ಬೆಂಗಳೂರು-ಪೀಣ್ಯದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ದಿನವಾದ ಇಂದು ಅಚ್ಚರಿಯ ಫಲಿತಾಂಶವೊಂದು ಹೊರಬಿದ್ದಿದೆ.
ಹಲವಾರು ಯುವ ಪ್ರತಿಭೆಗಳನ್ನು ರಾಜ್ಯಕ್ಕೆ ಪರಿಚಯಿಸಿದ ಹಿಂದುಸ್ತಾನ್ ಬೆಂಗಳೂರು,ರಾಜ್ಯದ ಬಲಿಷ್ಠ ತಂಡ ಎ.ಕೆ.ಉಡುಪಿಯನ್ನು ಸೋಲಿಸಿ ನಿರ್ಣಾಯಕ ಸುತ್ತನ್ನು ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಹಿಂದುಸ್ತಾನ್ ಬೆಂಗಳೂರು ಪ್ರದೀಪ್ 23 ಮತ್ತು ಪವನ್ 17 ರನ್ ನೆರವಿನಿಂದ 8 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಸವಾಲಿನ ಮೊತ್ತ ಕಲೆ ಹಾಕಿತ್ತು.
ಸವಾಲಿನ ಗುರಿ ಚೇಸಿಂಗ್ ವೇಳೆ ಆರಂಭಿಕ ಹಂತದಲ್ಲೇ ಲಗುಬಗನೆ ವಿಕೆಟ್ ಕಳೆದುಕೊಂಡ ಎ.ಕೆ.ಉಡುಪಿ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 52 ರನ್ ಗಳಷ್ಟೇ ಕಲೆ ಹಾಕಿ 5 ರನ್ ಅಂತರದಿಂದ ಸೋಲೊಪ್ಪಿಕೊಂಡಿತು