ಹೊಸನಗರ ಬ್ರದರ್ಸ್ ಇವರ ಆಶ್ರಯದಲ್ಲಿ ಜನವರಿ 9,10 ರಂದು ಹೊಸನಗರದ ನೆಹರೂ ಮೈದಾನದಲ್ಲಿ 2 ದಿನಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ “ಹೊಸನಗರ ಫ್ರೆಂಡ್ಸ್ ಟ್ರೋಫಿ-2021” ಆಯೋಜಿಸಲಾಗಿದೆ.
ರಾಜ್ಯದ ಒಟ್ಟು 34 ತಂಡಗಳು ಭಾಗವಹಿಸುವ ಈ ಟೂರ್ನಮೆಂಟ್ ನ ಪ್ರಥಮ ಪ್ರಶಸ್ತಿ ವಿಜೇತ ತಂಡ 1,23,456 ನಗದು,ದ್ವಿತೀಯ ಸ್ಥಾನಿ 56,789 ನಗದು,ಸೆಮಿಫೈನಲ್ ಪರಾಜಿತ ತಂಡಗಳು 15,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾಕೂಟದ ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ,ವೀಕ್ಷಕ ವಿವರಣೆಯಲ್ಲಿ ಕರ್ನಾಟಕ ಕಲ್ಯಾಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಪ್ರಶಾಂತ್ ಅಂಬಲಪಾಡಿ, ಹಿರಿಯ ವೀಕ್ಷಕ ವಿವರಣೆಕಾರ ವಿನಯ್ ಉದ್ಯಾವರ ಹಾಗೂ ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ,ಪ್ರಶಾಂತ್ ಗೋಪಾಡಿ ಭಾಗವಹಿಸಲಿದ್ದಾರೆ..