ಶಿರ್ವದ ವಿದ್ಯಾವರ್ಧಕ ಸಂಘದ ಹಿಂದೂ ಜೂನಿಯರ್ ಕಾಲೇಜು ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಆಸ್ಟ್ರೋ ಟರ್ಫ್ ಅಂಗಣದ ಉದ್ಘಾಟನೆಯು ಇತ್ತೀಚೆಗೆ ನೆರವೇರಿತು.
ಸಮಾರಂಭದಲ್ಲಿ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿಗಳಾದ ಪ್ರೊ ವೈ ಭಾಸ್ಕರ ಶೆಟ್ಟಿ, ಹಿಂದೂ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ರಾಜಗೋಪಾಲ್ , ಸಮಾಜ ಸೇವಕ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಹಿಂದೂ ಜೂನಿಯರ್ ಕಾಲೇಜ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಕುತ್ಯಾರು ಪ್ರಸಾದ್ ಶೆಟ್ಟಿ, ಗೌರವಾಧ್ಯಕ್ಷ ಶ್ರೀ ಸಚ್ಚಿದಾನಂದ ಹೆಗ್ಡೆ, ಕಾರ್ಯದರ್ಶಿ ಶ್ರೀ ಪ್ರಶಾಂತ್ ಬಿ. ಶೆಟ್ಟಿ, ಪ್ರೊ ಕೆ ಜಿ ಮಂಜುನಾಥ್, ಶಿರ್ವ ಶ್ರೀ ಶಂಭು ಶೆಟ್ಟಿ, ಶ್ರೀ ಸುಧೀರ್ ಶೆಟ್ಟಿ, ಶ್ರೀ ಹೆರಾಲ್ಡ್ ಪ್ರಕಾಶ್ ಡಿಸೋಜಾ,ಹಿರಿಯ ಬ್ಲೂಸ್ಟಾರಿಗರಾದ ಡೇವಿಡ್ ಮಥಾಯಸ್,ಮೋಹನ್ ಶಿರ್ವ,ಶಾಕಿರ್ ಅಸ್ಸಾದಿ ಮತ್ತು ಹಳೆ ವಿದ್ಯಾರ್ಥಿಗಳಾದ ಧೀರಜ್ ಶೆಟ್ಟಿ ಮತ್ತು ರೂಪೇಶ್ ಕುಮಾರ್,ಲೂಯಿಸ್ ರೊಸಾರಿಯೋ ಮತ್ತಿತರರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭಕ್ಕೂ ಮುಂಚಿತವಾಗಿ ಆಗಮಿಸಿದ 90 ರ ದಶಕದಲ್ಲಿ ಭಾರತ ಅಂತರಾಷ್ಟ್ರೀಯ ತಂಡ ಮತ್ತು ಕರ್ನಾಟಕ ರಣಜಿ ತಂಡ ವನ್ನು ಪ್ರತಿನಿಧಿಸಿದ್ದ ಕರ್ನಾಟಕದ ವೇಗಿ ಡೇವಿಡ್ ಜಾನ್ಸನ್ ಇವರನ್ನು ಸದಾನಂದ ಶಿರ್ವ ಇವರು ಸ್ಮರಣಿಕೆ ನೀಡುವುದರ ಮೂಲಕ ಸ್ವಾಗತಿಸಿದರು.
