ಹೆಬ್ರಿ : ಹೆಬ್ರಿಯ ಚೈತನ್ಯ ಯುವ ವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಹೆಬ್ರಿ ಮಾದರಿ ಶಾಲಾ ಮೈದಾನದಲ್ಲಿ ಎರಡು ದಿನ ನಡೆದ ಅವಿಭಜಿತ ಹೆಬ್ರಿ ಕಾರ್ಕಳ ತಾಲ್ಲೂಕು ಮಟ್ಟದ ಟೆನ್ನಿಸ್‌ಬಾಲ್ ಅಂಡರ್ ಆರ್ಮ್ ಪುಲ್‌ಗ್ರೌಂಡ್ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ ೨೦೨೨ -ಪಂದ್ಯಾಟದಲ್ಲಿ ಮುದ್ರಾಡಿಯ ರಾಯಲ್ಸ್ ಸ್ಟೈಕರ್ಸ್ ತಂಡ ಪ್ರಥಮ ಬಹುಮಾನ ಪಡೆಯಿತು.ಹೆಬ್ರಿ ಮದಗದ ಅಗಸ್ತ್ಯ ದ್ವಿತೀಯ ಮತ್ತು ವರಂಗ ಕ್ರಿಕೆಟರ್ಸ್ ತೃತೀಯ ಬಹುಮಾನ ಪಡೆಯಿತು.
ಹೆಬ್ರಿಯ ಚೈತನ್ಯ ಯುವ ವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್, ಗೌರವಾಧ್ಯಕ್ಷ ಎಚ್.ಜನಾರ್ಧನ್, ಪ್ರಧಾನ ಕಾರ್ಯದರ್ಶಿ ರಾಜೇಶ ಆಚಾರ್ಯ, ಸ್ಥಾಪಕಾಧ್ಯಕ್ಷ ಪ್ರಕಾಶ ಮಲ್ಯ, ಹಿರಿಯ ಪ್ರಮುಖರಾದ ಉಮೇಶ ನಾಯಕ್, ವಸಂತ ಶೆಟ್ಟಿ, ರವೀಂದ್ರನಾಥ ಬಲ್ಲಾಳ್, ನರೇಂದ್ರ ನಾಯಕ್, ದಿವಾಕರ ಶೆಟ್ಟಿ, ಶಂಕರ ಸೇರಿಗಾರ್, ಮುದ್ದು ಪೂಜಾರಿ, ಯುವ ವೃಂದದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಕ್ರೀಡಾ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು. ಪ್ರಸಾದ ಶೆಟ್ಟಿ ನಿರೂಪಿಸಿ ಸ್ವಾಗತಿಸಿ ವಂದಿಸಿದರು.