ಶೆಫ್-ಟಾಕ್ ಫುಡ್&ಹಾಸ್ಪಿಟಾಲಿಟಿ ಸರ್ವೀಸಸ್ ಪ್ರೈ ಲಿಮಿಟೆಡ್ ಆಡಳಿತ ನಿರ್ದೇಶಕರು,ಕೊಡುಗೈ ದಾನಿ ಡಾ.ಗೋವಿಂದ ಬಾಬು ಪೂಜಾರಿ ಇವರ ಒಡೆತನದ ಪ್ರಗ್ನ್ಯಾ ಸಾಗರ್ ಹೋಟೆಲ್ (ಶುದ್ಧ ಸಸ್ಯಾಹಾರಿ) ಇಂದು ಮಲೆಮಹದೇಶ್ವರ ಬೆಟ್ಟದ ಸಂಕಮ್ಮ ನಿಲಯ ಮತ್ತು ಚಂಡಿ ಬಸವೇಶ್ವರ ದೇವಸ್ಥಾನದ ಬಳಿ ಶುಭಾರಂಭವಾಯಿತು.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಲೆ ಮಹದೇಶ್ವರ ಬೆಟ್ಟದ ಪೂಜ್ಯನೀಯ ಶ್ರೀ ಕರವೀರ ಸ್ವಾಮೀಜಿಯವರ
ದಿವ್ಯ ಸಾನ್ನಿಧ್ಯ ಮತ್ತು ಶ್ರೀಗಳ ಅಮೃತಹಸ್ತದಿಂದ ಉದ್ಘಾಟನೆ ನೆರವೇರಿತು ಮತ್ತು ಇನ್ನೊಂದು ರೆಸ್ಟೋರೆಂಟ್ ನ್ನು ಉಪ್ಪುಂದ ಜೈನ ಯಕ್ಷೇಶ್ವರಿ ಮತ್ತು ಶನಿ ದೇವಸ್ಥಾನದ ವಿಜಯ ಪೂಜಾರಿ
ಉದ್ಘಾಟಿಸಿದರು.
ಶ್ರೀಯುತ ಡಾ.ಗೋವಿಂದ ಬಾಬು ಪೂಜಾರಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು ಉದ್ಘಾಟನಾ ಸಮಾರಂಭದ ಅಂಗವಾಗಿ ವಿಶೇಷ ಪೂಜೆ,ಹೋಮ ನಡೆಸಲಾಯಿತು…