Categories
ಕ್ರಿಕೆಟ್

INFY ಸಮರ್ಪನ್ ಕಪ್ 2023-DXC ಟೆಕ್ನಾಲಜಿ ತಂಡ ಚಾಂಪಿಯನ್.

ಬೆಂಗಳೂರು-ಇನ್ಫೋಸಿಸ್ ಪ್ರಸ್ತುತಪಡಿಸಿದ  INFY ಸಮರ್ಪನ್ ಕಪ್ 2023 ದಿನಾಂಕ 25-ಫೆಬ್ರವರಿ-23 ರಿಂದ 04-ಜೂನ್-23 ವರೆಗೆ ಇನ್ಫೋಸಿಸ್ ಕ್ರಿಕೆಟ್ ಮೈದಾನ , ಬೆಂಗಳೂರುನಲ್ಲಿ ನಡೆಯಿತು.
  ಇದು ಬೆಂಗಳೂರಿನ ಅತ್ಯುತ್ತಮ ಇಂಟರ್ ಕಾರ್ಪೊರೇಟ್  ಪಂದ್ಯಾವಳಿಯಾಗಿದ್ದು 12 ಕಾರ್ಪೊರೇಟ್ ಕಂಪನಿಯ ಟೀಮ್ ಗಳು ಈ ಬಾರಿಯ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದವು. ‘A’ ಬಣದಲ್ಲಿ INFY ಕ್ರಿಕೆಟ್ ತಂಡ, ಡೆಲ್ ಟೆಕ್ನಾಲಜೀಸ್, ಆಕ್ಸೆಂಚರ್, ಟಿಸಿಎಸ್, ವಿಪ್ರೋ ಲಿ., SAP ಲ್ಯಾಬ್ಸ್ ತಂಡಗಳು ಇದ್ದವು.  ಹಾಗೇನೇ ‘B’ ಬಣದಲ್ಲಿ ANZ,ಟೆಸ್ಕೊ ,DXC ಟೆಕ್ನಾಲಜಿ , ಜೆಪಿ ಮೋರ್ಗಾನ್, ಟೀಮ್ HSBC,Unisys Ind Pvt LTD ಈ ರೀತಿಯ ಪ್ರಸಿದ್ಧ ಕಂಪನಿಗಳ ತಂಡಗಳು ಪಾಲ್ಗೊಂಡಿದ್ದವು.
INFY ಕ್ರಿಕೆಟ್ ತಂಡ ಮತ್ತು ANZ ಕ್ರಮವಾಗಿ ಎಲಿಮಿನೇಟರ್ ಮತ್ತು ಕ್ವಾಲಿಫ್ಯೆಯರ್ ರೌಂಡ್ ನಲ್ಲಿ ಟೂರ್ನಿಯಿಂದ ಹೊರ ಬಿದ್ದವು.ಲೀಗ್ ಮಾದರಿಯ ಟೂರ್ನಮೆಂಟ್ ನ ಅಂತಿಮ ಪಂದ್ಯ 23 ಜೂನ್, 2023 ರಂದು DXC ತಂತ್ರಜ್ಞಾನ ಮತ್ತು ಟೆಸ್ಕೊ  ಇತ್ತಂಡಗಳ ನಡುವೆ ರೋಚಕವಾಗಿ ಸಾಗಿ ಬಂದಿತು.  25 ಓವರ್ ಗಳ  ಪಂದ್ಯದಲ್ಲಿ ಟಾಸ್ ಗೆದ್ದು  ಬ್ಯಾಟಿಂಗ್ ಆಯ್ಕೆ ಮಾಡಿದ   DXC ಟೆಕ್ನಾಲಜಿ ನಿಗದಿತ 24.2 ಓವರ್ ಗಳಲ್ಲಿ 188 ರನ್ ಗಳಿಸಿ ಆಲ್ ಔಟ್ ಆದರೆ,  ಇದಕ್ಕುತ್ತರವಾಗಿ ಟೆಸ್ಕೊ 7 ವಿಕೆಟ್ ನಷ್ಟಕ್ಕೆ 183 ರನ್ ಮಾತ್ರ ಗಳಿಸುವಲ್ಲಿ ಶಕ್ತವಾಯಿತು.  DXC ಟೆಕ್ನಾಲಜಿಯ ಬೌಲರ್  ಸಚಿನ್ ಮಹಾದೇವ್ ,ಅಕ್ಷಯ್ ಕುಮಾರ್ ಎಂ  ತಲಾ 3 ವಿಕೆಟ್ ಪಡಕೊಂಡರು. ಹೀಗಾಗಿ DXC ಟೆಕ್ನಾಲಜಿ  5 ರನ್ ಗಳಿಂದ ಜಯಗಳಿಸಿತು. ಸೋಮಶೇಖರ ಸಾರಥ್ಯದ, ಶಿವಕುಮಾರ್ ನೇತೃತ್ವದ  DXC ಟೆಕ್ನಾಲಜಿ ತಂಡ INFY ಸಮರ್ಪನ್ ಕಪ್ 2023ರ ಚಾಂಪಿಯನ್ ಆದರು.
DXC ಟೆಕ್ನಾಲಜಿ ಪರವಾಗಿ ಜಿತೇಂದ್ರ VN 43 ಎಸೆತಗಳಲ್ಲಿ 60 ರನ್ ಗಳಿಸಿ ಫೈನಲ್ ಪಂದ್ಯದ ಶ್ರೇಷ್ಠ ಆಟಗಾರರಾದರು. DXC ಟೆಕ್ನಾಲಜಿಯ ಅರುಣ್ ತಿನಗರನ್  ಪ್ಲೇಯರ್ ಆ ದಿ ಸೀರೀಸ್ ಪ್ರಶಸ್ತಿಯನ್ನು ಪಡಕೊಂಡರೆ, ಶ್ರೀಕಾಂತ್ ( ANZ   ) ಅತ್ಯುತ್ತಮ ಬೌಲರ್ ಆದರು. ಶಿವರಾಜ್ ( ANZ)  ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ  ಆಯ್ಕೆಯಾದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

five − 2 =