ಈ ಕಣ್ಣೀರು ಸಾವಿರ ಅಕ್ಷರಗಳಿಗೆ ಸಮ.. ಶಬ್ದಗಳಲ್ಲಿ ಹೇಳಲಾಗದ, ಪದಗಳಲ್ಲಿ ವರ್ಣಿಸಲಾಗದ್ದನ್ನು ಈ ತಂದೆಯ ಒಂದು ಕಣ್ಣೀರು ಹೇಳುತ್ತಿದೆ.
ರಾಜ್’ಕೋಟ್’ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮುಂಬೈ ಹುಡುಗ ಸರ್ಫರಾಜ್ ಖಾನ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಕೈಯಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸುತ್ತಾ ಇದ್ರೆ, ಅಲ್ಲೇ ಸ್ವಲ್ಪ ದೂರದಲ್ಲಿ ನಿಂತಿದ್ದ ತಂದೆಯ ಕಣ್ಣಲ್ಲಿ ಕಣ್ಣೀರು ಹರಿಯುತ್ತಿತ್ತು.
ಉತ್ತರ ಪ್ರದೇಶದಿಂದ ಮುಂಬೈಗೆ ಬಂದು ಅಲ್ಲೇ ಬದುಕು ಕಟ್ಟಿಕೊಂಡಿದ್ದ ನೌಶಾದ್ ಖಾನ್, ತಮ್ಮ ಇಬ್ಬರೂ ಮಕ್ಕಳನ್ನು ಕ್ರಿಕೆಟ್ ಆಟಗಾರರನ್ನಾಗಿಸುವ ಕನಸು ಕಂಡವರು. ಸ್ವತಃ ಕ್ರಿಕೆಟ್ ಕೋಚ್. ಮಕ್ಕಳಿಗೆ ಅವರೇ ಗುರು.
ಸರ್ಫರಾಜ್ ಖಾನ್ ಹಿರಿಮಗ.. ಸಣ್ಣವನು ಮೊನ್ನೆ ಮೊನ್ನೆಯಷ್ಟೇ ಅಂಡರ್-19 ವಿಶ್ವಕಪ್’ನಲ್ಲಿ ಆಡಿದ ಮುಶೀರ್ ಖಾನ್. ಇಬ್ಬರೂ ಪ್ರತಿಭಾಸಂಪನ್ನರು. ಈ ಸರ್ಫರಾಜ್ ಖಾನ್ ತನ್ನ 11ನೇ ವರ್ಷದಲ್ಲೇ ಸಚಿನ್ ತೆಂಡೂಲ್ಕರ್ ಅವರ ಶಾಲಾ ದಾಖಲೆಯೊಂದನ್ನು ಪುಡಿಗಟ್ಟಿದ್ದ ಪ್ರತಿಭೆ. ಶಾಲಾ ಟೂರ್ನಿಯ ಪಂದ್ಯವೊಂದರ ಒಂದೇ ಇನ್ನಿಂಗ್ಸ್’ನಲ್ಲಿ 439 ರನ್ ಗಳಿಸಿ ಸುದ್ದಿಯಾಗಿದ್ದ ಸರ್ಫರಾಜ್, 15ನೇ ವಯಸ್ಸಲ್ಲೇ ಮುಂಬೈ ಪರ ರಣಜಿ ಪಂದ್ಯವಾಡಿದ್ದ.
ಹುಡುಗರಲ್ಲಿ ಟ್ಯಾಲೆಂಟ್ ಇದೆ ಅಂದ್ರೆ ಸಾಕು, ಅವಕಾಶ ನೀಡೋದ್ರಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ಸದಾ ಮುಂದು. ವಯಸ್ಸು, ಅನುಭವದ ಹಂಗಿಲ್ಲದೆ ರಣಜಿ ಪಂದ್ಯಗಳಲ್ಲೇ ಅಲ್ಲಿ ಅವಕಾಶ ನೀಡ್ತಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿ ಅಂಥಾ ಒಂದು ಸಂಪ್ರದಾಯ ಇರೋದ್ರಿಂದ್ಲೇ ಕ್ರಿಕೆಟ್ ಜಗತ್ತಲ್ಲಿ ಸಚಿನ್ ತೆಂಡೂಲ್ಕರ್ ಅವರಂಥಾ ದಿಗ್ಗಜ ಹುಟ್ಟಿದ್ದು.
ಸರ್ಫರಾಜ್ ಖಾನ್ ಮುಂಬೈನಿಂದ ಬಂದ ದೈತ್ಯ ಪ್ರತಿಭೆಗಳಲ್ಲಿ ಒಬ್ಬ. ರಣಜಿ ಟ್ರೋಫಿಯಲ್ಲಿ ರನ್ ಹೊಳೆಯನ್ನೇ ಹರಿಸಿ ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾದು ಕೂತಿದ್ದಾಗ ಅವಕಾಶ ಸಿಕ್ಕಿರಲಿಲ್ಲ. ಹುಡುಗ ಹತಾಶನಾಗಿದ್ದ, ಟ್ರ್ಯಾಕ್ ತಪ್ಪಿದ್ದ. ಆದ್ರೆ ತಂದೆ ನೌಶಾದ್ ಖಾನ್ ದೃಢವಾಗಿ ನಿಂತು ಬಿಟ್ಟಿದ್ರು. ಅವ್ರಿಗೆ ಗೊತ್ತಿತ್ತು, ಮಗನಿಗೆ ಅವಕಾಶ ಬಂದೇ ಬರಲಿದೆ ಎಂದು.
ಸಣ್ಣವಿದ್ದಾಗಲೇ age fraudನ ಆರೋಪಕ್ಕೆ ಗುರಿಯಾಗಿದ್ದ ಹುಡುಗ, ಅಶಿಸ್ತಿನ ನಡವಳಿಕೆಯಿಂದ ಸುದ್ದಿಯಾಗಿದ್ದ ಹುಡುಗ. “ದಪ್ಪಗಿದ್ದಾನೆ, ಇವನೇನು ಆಡಿಯಾನು” ಎಂದು ಮೂದಲಿಸಿದವರೂ ಇದ್ದಾರೆ. ಹೀಗೇ ಇದ್ರೆ, ಇವನು ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ಮರೆತು ಬಿಡಬೇಕೆಂದು ಸುನಿಲ್ ಗವಾಸ್ಕರ್ ಅವರೇ ಒಮ್ಮೆ ಹೇಳಿದ್ದಿದೆ.
ಸರ್ಫರಾಜ್ ಖಾನ್ ಎಲ್ಲಾ hurdleಗಳನ್ನು ದಾಟಿ, ಭಾರತ ಪರ ಟೆಸ್ಟ್ ಆಡಿಯೇ ಬಿಟ್ಟಿದ್ದಾನೆ. ಟೆಸ್ಟ್ debutನಲ್ಲೇ ಅರ್ಧಶತಕ. ಟೆಸ್ಟ್ ಕ್ಯಾಪ್ ಪಡೆದಾಗ ಆನಂದಭಾಷ್ಪ ಸುರಿಸಿದ್ದ ಆ ತಂದೆಗೆ ಡಬಲ್ ಸಂಭ್ರಮ.
Well done #SarfarazKhan