ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ವಸ್ತುಗಳು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ದೇವಿ ಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ಮುನಿಯಾಲು. ಇದರ ಹಿರಿಯಡಕ ಶಾಖೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ದಿನಾಂಕ 1-3-2020 ರವಿವಾರ ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜು ಎದುರು ಕೀರ್ತಿ ಕಾಂಪ್ಲೆಕ್ಸ್ ನಲ್ಲಿ “ಸ್ಮರಣಿಕಾ” “ವಸ್ತ್ರ” ಮತ್ತು “ಸ್ಪೋರ್ಟ್ಸ್ ಗ್ಯಾಲರಿ” ಈ ಮೂರು ನಾಮಾಂಕಿತದೊಂದಿಗೆ ಏಕ ಕಾಲದಲ್ಲಿ ಈ ಮೂರು ಶಾಖೆಗಳ ಉದ್ಘಾಟನೆ ಬೆಳಗ್ಗೆ 10 ಗಂಟೆಗೆ ಶ್ರೀ ಶ್ರೀ ಶ್ರೀ ಈಶ ವಿಠ್ಠಲ ದಾಸ ಸ್ವಾಮೀಜಿ, ಶ್ರೀ ಸಾಂದೀಪನಿ ಸೇವಾಶ್ರಮ ಕೇಮಾರು ಮಠ ಕಾರ್ಕಳ ಇವರ ಆಶೀರ್ವಚನದೊಂದಿಗೆ ಶ್ರೀ. ಲಾಲಾಜಿ ಮೆಂಡನ್ ಇವರಿಂದ ಉದ್ಘಾಟನೆಗೊಳ್ಳಲಿದೆ.
ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಸಭಾ ಕಾರ್ಯಕ್ರಮ ಸಾಯಂಕಾಲ 5 ಗಂಟೆಗೆ ಆರಂಭಗೊಳ್ಳಲಿದು ಮುಖ್ಯ ಅತಿಥಿಗಳಾಗಿ ಶ್ರೀ ಮುನಿಯಾಲು ಉದಯ ಶೆಟ್ಟಿ. ಉದ್ಯಮಿಗಳು ಮತ್ತು ಅಧ್ಯಕ್ಷರು ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್, ಶ್ರೀ ವಿಷ್ಣುವರ್ಧನ ಐಪಿಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಶ್ರೀ ಶಿವಕುಮಾರ್ ಕರ್ಜೆ ಸ್ಥಾಪಕರು ಸರ್ವ ಕಾಲೇಜ್ ವಿದ್ಯಾರ್ಥಿ ಶಕ್ತಿ (ರಿ) , ಕರ್ನಾಟಕ, ಶ್ರೀ ಉಮೇಶ್ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಬೊಮ್ಮಾರಬೆಟ್ಟು, ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷರು ಭಾರತೀಯ ಜನತಾ ಪಕ್ಷ ಉಡುಪಿ ಜಿಲ್ಲೆ, ಶ್ರೀ ಅರುಣ್ ಜತ್ತನ್ ಮಾಲೀಕರು ಕೀರ್ತಿ ಕಾಂಪ್ಲೆಕ್ಸ್, ಶ್ರೀಮತಿ ಸವಿತಾ ನಾಯಕ್ ಅಧ್ಯಕ್ಷರು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್, ಶ್ರೀ ಸುಧಾಕರ ಠಾಣಾಧಿಕಾರಿ ಆರಕ್ಷಕ ಠಾಣೆ ಹಿರಿಯಡ್ಕ, ಶ್ರೀ ಹರೀಶ್ ಸಾಲಿಯಾನ್ ಉಪಾಧ್ಯಕ್ಷರು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್, ಶ್ರೀ ರತ್ನಾಕರ ದೇವಾಡಿಗ ಉದ್ಯಮಿಗಳು ಹಿರಿಯಡ್ಕ. ಈ ಎಲ್ಲಾ ಮಹನೀಯರ ಗಣ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಂಕುಲು ಫ್ರೆಂಡ್ಸ್ ಕಲಾವಿದರು ಹಿರಿಯಡಕ ಇವರಿಂದ ತುಳು ಹಾಸ್ಯಮಯ ನಾಟಕ “ನಂಬುಲೆಕ್ಕ ಇಜ್ಜೆರ್” ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೀತಿಯಿಂದ ಸ್ವಾಗತ ಬಯಸುವವರು
ನಯನ ಕುಮಾರ್ ಜೋಗಿ. ಮುನಿಯಾಲು, ನಯನ ಟ್ರೇಡಿಂಗ್ ಕಂಪೆನಿ ಮುನಿಯಾಲು.
ಕಾರ್ಯಕ್ರಮಕ್ಕೆ ಶುಭ ಕೋರುವ:
ಕೆ. ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣ, ಉಡುಪಿ.