ಗಂಗೊಳ್ಳಿ ಆ.15 : ಕುಂದಾಪುರ ತಾಲೂಕಿನ ಹೊಸಾಡು ಭಗತ್ ನಗರದಲ್ಲಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಲ್ಕನೇ ನೂತನ ಮನೆ ಹಸ್ತಾಂತರ ಸಮಾರಂಭ ಭಾನುವಾರ ನಡೆಯಿತು.
ಉದ್ಯಮಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪ್ರಜಾರಿ ಅವರ ತಂದೆ ತಾಯಿ ಬಾಬು ಪೂಜಾರಿ ಹಾಗೂ ಮಂಜಮ್ಮ ಪೂಜಾರಿ ದಂಪತಿಗಳು ನೂತನ ಗೃಹವನ್ನು ಉದ್ಘಾಟಿಸಿದರು. ಗೋವಿಂದ ಬಾಬು ಪೂಜಾರಿ ಅವರು ಪುಷ್ಪಾ ಉಲ್ಲಾಸ್ ದಂಪತಿಗಳಿಗೆ ಮನೆಯ ಬಿಗದ ಕೈ ಹಸ್ತಾಂತರಿಸಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ, ಟ್ರಸ್ಟಿನ ಮೂಲಕ ನಿರ್ಮಿಸಲಾಗಿರುವ ನಾಲ್ಕನೇ ಮನೆ ಇದ್ದಾಗಿದ್ದು, ಇನ್ನು ಒಂದು ಮನೆ ಕಾಳಾವಾರದಲ್ಲಿ ನಿರ್ಮಾಣ ಹಂತದಲ್ಲಿದೆ, ಅಕ್ಟೋಬರ್ 2ರಂದು ಆ ಮನೆಯ ಉದ್ಘಾಟನೆಗೊಳ್ಳಿಲಿದೆ ಎಂದರು.
ಗೋವಿಂದ ಬಾಬು ಪೂಜಾರಿ ಅವರಿಗೆ ಸೇವಾ ಸಂಕಲ್ಪ ಗಂಗೊಳ್ಳಿ ತಂಡದಿಂದ ಹಾಗೂ ಪುಷ್ಪಾ ಉಲ್ಲಾಸ್ ದಂಪತಿಗಳು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೇವಾ ಸಂಕಲ್ಪ ಗಂಗೊಳ್ಳಿ ಇದರ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ, ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಾಹಣಾಧೀಕಾರಿ ಸುಧಾಕರ ಪೂಜಾರಿ, ಮೊದಲಾದವರು ಇದ್ದರು.