ಕ್ರೀಡೆಯ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ,ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಮೂರು ದಶಕಗಳಿಂದ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಅನುಭವಿ ವೀಕ್ಷಕ ವಿವರಣೆಕಾರ ಹಾಗೂ ಅಂಪಾಯರ್ ಕೋಟ ಶಿವನಾರಾಯಣ ಐತಾಳ್ ರವರು ಸ್ಥಾಪಿಸಿದ್ದ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದ್ದರು.
ಜಿಲ್ಲಾ ಮಟ್ಟದ ಡಬಲ್ ವಿಕೆಟ್ ಪಂದ್ಯಾವಳಿ ಮೊತ್ತ ಮೊದಲ ಬಾರಿಗೆ ಸಂಘಟಿಸಿದ್ದು,
ಟೊರ್ಪೆಡೋಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಪ್ರಥಮ ಸ್ಥಾನಗಳಿಸಿದ್ದು,ಇಲೆವೆನ್ ಅಪ್ ಕೋಟ ತಂಡದ ಪದ್ಮನಾಭ ಆಚಾರ್ ಹಾಗೂ ಮಿಥುನ್ ಹಂದೆ ದ್ವಿತೀಯ ಬಹುಮಾನ ಗಳಿಸಿರುವುದು
ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.ಅಂತೆಯೇ ಒಂದು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ,2 ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಹಾಗೂ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಬೆಳ್ಳಿಹಬ್ಬವನ್ನು ಆಚರಿಸಿದೆ.
ಹಲವಾರು ಟಿ.ವಿ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಕ್ರಿಕೆಟ್ ವಿಶ್ಲೇಷಕರ ಜೊತೆ ಅಂತರಾಷ್ಟ್ರೀಯ ಪಂದ್ಯಗಳ ವಿಶ್ಲೇಷಣೆ ನಡೆಸಿದ ಅನುಭವ ಹೊಂದಿರುವ ಶಿವನಾರಾಯಣ ಐತಾಳರು ಈ ಸಂಸ್ಥೆಯಿಂದ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು,ಹಿರಿಯ ಹಾಗೂ ಕಿರಿಯ ಕ್ರೀಡಾಲೋಕದ ಸಾಧಕರು,ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಅವರಿದ್ದಲ್ಲಿಗೇ ತೆರಳಿ ಸಂದರ್ಶನ ನಡೆಸಿ ಪ್ರಸಾರಗೊಳಿಸುವ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಿದ್ದಾರೆ.