ವಿಶ್ವಕಪ್ ಟೂರ್ನಿಯ ಅಸಲಿ ಆಟ ಶುರುವಾಗುವ ಮೊದಲು ಟೀಂ ಇಂಡಿಯಾಗೆ ಶುಭಸೂಚನೆ ಸಿಕ್ಕಿದೆ.ತಂಡದ ಚಿಂತೆ ಹೆಚ್ಚಿಸಿದ್ದ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ದೊರತಿದೆ. ಹೌದು, ಬಾಂಗ್ಲಾದೇಶದ ವಿರುದ್ಧ ನಿನ್ನೆ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಮಾಜಿ ಕ್ಯಾಪ್ಟನ್ ಧೋನಿ, ಕನ್ನಡಿಗ ಕೆ.ಎಲ್ ರಾಹುಲ್ ಮಧ್ಯಮ ಕ್ರಮಾಂಕದದಲ್ಲಿ ತಂಡಕ್ಕೆ ಆಸರೆಯಾದ್ರು. ಇಬ್ಬರು ಶತಕ ಸಿಡಿಸುವ ಮೂಲಕ ಮಿಂಚಿದ್ರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ರಾಹುಲ್,ನಿಧಾನವಾಗಿ ರನ್ಕಲೆಹಾಕುತ್ತಾ ಇನ್ನಿಂಗ್ಸ್ ಬಿಲ್ಡ್ ಮಾಡಿದ್ರು. ಕ್ಲಾಸ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರು.99 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗು 12 ಬೌಂಡರಿಗಳ ಮೂಲಕ 108 ರನ್ ಬಾರಿಸಿದ್ರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಧೋನಿ, ರಾಹುಲ್ಗೆ ಉತ್ತಮ ಸಾಥ್ ನೀಡಿದ್ರು.ಆರಂಭದಿಂದಲೇ ಬಾಂಗ್ಲಾ ಬೌಲರ್ಗಳ ಮೇಲೆ ದಾಳಿಗಿಳಿದ್ರು. ವೇಗದ ಆಟದ ಮೂಲಕ ತಂಡದ ಸ್ಕೋರ್ ಹಿಗ್ಗಿಸಿದ್ರು. ರಾಹುಲ್-ಧೋನಿಜೊತೆಗೂಡಿ 5ನೇ ವಿಕೆಟ್ಗೆ 164ರನ್ಗಳ ಜೊತೆಯಾಟವಾಡಿದ್ರು. ತಮ್ಮಹಳೆಯ ಶೈಲಿಯಲ್ಲಿ ಬ್ಯಾಟ್ ಬೀಸಿದ ಧೋನಿ ಆರ್ಭಟಿಸಿದ್ರು. ಕೇವಲ 78 ಎಸೆತಗಳಲ್ಲಿ 8 ಫೋರ್ ಹಾಗು 7 ಸಿಕ್ಸರ್ ನೆರವಿನಿಂದ 113 ರನ್ ಸಿಡಿಸಿದ್ರು. ಈ ಇಬ್ಬರ ಶತಕದಾಟದಿಂದಾಗಿ ಟೀಂ ಇಂಡಿಯಾ, 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ದಾಖಲಿಸಲು ಸಾಧ್ಯವಾಯ್ತು. ಅಲ್ಲದೇ 95 ರನ್ಗಳಿಂದ ಪಂದ್ಯ ಗೆದ್ದುಕೊಂಡಿತು. ಒಟ್ಟಿನಲ್ಲಿ ಟೀಂ ಮ್ಯಾನೇಜ್ಮೆಂಟ್ಗೆ ಸಿಕ್ಕಾಪಟ್ಟೆ ತಲೆನೋವಾಗಿದ್ದ ನಂ.4 ಸ್ಲಾಟ್ನಲ್ಲಿ ರಾಹುಲ್ ಸಕ್ಸಸ್ ಕಂಡಿದ್ದಾರೆ. ಇದರೊಂದಿಗೆ ತಾವು ಈ ಸ್ಥಾನ ತುಂಬಲು ಅರ್ಹರು ಎಂಬುದನ್ನು ಪ್ರೂ ಮಾಡಿದ್ದಾರೆ. ಕೆಳಕ್ರಮಾಂಕದಲ್ಲಿ ನಾನು ಫಿನಿಶರ್ ರೋಲ್ ನಿಭಾಯಿಸಲು ನಾನು ರೆಡಿಯಾಗಿದ್ದೇನೆ ಎಂದು ಧೋನಿ ನಿರೂಪಿಸಿದ್ದಾರೆ.