್ರೈಕರ್ಸ್ ನ ಚೇತನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.