ಪಿಚ್ ನ ಉದ್ಘಾಟನೆಯನ್ನು ಅನಿವಾಸಿ ಉದ್ಯಮಿ ಪ್ರದೀಪ್ ಶೆಟ್ಟಿ ಹಾಗೂ ಸಿವಿಲ್ ಕಾಂಟ್ರಾಕ್ಟರ್ ಆನಂದ್ ಅರಾ಼ನ್ನ ನೆರವೇರಿಸಿದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿಂದೂ ಜೂನಿಯರ್ ಕಾಲೇಜ್ ಹಳೆ ವಿದ್ಯಾರ್ಥಿ ಸಂಘದ ಮುಂಬೈ ಘಟಕದ ಶ್ರೀ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ ಹಾಗೂ ಶ್ರೀ ಕಾಂದೇಶ್ ಭಾಸ್ಕರ ಶೆಟ್ಟಿ ಭಾಗವಹಿಸಿದ್ದರು.ಮುಖ್ಯ ತರಬೇತುದಾರರಾದ ಶ್ರೀ ಸದಾನಂದ್ ಶಿರ್ವ ಪ್ರಾಸ್ಥಾವಿಕದೊಂದಿಗೆ ಸ್ವಾಗತಿಸಿದರು.
ಪಿಚ್ಚಿನ ಉದ್ಘಾಟನೆಯ ನಂತರ ಉಡುಪಿ ಮಂಗಳೂರು ಹಾಗೂ ಬೆಂಗಳೂರಿನ 50 ಪ್ಲಸ್ ಹಿರಿಯ ಕ್ರಿಕೆಟಿಗರ, ಎರಡು ತಂಡಗಳ ನಡುವೆ 35 ಓವರ್ಗಳ ಸೌಹಾರ್ದ ಕ್ರಿಕೆಟ್ ಪಂದ್ಯಾಟ ನಡೆಯಿತು.
ಹೆಚ್ ಜೆ ಸಿ ಅಕಾಡೆಮಿ ಶಿರ್ವ ಇದರ ಪ್ರಧಾನ ಕೋಚ್ ಶ್ರೀಯುತ ಸದಾನಂದ ಶಿರ್ವ ಹಾಗೂ ಕಟಪಾಡಿ ಕೆ ಆರ್ ಎಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್ ಶ್ರೀಯುತ ಉದಯಕುಮಾರ್ ನೇತೃತ್ವದ ಎರಡು ತಂಡಗಳ ನಡುವೆ ಏಕದಿನ ಪಂದ್ಯ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಉದಯ್ ಕುಮಾರ್ ನೇತೃತ್ವದ ತಂಡ ನಿಗದಿತ 35 ಓವರುಗಳಲ್ಲಿ 243 ರನ್ನುಗಳನ್ನು ಕೂಡಿ ಹಾಕುವಲ್ಲಿ ಯಶಸ್ವಿಯಾಯಿತು. ಜವಾಬ್ ಇತ್ತ ಸದಾನಂದ್ ಶಿರ್ವ ನೇತೃತ್ವದ ತಂಡ 33 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಗುರಿ ತಲುಪುವಲ್ಲಿ ಯಶಸ್ವಿಯಾಯಿತು
ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಲೂಯಿಸ್, ಉತ್ತಮ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಯನ್ನು ಲಿಂಗಪ್ಪ , ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಸುಶೀಲ್ ಹಾಗೂ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಸದಾನಂದ ಶಿರ್ವ ಪಡೆದುಕೊಂಡರು.
ಜಿಲ್ಲೆಯ ಇತರ ಪ್ರಸಿದ್ಧ ಕ್ರಿಕೆಟ್ ಅಕಾಡೆಮಿಗಳಾದ ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಉದಯ್ ಕುಮಾರ್,ಎಸ್.ಎಮ್.ಎಸ್ ಕ್ರಿಕೆಟ್ ಅಕಾಡೆಮಿಯ ಲಿಂಗಪ್ಪ ಸರ್ ಮತ್ತು ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ (BACA)ವಿಜಯ್ ಆಳ್ವ ಪಂದ್ಯಾಕೂಟಕ್ಕೆ ಸಹಕರಿಸಿದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಣೆ,ನಿರೂಪಣೆಗೈದರೆ,ಅರವಿಂದ ಮಣಿಪಾಲ್ ಪಂದ್ಯಾಟದ ವೀಕ್ಷಕ ವಿವರಣೆ ನಡೆಸಿದರು.