Categories
ಕ್ರಿಕೆಟ್

ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಝಾರ್ಖಂಡ್-94 ಎಸೆತದಲ್ಲಿ 173 ರನ್ ಸಿಡಿಸಿದ ಇಶಾನ್

ದೇಶೀಯ ಕ್ರಿಕೆಟ್ ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ  ವಿಜಯ್ ಹಜಾರೆ ಟ್ರೋಫಿಯ ಏಕದಿನ ಕ್ರಿಕೆಟ್ ಪಂದ್ಯಾವಳಿಯು ತಂಡ ಒಂದರ ದಾಖಲೆಯ ಸ್ಕೋರ್. ಆಟಗಾರನೊಬ್ಬನ ಸಿಡಿಲಬ್ಬರದ ಬ್ಯಾಟಿಂಗ್ ನೊಂದಿಗೆ  ಟೂರ್ನಿಗೆ ಭರ್ಜರಿ ಆರಂಭ ದೊರೆತಂತಾಗಿದೆ.
ಮಧ್ಯ ಪ್ರದೇಶ ಹಾಗೂ ಝಾರ್ಖಂಡ್ ನಡುವೆ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಝಾರ್ಖಂಡ್ ತಂಡ ದಾಖಲೆಯ ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ. 422 ರನ್ ಗಳಿಸುವ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವಾಗಿ ದಾಖಲೆ ಬರೆದಿದೆ. ಇದೆ ತಂಡದ ನಾಯಕ ಇಶಾನ್ ಕಿಶನ್ ಸ್ಪೋಟಕ ಆಟ ಪ್ರದರ್ಶಿಸಿ ಬೌಂಡರಿ ಸಿಕ್ಸರ್ ಗಳ ಸುರಿಮಳೆ ಗೈದು ಅದ್ಭತ ಶತಕವನ್ನು ದಾಖಲಿಸಿದ್ದಾರೆ.
ಮೊದಲಿಗೆ ಬ್ಯಾಟಿಂಗ್ ಮಾಡಿದ ಝಾರ್ಖಂಡ್ ತಂಡದ ಪರವಾಗಿ ನಾಯಕ ಇಶಾನ್ ಕಿಶನ್ ಕೇವಲ 94  ಎಸೆತಗಳಲ್ಲಿ ಭರ್ಜರಿ 173 ರನ್ ಕಲೆಹಾಕಿದ್ದಾರೆ. 28ನೇ ಓವರ್‌ನಲ್ಲಿ ಔಟಾಗುವ ಮುನ್ನ ಇಶಾನ್ ಕಿಶನ್ ದ್ವಿಶತಕವನ್ನು ಬಾರಿಸುವ ಅವಕಾಶವನ್ನು ಹೊಂದಿದ್ದರು ಕೆಟ್ಟ ಹೊಡೆತಕ್ಕೆ ಮನಸ್ಸು ಮಾಡಿ ಪೆವಿಲಿಯನ್ ಕಡೆ ಹೊಗುವಂತಾಯಿತು. ಆದರೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ನಲ್ಲಿ 19 ಬೌಂಡರಿ ಹಾಗೂ 11 ಸಿಕ್ಸರ್‌ಗಳನ್ನು ಸಿಡಿಸಿದ ಇಶಾನ್ ಕಿಶನ್ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು.
ಇಶಾನ್ ಕಿಶನ್ ಔಟಾಗುವ ಸಮಯದಲ್ಲಿ 173 ರನ್ ಕಲೆಹಾಕಿದ್ದರು ಇನ್ನೇನು ಇವರಿಗೆ ದ್ವಿಶತಕಕ್ಕಾಗಿ ಕೇವಲ 27 ರನ್‌ ಬೇಕಾಗಿತ್ತು ಅದೃಷ್ಟವು ಕೈ ಕೊಟ್ಟಿತು ದ್ವಿಶತಕ ವಂಚಿತರಾಗಿ ಪೆವಿಲಿಯನ್ ಗೆ ಮರಳಿದರು ಕಿಶನ್ . ಇನ್ನಿಂಗ್ಸ್‌ನಲ್ಲಿ ಇನ್ನೂ ಕೂಡ 22 ಓವರ್‌ಗಳು ಬಾಕಿಯಿತ್ತು.
ಈ ಮೂಲಕ ಈ ಬಾರಿಯ ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ನ ಈ ಸ್ಟಾರ್ ಆಟಗಾರ ಭರ್ಜರಿ ಫಾರ್ಮ್‌ಅನ್ನು ಪ್ರದರ್ಶಿಸಿದ್ದಾರೆ.
ಇಶಾನ್ ಕಿಶನ್ ನಿರ್ಗಮನದ ಬಳಿಕವೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಸಿಂಗ್ 68 ರನ್, ಸುಮಿತ್ ಕುಮಾರ್ 52 ರನ್ ಹಾಗೂ ಅನುಕುಲ್ ರಾಯ್ 72 ರನ್ ಗಳಿಸುವ ಮೂಲಕ ಎದುರಾಳಿ ತಂಡದ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು ಜೊತೆಗೆ ಝಾರ್ಖಂಡ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಝಾರ್ಖಂಡ್ ತಂಡದ ಆರಂಭಿಕ ಆಟಗಾರ ಉತ್ಕರ್ಷ್ ಸಿಂಗ್ ಗುರುವಾರ ನಡೆದ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಮೂಲ ಬೆಲೆ 20 ಲಕ್ಷಕ್ಕೆ ಹರಾಜಾಗಿದ್ದರು. ಆದರೆ ಅವರು ಕೇವಲ 6 ರನ್ ಗಳಿಸಿದ್ದಾಗ ಔಟ್ ಮಾಡುವಲ್ಲಿ ಬೌಲರ್ ಈಶ್ವರ್ ಪಾಂಡೆ ಯಶಸ್ವಿಯಾದರು.
ದೇಶೀ ಕ್ರಿಕೆಟಿನಲ್ಲಿ ಜಾರ್ಖಂಡ್ ಹೊಸ ದಾಖಲೆಯೊಂದನ್ನು ಸ್ಥಾಪಿಸಿದೆ. ನಾಯಕ ಇಶಾನ್ ಕಿಶನ್ ಅವರ ಶರವೇಗದ ಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ 422 ರನ್ ಗಳಿಸುವ ಮೂಲಕ ದೇಶೀ ಕ್ರಿಕೆಟಿನಲ್ಲಿ ಅತ್ಯಧಿಕ ರನ್ ಸಂಪಾದಿಸಿದ ಹೊಸ ದಾಖಲೆಯನ್ನು ಝಾರ್ಖಂಡ್ ತಂಡ ಬರೆದಿದೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಈ ದಾಖಲೆ ಸೃಷ್ಟಿಯಾಯಿತು. ಜಾರ್ಖಂಡ್‌ನ ದಾಖಲೆಯ ಮೊತ್ತದಲ್ಲಿ ಪ್ರಮುಖ ಕೊಡುಗೆ ನಾಯಕ ಇಶಾನ್‌ರದ್ದು.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಇಶಾನ್ 2021ರ ಐಪಿಎಲ್ ಟೂರ್ನಿಯಲ್ಲಿ 516 ರನ್‌ಗಳೊಂದಿಗೆ ಅತ್ಯಧಿಕ ಸ್ಕೋರುದಾರರಾಗಿ ಮೂಡಿಬಂದಿದ್ದರು.

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

2 × 4 =